ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ

0
936

ಪ್ರತಿ ವರ್ಷ ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಾಜಕ್ಕೆ ಹಿರಿಯ ನಾಗರಿಕರು ನೀಡಿರುವ ಕೊಡುಗೆ ಸ್ಮರಣಾರ್ಥ ಮತ್ತು ಹಿರಿಯ ನಾಗರಿಕರ ಸಮಸ್ಯೆ ಮತ್ತು ಅಗತ್ಯತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಸಮಾಜವನ್ನು ಹಿರಿಯ ನಾಗರಿಕರ ಸ್ನೇಹಿಯನ್ನಾಗಿಸಲು ಈ ದಿನವನ್ನು ಮೀಸಲಿರಿಸಲಾಗಿದೆ.

ನಮ್ಮ ದೇಶವು ಜನಸಂಖ್ಯಾ ವಿದ್ಯಾಮಾನದ ಬದಲಾವಣೆಯಲ್ಲಿದೆ. ಇತರೆ ಅನೇಕ ಅಭಿವೃದ್ಧಿ ರಾಷ್ಟ್ರಗಳಂತೆ ಯುವಪೀಳಿಗೆ ನಿಧಾನವಾಗಿ ಹಿರಿಯ ನಾಗರಿಕರಾಗಿ ಬದಲಾವಣೆಯಾಗುತ್ತಿದೆ. 2011ರ ಜನಗಣಿತ ಪ್ರಕಾರ, ಭಾರತದಲ್ಲಿ ಸುಮಾರು 104 ದಶಲಕ್ಷ ಹಿರಿಯ ನಾಗರಿಕರು(60 ವರ್ಷ ಮೇಲ್ಪಟ್ಟವರು) ಇದ್ದಾರೆ. 53 ದಶಲಕ್ಷ ಮಹಿಳೆಯರು ಮತ್ತು 51 ದಶಲಕ್ಷ ಪುರುಷರಿದ್ದಾರೆ. 1961ರಲ್ಲಿನ ಶೇ.5.6 ಅನುಪಾತವು 2011ರಲ್ಲಿ ಶೇ.8.2ಕ್ಕೆ ಏರಿಕೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಶೇ.71 ಹಿರಿಯ ನಾಗರಿಕರಿದ್ದರೆ, ನಗರ ಪ್ರದೇಶದಲ್ಲಿ ಶೇ. 29ರಷ್ಟಿದ್ದಾರೆ. 1961ರಲ್ಲಿನ ಹಿರಿಯ ನಾಗರಿಕ ಅಲವಂಬನೆಯು 2011ರಲ್ಲಿ ಶೇ.14.2ಕ್ಕೆ ಏರಿಕೆಯಾಗಿದೆ. ಕೇವಲ 20 ವರ್ಷಗಳ ಅಲ್ಪಾವಧಿಯಲ್ಲಿ ಹಿರಿಯ ನಾಗರಿಕ ಅವಲಂಬನೆಯು 2011ರ ಶೇ.14.2ರಿಂದ 2030ರವರೆಗೆ ಶೇ.19.3ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸುಸ್ಥಿರ ಹಾಗೂ ಸುಭದ್ರ ನಿವೃತ್ಥ ವೇತನವು ಸಮಾಜದ ಆದ್ಯತೆಗಳಲ್ಲಿ ಪ್ರಮುಖವಾಗಿದೆ.

ಭಾರತದಲ್ಲಿ ಒಟ್ಟು ಕೆಲಸ ಮಾಡುವ ಜನಸಂಖ್ಯೆಯ ಔಪಚಾರಿಕ ಪಿಂಚಣಿಯು ಕೇವಲ ಶೇ.12ರಷ್ಟಿದೆ. 2011-12ರ(68ನೇ ಸುತ್ತು) ಎನ್‍ಎಸ್‍ಎಸ್‍ಒ ಸರ್ವೇ ಪ್ರಕಾರ ಶೇ. 47.29 ಕೋಟಿ ಜನರು ಮಾತ್ರ ನೌಕರಿ ಮಾಡುತ್ತಿದ್ದಾರೆ. ಈ ಅಂಕಿಅಂಶವು ಭವಿಷ್ಯದ ಸವಾಲುಗಳು ಮತ್ತು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪಿಂಚಣಿ ಯೋಜನೆಗಳ ಅಳವಡಿಸಿಕೊಳ್ಳಲು ನಮ್ಮನ್ನು ನಿರ್ಧರಿಸುವಂತೆ ಬಲವಂತಪಡಿಸುತ್ತದೆ.

ವೃದ್ಧಾಪ್ಯವು ನೈಸಗರಿಕ ಕ್ರಿಯೆಯಾಗಿದೆ ಮತ್ತು ತಡೆಯಲಾಸಾಧ್ಯವಾದುದು. ಕುಟುಂಬದ ನಿರ್ವಹಣೆ ಮುಖ್ಯಸ್ಥ ಬದಲಾವಣೆ ಮತ್ತು ಕುಟುಂಬದ ಅಸಹಕಾರದ ಕಾರಣ ಹಿರಿಯ ನಾಗರಿಕರಿಗೆ ಸುಭದ್ರ ಮತ್ತು ಸುರಕ್ಷಿತ ವೃದ್ಧಾಪ್ಯವನ್ನು ನಮ್ಮ ಜನರಿಗೆ ನೀಡುವ ಉದ್ದೇಶದಿಂದ ಸೂಕ್ತ ಯೋಜನೆ ಮಧ್ಯಸ್ಥಿಕೆ ಹಾಗೂ ಸಾಕಷ್ಟು ನಿಬಂಧನೆಗಳ ಅಗತ್ಯತೆ ಇದೆ.

ಇಂದು ಇತರೆ ದೇಶಗಳಿಗೆ ಹೋಲಿಸಿದರೆ ಭಾರತವು ಅನುಕೂಲರ ಸ್ಥಾನದಲ್ಲಿದೆ. ದೇಶದಲ್ಲಿ ಯುವ ಕಾರ್ಯಪಡೆ ಇದ್ದು, ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಸಹಕಾರವಾಗಿದೆ. ಆದರೆ, ಜನಸಂಖ್ಯಾ ಬದಲಾವಣೆಯಿಂದ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸವಾಲುಗಳ ಎದುರಿಸುವಂತಾಗಿದೆ. ಆದ ಕಾರಣ ಹಿರಿಯ ಅಗತ್ಯತೆಯನ್ನು ಪೂರೈಸಲು ಬದಲಾವಣೆಯ ಅವಶ್ಯತೆ ಇದೆ. ಆರೋಗ್ಯ ರಕ್ಷಣೆಯತ್ತ ಗಂಭೀರವಾಗಿ ಗಮನಹರಿಸಬೇಕಿದೆ.

ವೃದ್ಧಾಪ್ಯ ಜನಸಂಖ್ಯಾ ಹೆಚ್ಚಳದಿಂದ ಕಾರ್ಯಪಡೆ ಜನಸಂಖ್ಯೆಯಲ್ಲಿಯೂ ಗಣನೀಯವಾಗಿ ಕುಸಿಯುತ್ತಿದ್ದು, ನಿವೃತ್ತ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಪ್ರಮುಖವಾಗಿ, ನಿವೃತ್ತಿ ಜೀವನ ನಡೆಸುವವರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದು ವ್ಯಾಖ್ಯಾನಿಸಲಾದ ಲಾಭ(ಡಿಬಿ) ಪಿಂಚಣಿ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಿರಿಯ ನಾಗರಿಕರಲ್ಲಿ ಬಡತನ ಕಡಿತಕ್ಕೆ ಮತ್ತು ವೃದ್ಧಾಪ್ಯದಲ್ಲಿ ಕುಟುಂಬದ ಆದಾಯಕ್ಕೆ ಕೊಡುಗೆ ನೀಡಲು ಪಿಂಚಣಿ ವ್ಯವಸ್ಥೆಗಳು ಬಹಳ ಪ್ರಮುಖ ಉಪಕರಣವಾಗಿದೆ.

ಸಾರ್ವಜನಿಕ ಪಿಂಚಣಿ ವ್ಯವಸ್ಥೆಗೆ ಬಲ ನೀಡುವ ನಿಟ್ಟಿನಲ್ಲಿ ಬಹುತೇಕ ದೇಶಗಳಲ್ಲಿ ಪಿಂಚಣಿ ಸುಧಾರಣೆಗಳನ್ನು ಆಯವ್ಯಯದಲ್ಲಿಯೇ ಬೆಂಬಲಿಸಲಾಗುತ್ತಿದೆ. ಭಾರತವು ಎಚ್ಚರಿಕೆ ಹೆಜ್ಜೆಯನ್ನಿಟ್ಟು, ವ್ಯಾಖ್ಯಾನಿಸಲಾದ ಲಾಭ(ಬಿಡಿ) ಸಾರ್ವಜನಿಕ ಪಿಂಚಣಿ ವ್ಯವಸ್ಥೆಯಿಂದ ನೂತನ ಪಿಂಚಣಿ ಯೋಜನೆ ಇದೀಗ ಮರುನಾಮಕರಣಗೊಳಿಸಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‍ಪಿಎಸ್)ಯನ್ನಾಗಿ ಮಾಡಿದೆ. ಕೇಂದ್ರೀಯ ಸರ್ಕಾರಿ ನೌಕರರಿಗೆ 2004ರ ಜನವರಿ 1ರಿಂದ ಎನ್‍ಪಿಎಸ್ ಜಾರಿಗೊಳಿಸಲಾಗಿದೆ. ತದನಂತರ 2009ರ ಮೇ ತಿಂಗಳಿನಿಂದ ಸ್ವಯಂಪ್ರೇರಿತ ಆಧಾರದ ಮೇರೆಗೆ ಅಸಂಘಟಿತ ಸೇರಿದಂತೆ ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಲಾಯಿತು. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ 2010ರ ಅಕ್ಟೋಬರ್‍ನಲ್ಲಿ ಸರ್ಕಾರವು ಎನ್‍ಪಿಎಸ್ ಲೈಟ್-ಸ್ವಾವಲಂಬನ್ ಯೋಜನೆಯನ್ನು ಜಾರಿಗೊಳಿಸಿದೆ. 2015ರ ಮೇ ತಿಂಗಳಿನಲ್ಲಿ ಅಟಲ್ ಪಿಂಚಣಿ ಯೋಜನೆ(ಎಪಿವೈ)ಯನ್ನು ಜಾರಿಗೊಳಿಸಲಾಯಿತು. ಅಸಂಘಟಿತ ಕ್ಷೇತ್ರ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಕನಿಷ್ಠ ಪಿಂಚಣಿ ಯೋಜನೆ ಜಾರಿ ಮಾಡಿತು.

2013ರಲ್ಲಿ ಪಿಎಫ್‍ಆರ್‍ಡಿಎ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅನುಷ್ಠಾನದಿಂದ ಸುಸ್ಥಿರ ಪಿಂಚಣಿ ವ್ಯವಸ್ಥೆ ಅಭಿವೃದ್ಧಿಯಲ್ಲಿ ವ್ಯವಸ್ಥಿತ ಸುಧಾರಣೆಯಾಗಿದೆ. ಈ ಮೂಲಕ ಪಿಂಚಣಿ ವ್ಯವಸ್ಥೆಗೆ ಎಲ್ಲಾ ವರ್ಗದವರನ್ನು ಒಳಪಡಿಸುವುದು ಸರ್ಕಾರದ ಉದ್ದೇಶವಾಗಿದೆ.

ಎನ್‍ಪಿಎಸ್ ವ್ಯವಸ್ಥೆಯ ಮೂಲಕ ಪಿಎಫ್‍ಆರ್‍ಡಿಎ ಅತೀ ಕಡಿಮೆ ಪಿಂಚಣಿ ಉತ್ಪನ್ನ ಮತ್ತು ತಾಂತ್ರಿಕತೆಗೆ ವೇದಿಕೆ ಪೂರೈಸಿದೆ. ಅಲ್ಲದೆ, ನಿಯತಕಾಲಿಕ ಪಾವತಿ ಹಾಗೂ ಕೊಡುಗೆ ಪ್ರಮಾಣದ ಸಡಿಲಿಕೆಯನ್ನು ಒದಗಿಸುತ್ತದೆ.

ಎನ್‍ಪಿಎಸ್ ಮತ್ತು ಎಪಿವೈ ಅಡಿ 2016ರ ಸೆಪ್ಟೆಂಬರ್ 17ರವರೆಗೆ 13.5 ದಶಲಕ್ಷ ಚಂದಾದಾರರಿದ್ದು, ಸುಮಾರು 1,48,016 ಕೋಟಿ ರೂ. ಸಂಗ್ರಹವಾಗಿದೆ. ಇದು ಬೃಹತ್ ಸಂಖ್ಯೆಯ ಜನರಿಗೆ ವೃದ್ಧಾಪ್ಯ ಆದಾಯ ಭದ್ರತೆ ಪೂರೈಕೆಯಾಗಲಿದ್ದು, ಆರ್ಥಿಕತೆಯ ಬಂಡವಾ ಮತ್ತು ಆರ್ಥಿಕ ಮಾರುಕಟ್ಟೆ ಅಭಿವೃದ್ಧಿಯನ್ನು ಪೂರೈಸುತ್ತದೆ.