ಅತ್ಯಾಚಾರಗೈದು ಪಾತ್ರೆಯಲ್ಲಿ ಬೇಯಿಸಿ ದೇವರ ಮನೆಯಲ್ಲಿಟ್ಟ

0
1540

ಇತ್ತೀಚಿನ ದಿನಗಳಲ್ಲಿ ಕಲ್ಪಿಸಲಾಗದ ವಿಕೃತವಾದ  ಘೋರಾತಿಘೋರ ಅಪರಾಧಗಳು ಬೆಳಕಿಗೆ ಬರುತ್ತಿವೆ. ಸೇಲಂಲ್ಲಿ ನಡೆದಿರುವ ಘಟನೆಯೊಂದು ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ. 6 ವರ್ಷದ ಪುಟ್ಟ ಬಾಲಕಿಯ ಮೃತದೇಹವೊಂದು ದೊಡ್ಡ ಪಾತ್ರೆಯಲ್ಲಿ ಬೆಂದ ಸ್ಥಿತಿಯಲ್ಲಿ 17 ವರ್ಷದ ಯುವಕನೊಬ್ಬನ ಮನೆಯಲ್ಲಿ ಪತ್ತೆಯಾಗಿದೆ.

ಆರೋಪಿ ಸಹ ಪೀಡಿತಳ ನೆರೆಮನೆಯ ನಿವಾಸಿಯಾಗಿದ್ದು ಸ್ಕೂಲ್ ಡ್ರಾಪ್ ಔಟ್ ಆಗಿದ್ದಾನೆ. 2ನೇತರಗತಿಯಲ್ಲಿ ಓದುತ್ತಿದ್ದ ಬಾಲಕಿಗೆ ಸಿಹಿತಿಂಡಿ ಕೊಡಿಸುವ ನೆಪದಲ್ಲಿ ಕರೆದೊಯ್ದ ಆತ ತನ್ನದೇ ಮನೆಯಲ್ಲಿ ಎಸಗಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆಗೈದು ಪಾತ್ರೆಯಲ್ಲಿ ಬೇಯಿಸಿ ದೇವರ ಮನೆಯಲ್ಲಿ ಮುಚ್ಚಿಟ್ಟ. ಶನಿವಾರ ಈ ಘಟನೆ ನಡೆದಿತ್ತು.

ಶನಿವಾರ ಸಂಜೆಯಿಂದ ಮಗಳಿಗಾಗಿ ಹುಡುಕಾಟ ನಡೆಸಿದ್ದ ತಂದೆಗೆ ನೆರೆಹೊರೆಯವರು ಯುವಕನೊಂದಿಗೆ ಹೋಗುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಆತ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾನೆ. ಪರಿಶೀಲನೆ ನಡೆಸಿದಾಗ ನಡೆದಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Source:webduniya