ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ. ರಾಜ್ಯದ 24 ಜಿಲ್ಲೆಗಳಿಗೆ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ.

0
1924

ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ. ರಾಜ್ಯದ 24 ಜಿಲ್ಲೆಗಳಿಗೆ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ.

ಶಾಲೆಗಳಿಗೆ ರಜೆ ನೀಡಿರುವ ಸಂಬಂಧ ಆಯಾ ಜಿಲ್ಲಾಧಿಕಾರಿಗಳು, ಶಿಕ್ಷಣಾಧಿಕಾರಿಗಳಿಗೆ ಸರ್ಕಾರಿ ಸುತ್ತೋಲೆ ಕಳುಹಿಸಲಾಗಿದೆ.

ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಹಿನ್ನಲೆ ಜಿಲ್ಲಾವಾರು ಲಭ್ಯ ಮಾಹಿತಿ ಅನುಸಾರ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳ ಘೋಷಣೆಯ ಮೇರೆಗ ರಜೆ ಈ ಕೆಳಗಿನಂತಿದೆ..

ದಕ್ಷಿಣ ಕನ್ನಡ:- ಸಾಕಷ್ಟು ಖಾಸಗಿ ಬಸ್ ವ್ಯವಸ್ಥೆ ಹಿನ್ನಲೆಯಲ್ಲಿ ನಾಳೆ ರಜೆ ಇಲ್ಲ-ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂಇಬ್ರಾಹಿಂ.

ಬೆಳಗಾವಿ:- ಒಂದು ದಿನ ಶಾಲಾ-ಕಾಲೇಜಿಗೆ ರಜೆ-ಜಿಲ್ಲಾಧಿಕಾರಿ ಎನ್.ಜಯರಾಮ್.

ಕೋಲಾರ:- ನಾಳೆ ಒಂದು ದಿನ ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ-ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ.

ಮಂಡ್ಯ:- ನಾಳೆ ಒಂದು ದಿನ ರಜೆ, ಮುಷ್ಕರ ನೋಡಿ ಮುಂದಿನ ನಿರ್ಧಾರ-ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್.

ಮೈಸೂರು:- ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ-ಜಿಲ್ಲಾಧಿಕಾರಿ ಸಿ.ಶಿಖಾ.

ರಾಮನಗರ:- ಎಲ್ಲಾ ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ-ಜಿಲ್ಲಾಧಿಕಾರಿ ಡಾ.ಬಿ.ಆರ್.ಮಮತ.

ಕೊಪ್ಪಳ:- ನಾಳೆ ಒಂದು ದಿನ ರಜೆ-ಜಿಲ್ಲಾಧಿಕಾರಿ ಎಂ.ಕನಗ.

ಕಲಬುರ್ಗಿ:- ಸೋಮವಾರ ಮತ್ತು ಮಂಗಳವಾರ ಎರಡು ದಿನಗಳು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ-ಜಿಲ್ಲಾಧಿಕಾರಿ ಗೋವಿಂದರೆಡ್ಡಿ.

ಹುಬ್ಬಳ್ಳಿಧಾರವಾಡ:- ಎರಡು ದಿನಗಳು ರಜೆ ಘೋಷಿಸಿದ ಡಿ.ಡಿ.ಪಿ.ಆರ್ ಗಂಗಪ್ಪ.

ಹಾಸನ:- ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಎಂದಿನಂತೆ ನಡೆಯಲಿವೆ. ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ.

ಚಿತ್ರದುರ್ಗ:-ಒಂದು ದಿನ ರಜೆ ಘೋಷಣೆ-ಜಿಲ್ಲಾಧಿಕಾರಿ ಶ್ರೀರಂಗಯ್ಯ.

ದಾವಣಗೆರೆ:-ಒಂದು ದಿನ ಶಾಲಾ-ಕಾಲೇಜುಗಳಿಗೆ ರಜೆ-ಜಿಲ್ಲಾಧಿಕಾರಿ ಡಿ.ಎಸ್.ಪ್ರಕಾಶ್.

ಚಿಕ್ಕಮಗಳೂರು:-ಒಂದು ದಿನ ರಜೆ-ಜಿಲ್ಲಾಧಿಕಾರಿ ಸತ್ಯವತಿ.

ರಾಯಚೂರು:- ಎರಡು ದಿನ ರಜೆ-ಜಿಲ್ಲಾಧಿಕಾರಿ.

ಬಳ್ಳಾರಿ:-ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಒಂದು ದಿನ ರಜೆ-ಜಿಲ್ಲಾಧಿಕಾರಿ ರಾಮ್ ಪ್ರಸಾದ್ ಮನೋಹರ್.

ವಿಜಯಪುರ:- ಒಂದು ದಿನ ರಜೆ ಘೋಷಣೆ ಜಿಲ್ಲಾಧಿಕಾರಿ ಡಿ.ರಣದೀಪ್.

ಬೀದರ್:- ಒಂದು ದಿನ ರಜೆ-ಜಿಲ್ಲಾಧಿಕಾರಿ ಅನುರಾಗ್ ತಿವಾರಿ.

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, ಮ್ಯಾಕ್ಸಿಕ್ಯಾಬ್‍ಗಳಿಗೆ ಎರಡು ದಿನಗಳ ಮಟ್ಟಿಗೆ ಪರವಾನಗಿ ನೀಡುವ ಸಾಧ್ಯತೆಯಿದೆ. ನಿಗಮದಲ್ಲಿ ಒಟ್ಟು 23 ಸಾವಿರ ಬಸ್‍ಗಳಿದ್ದು, 1.25 ಲಕ್ಷ ಸಿಬ್ಬಂದಿಗಳಿದ್ದಾರೆ. ಮುಷ್ಕರದಿಂದ ಜನ ಸಾಕಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ.