ಅಪನಗದೀಕರಣದ ಹಿಂದೆ ‘ಅನುತ್ಪಾದಕ ಆಸ್ತಿ’ ಎಂಬ ಪೆಡಂಭೂತ? ತೆರಿಗೆದಾರನಿಗೆ ಮಂಕುಬೂದಿ ಎರಚಿದರ ಪ್ರಧಾನಿಗಳು !

0
855

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರರಾದ ಶ್ರೀ ಕಪಿಲ್ ಸಿಬಲ್ ರವರು ಮೋದಿ ರವರ ‘ಅಪನಗದೀಕರಣ’ [Demonetization ] ನ ಹಿಂದಿರುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಬ್ಯಾಂಕ್ ನಲ್ಲಿ ಹಲವು ವರ್ಷಗಳಿಂದ ಕೊಳೆಯುತ್ತಿರುವ ‘ಅನುತ್ಪಾದಕ ಆಸ್ತಿಗಳನ್ನು’ [Non performing Assets] ನನ್ನು ‘write off’ ಮಾಡಲು ಈ ತಂತ್ರ ಹೂಡಲಾಗಿದೆಯೆಂದು ದೇಶದ ಪ್ರಖ್ಯಾತ ನ್ಯಾಯವಾದಿಯೂ ಆಗಿರುವ ಸನ್ಮಾನ್ಯ ಸಿಬಲ್-ರವರು ಹೇಳಿದ್ದಾರೆ. “ತೆರಿಗೆದಾರನ ಹಣದಿಂದ ಈ ಅನುತ್ಪಾದಕ ಆಸ್ತಿಗಳನ್ನು ರೈಟ್ ಆಫ್ ಮಾಡಲಾಗಿದೆ. ಇದು ಮೋದಿ ರವರ ಕಾರ್ಯ ತಂತ್ರ”.

ಇಲ್ಲಿಯವರೆಗೂ, ೩ ಲಕ್ಷ ಕೋಟಿಯಷ್ಟು ಹಣ ಬ್ಯಾಂಕ್ ಗಳಿಗೆ ಪಾವತಿಯಾಗಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡೇವಿಟ್ ನಲ್ಲಿ, ಕೇಂದ್ರ ಸರ್ಕಾರ ೩೦ ಡಿಸೆಂಬರ್, ೨೦೧೬ ಒಳಗೆ ಸುಮಾರು ೧೦ ಲಕ್ಷ ಕೋಟಿ [ಒಟ್ಟು ಹಣ] ಪಾವತಿಯಾಗಬಹುದೆಂದು ಮಾಹಿತಿ ನೀಡಿದೆ. ಆದರೆ, ಈಗ ೧೦ ಲಕ್ಷದಷ್ಟು ೫೦೦ ಮತ್ತು ೧,೦೦೦ ಮೌಲ್ಯದ ಕರೆನ್ಸಿ ನೋಟುಗಳು ಚಲಾವಣೆಯಲ್ಲಿದೆ.

ಆದ್ದರಿಂದ, ೬ ಲಕ್ಷ ಕೋಟಿಯಷ್ಟು ಹಣ ವ್ಯವಸ್ಥೆಯಿಂದ ದೂರವಿದೆ. ಅಢಾವೆ ಪಟ್ಟಿಕೆ [ಬ್ಯಾಲೆನ್ಸ್ ಶೀಟ್] ನನ್ನ ಸರಿಹೊಂದಿಸುವ ಸಲುವಾಗಿ, ಭಾರತೀಯ ರಿಸೆರ್ವೆ ಬ್ಯಾಂಕ್ ನವರು, ೬ ಲಕ್ಷದ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸರ್ಕಾರಕ್ಕೆ ಹಸ್ತಾoತರಿಸುತ್ತಾರೆ; ಹೊಸದಾಗಿ ಮುದ್ರಿತವಾದ ದುಡ್ಡನ್ನು ಬ್ಯಾಂಕುಗಳಿಗೆ ನೀಡುವ ಮೂಲಕ ಅನುತ್ಪಾದಕ ಆಸ್ತಿಯನ್ನು ರೈಟ್ ಆಫ್ ಮಾಡಲು ಕೇಂದ್ರ ಸರ್ಕಾರ ಹೊರಟಿದೆಯೆಂದು ಸಿಬಲ್ ಆರೋಪಿಸಿದ್ದಾರೆ.

ಕಾನೂನಿನಲ್ಲಿ ಅಪನಗದೀಕರಣಕ್ಕೆ ಅವಕಾಶವಿದೆಯೇ?

ಹೀಗೊಂದು ಪ್ರಶ್ನೆಯನ್ನು ಕಾನೂನು ಪಂಡಿತರು ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿಗಳು ಕೇಳುತ್ತಿದ್ದಾರೆ . ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ -ನ, ಸೆಕ್ಷನ್ ೨೬ (೨) ನ ಅನ್ವಯ ಕೇಂದ್ರ ಸರ್ಕಾರಕ್ಕೆ ಯಾವುದೇ ಮೌಲ್ಯದ ಕರೆನ್ಸಿ ನೋಟನ್ನು ‘ಅಮಾನ್ಯ’ ಗೊಳಿಸಲು ಅಧಿಕಾರವಿದೆ. ಆದರೆ, ಚಾಲ್ತಿಯಲ್ಲಿರುವ ಪ್ರತ್ಯೇಕ ‘ಸೀರೀಸ್’ ಗಳ ನೋಟುಗಳನ್ನು ಮಾತ್ರ ನಿಷೇಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕಾದೆಯೇ ಹೊರತು; ಚಲಾವಣೆಯಲ್ಲಿರುವ ಎಲ್ಲ ೫೦೦ ಮತ್ತು ೧೦೦೦ ಮೌಲ್ಯದ ಕರೆನ್ಸಿ ನೋಟುಗಳನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುವುದಿಲ್ಲವೆಂದು ಕಾಯ್ದೆಯಲ್ಲಿದೆ.

ಇದರ ಜೊತೆ ಮತ್ತೊಂದು ಮಹತ್ತರ ಪ್ರಶ್ನೆಯನ್ನು ಕಾನೂನು ಹಾಗು ಆರ್ಥಿಕ ತಜ್ಞರು ಎತ್ತಿದ್ದಾರೆ; ಅದೇನೆಂದರೆ, ಬ್ಯಾಂಕುಗಳು ಕೇವಲ ನಮ್ಮ ದುಡ್ಡಿನ ಪಾರುಪತ್ಯಗಾರರು (trustees) ಬ್ಯಾಂಕಿನ ಗ್ರಾಹಕನಿಗೆ ತನ್ನ ದುಡ್ಡಿನ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ, ಯಾವ ಕಾನೂನಿನ ಆಧಾರದ ಮೇಲೆ ನನ್ನ ದುಡ್ಡಿನ ವಾಪಸಾತಿಯನ್ನು (withdrawal) ನಿರ್ಬಂಧ ಮಾಡುತ್ತಾರೆ, ಕೆಲವು ತಜ್ಞರ ಪ್ರಕಾರ ಕೇಂದ್ರ ಸರ್ಕಾರದ ಈ ನಿಲುವು ಕಾನೂನು ಬಾಹಿರವಾಗಿದ್ದು, ಸದ್ಯ ಸುಪ್ರೀಂ ಕೋರ್ಟ್-ನಲ್ಲಿ ಇರುವ ದಾವೆಯ ಅರ್ಜಿ ವಿಚಾರಣೆ ಯಾವ ತಿರುವು ಪಡೆದುಕೊಳ್ಳುವುದೋ ಕಾದು ನೋಡಬೇಕಾಗಿದೆ..