ಅಲೋವೆರಾದ ಆರೋಗ್ಯಕರ ಗುಣಗಳು…

0
4992

ಅಲೋವೆರಾದ ಆರೋಗ್ಯಕರ ಗುಣಗಳು :

1. ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.
2. ಕೊಲೆಸ್ಟ್ರಾಲ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
3. ರಕ್ತ ಶುದ್ಧೀಕರಣಗೊಳಿಸುತ್ತದೆ. ರಕ್ತದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಿಸುತ್ತದೆ.
4. ಉರಿಯೂತ ಮತ್ತು ಸಂಧಿವಾತ ಶಮನಗೊಳಿಸುತ್ತದೆ.
5. ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ತಡೆಯುತ್ತದೆ
6. ಇತರ ಅಜೀರ್ಣಕಾರಿ ಕಾಯಿಲೆಗಳನ್ನು ಶಮನ ಗೊಳಿಸುತ್ತದೆ.
7. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತ್ತದೆ. ನೈಸರ್ಗಿಕವಾಗಿ ಖನಿಜಗಳು, ಜೀವಸತ್ವಗಳು, ಕಿಣ್ವಗಳನ್ನು ದೇಹಕ್ಕೆ ಪೂರೈಸುತ್ತದೆ.
8. ರಕ್ತದಲ್ಲಿನ ಸಕ್ಕರೆಅಂಶ ಸ್ಥಿರಗೊಳಿಸುತ್ತದೆ. ಡಯಾಬಿಟಿಸ್ ರೋಗಿಗಳಲ್ಲಿನ ಟ್ರೈಗ್ಲಿಸರೈಡ್ ಅನ್ನು ಕುಂಠಿತಗೊಳಿಸುತ್ತದೆ.


ಅಲೋವೆರಾ ಜ್ಯೂಸ್ ನ ಉಪಯೋಗಗಳು…

ವಿಷ ಹೊರಹಾಕುತ್ತದೆ…

ಅಲೋವೆರಾ ಜ್ಯೂಸ್ ನಲ್ಲಿ ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳಿವೆ. ಇವು ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ದವಾಗಿಡುತ್ತದೆ.

ದೇಹದ ತೂಕ ತಗ್ಗಿಸುತ್ತದೆ…

ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ನಿಂದ ದೇಹದ ತೂಕ ಕಡಿಮೆ ಮಾಡಿ ಅದನ್ನು ನಿರ್ವಹಿಸಲು ನೆರವಾಗುತ್ತದೆ. ಇದು ಹೊಟ್ಟೆ ಕ್ಲೀನ್ ಮಾಡಿ ಚಯಾಪಚಯಾ ಕ್ರಿಯೆ ಸರಿಯಾಗಿರಲು ನೆರವಾಗುತ್ತದೆ. ಅಲೋವೆರಾ ಜ್ಯೂಸ್ ನಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿರುವ ಬೊಜ್ಜು ಕಡಿಮೆ ಮಾಡಲು ನೆರವಾಗುತ್ತದೆ.

ಹಲ್ಲಿನ ಆರೋಗ್ಯ…

ಆಲೋವೆರಾ ಜ್ಯೂಸ್ ನಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳಿವೆ. ಇದು ನಿಮ್ಮ ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಅಲೋವೆರಾ ಜ್ಯೂಸ್ ಮೌಥ್ ಪ್ರೆಶನರ್ ರೀತಿ ಕೆಲಸ ಮಾಡಿ, ಬಾಯಿ ದುರ್ವಾಸನೆ ತಡೆಯುತ್ತದೆ. ಅಲೋವೆರಾ ಜ್ಯೂಸ್ ಬಾಯಿಯ ಹುಣ್ಣು ಮತ್ತು ಒಸಡಿನಿಂದ ರಕ್ತ ಬರುವ ಸಮಸ್ಯೆಯನ್ನು ತಡೆಯುತ್ತದೆ.

ಶಕ್ತಿ ಹೆಚ್ಚಿಸುತ್ತದೆ…

ಅಲೋವೆರಾ ಜ್ಯೂಸ್ ನ್ನು ಪ್ರತೀದಿನ ಶಕ್ತಿ ವರ್ಧಕ ಪಾನೀಯವಾಗಿ ಬಳಸಬಹುದು. ಯಾಕೆಂದರೆ ಇದರಲ್ಲಿ ಪೌಷ್ಠಿಕಾಂಶ, ವಿಟಮಿನ್ ಮತ್ತು ಮಿನರಲ್ ಅಗಾಧ ಪ್ರಮಾಣದಲ್ಲಿದೆ ಮತ್ತು ಇದು ದೇಹದ ವ್ಯವಸ್ಥೆಗೆ ಶಕ್ತಿ ನೀಡುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಅಂಗಾಂಗಗಳ ಚಟುವಟಿಕೆಯನ್ನು ಇದು ಪ್ರಚೋದಿಸುತ್ತದೆ.

ಚರ್ಮ ಮತ್ತು ಕೂದಲು ಆರೋಗ್ಯಕ್ಕೆ…

ಅಲೋವೆರಾ ಜ್ಯೂಸ್ ಹಾನಿಗೊಳಗಾದ ಚರ್ಮದ ಜೀವಕೋಶಗಳನ್ನು ಸರಿಪಡಿಸಿ, ಚರ್ಮ ಕಾಂತಿಯುಕ್ತ ಮತ್ತು ಸುಂದರವಾಗುವಂತೆ ಮಾಡುತ್ತದೆ. ಅಲೋವೆರಾ ಜ್ಯೂಸ್ ಚರ್ಮ ಸರಿಪಡಿಸಲು ಮತ್ತು ಪುನರ್ಚೇತನ ಪಡೆಯಲು ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಚರ್ಮವು ಯುವ ಹಾಗೂ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಅದೇ ರೀತಿ ಕೂದಲನ್ನು ಕೂಡ. ಅಲೋವೆರಾ ಜ್ಯೂಸ್ ಕೂದಲಿನ ಕಿರುಚೀಲಗಳ ಬೆಳವಣಿಗೆ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ. ಇದು ಅಲೋವೆರಾ ಜ್ಯೂಸ್ ನ ಕೆಲವೊಂದು ಆರೋಗ್ಯ ಲಾಭಗಳು.


ಕ್ಯಾನ್ಸರ್, ಕೊಲೆಸ್ಟರಾಲ್, ಮಧುಮೇಹ, ಉರಿಯೂತ, IBS, ಮತ್ತು ಇತರ ಆರೋಗ್ಯ ಸ್ಥಿತಿಗಳಿಗೆ ನೈಸರ್ಗಿಕ ಔಷಧ ಈ ಅಲೋವೆರಾ… ಮತ್ತಷ್ಟು ಉಪಯೋಗಗಳ ಬಗ್ಗೆ ತಿಳಿಯೋಣ..

•ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.
• ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
• ರಕ್ತ ಶುದ್ಧೀಕ್ರಣಗೊಳಿಸುತ್ತದೆ.
• ರಕ್ತದಲ್ಲಿ ಆಮ್ಲಜನಕದ ಉತ್ಪಾಧನೆ ಹೆಚ್ಚಿಸುತ್ತದೆ.
• ಉರಿಯೂತ ಮತ್ತು ಸಂಧಿವಾತ ನೋವು ಶಮನಗೊಳಿಸುತ್ತದೆ.
• ಆಕ್ಸಿಡೇಟಿವ್ ಒತ್ತಡದಿಂದ ದೇಹ ರಕ್ಷಿಸುತ್ತದೆ.
• ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ತಡೆಯುತ್ತದೆ
• ಹುಣ್ಣುಗಳು, IBS, ಕ್ರೋನ್ಸ್ ರೋಗ ಮತ್ತು ಇತರ ಜೀರ್ಣಕಾರಿ ಕಾಯಿಲೆಗಳನ್ನು ಶಮನಗೊಳಿಸುತ್ತದೆ.
• ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೇವಲ ರೋಗಲಕ್ಷಣಗಳದ ಮೂಲಕವಲ್ಲ, ನೈಸರ್ಗಿಕವಾಗಿ .
• ಖನಿಜಗಳು, ಜೀವಸತ್ವಗಳು, ಕಿಣ್ವಗಳು ಮತ್ತು glyconutrients ಗಳನ್ನು ದೇಹಕ್ಕೆ ಪೂರೈಸುತ್ತದೆ.
• ಶಾರೀರಿಕ ಮತ್ತು ವಿಕಿರಣಗಳಿಂದ ಉಂಟಾದ ಸುಟ್ಟಗಾಯಗಳನ್ನು ವೇಗವಾಗಿ ಗುಣಮುಖಗೊಳಿಸುತ್ತದೆ.
•ಕೊಲೊನ್ ಕ್ಯಾನ್ಸರ್ ತಡೆಗಟ್ಟುತ್ತದೆ , ಮತ್ತು ಜೀರ್ಣಾಂಗದ ಸಾಮರ್ಥ್ಯ ವೃದ್ಧಿಸುತ್ತದೆ.
• ಮಲಬದ್ಧತೆಗೆ ಅಂತ್ಯವಾಡುತ್ತದೆ.
• ರಕ್ತದಲ್ಲಿನ ಸಕ್ಕರೆಅಂಶ ಸ್ಥಿರಗೊಳಿಸುತ್ತದೆ. ಡಯಾಬಿಟಿಸ್ ರೋಗಿಗಳಲ್ಲಿನ ಟ್ರೈಗ್ಲಿಸರೈಡ್‌ ಅನ್ನು ಕುಂಠಿತಗೊಳಿಸುತ್ತದೆ.
• ಸೋಂಕುಗಳನ್ನು ತಡೆಯುತ್ತದೆ.
• ಮೂತ್ರಪಿಂಡವನ್ನು ರಕ್ಷಿಸುತ್ತದೆ.
• ಪ್ರಕೃತಿಯ “ಕ್ರೀಡಾ ಪೇಯ” ದಂತೆ ಕಾರ್ಯನಿರ್ವಹಿಸುತ್ತದೆ.
• ಹೃದಯ ಕಾರ್ಯ ಸಾಮರ್ಥ್ಯ ವೃದ್ಧಿಸುತ್ತದೆ ಮತ್ತು ದೈಹಿಕ ಸಹಿಷ್ಣುತೆ ಹೆಚ್ಚಿಸುತ್ತದೆ.