ಆರೋಗ್ಯವಂತರಾಗಿರಬೇಕಾದರೆ ದಾಳಿಂಬೆ ಹಣ್ಣನ್ನು ತಿನ್ನುವುದು ಉತ್ತಮ

0
3993

ಆರೋಗ್ಯವಂತರಾಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವುದು ಉತ್ತಮ. ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ. ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದಂತೆ. ಮನುಷ್ಯನ ದೇಹದಲ್ಲಿರುವ ಯುರೋಲಿಥಿನ್ ‘ಎ’ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯರ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯಾ ಇದ್ದರೆ ಮಾತ್ರ ದಾಳಿಂಬೆಯಲ್ಲಿರುವ ರಾಸಾಯನಿಕದಿಂದ ಪ್ರಯೋಜನವಾಗುತ್ತದೆ. ಸೂಕ್ಷ್ಮಜೀವಿಗಳು ಹಣ್ಣಿನಲ್ಲಿರುವ ಕಚ್ಚಾ ಪದಾರ್ಥಗಳನ್ನು ಯುರೋಲಿಥಿನ್ ‘ಎ’ ಆಗಿ ಬದಲಾಯಿಸುತ್ತದೆ.

 

ದಾಳಿಂಬೆ ಹಣ್ಣಿನಿಂದಾಗುವ  ಪ್ರಯೋಜನಗಳು

*ರಕ್ತದೊತ್ತಡ  ಕಡಿಮೆ ಆಗುವುದು.

*ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವುದು.

*ಕೊಲೆಸ್ಟ್ರಾಲ್  ಕಡಿಮೆಯಾಗುವುದು.

*ಮಹಿಳೆಯರು ದಾಳಿಂಬೆಹಣ್ಣಿನ  ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವುದು.

*ನಿಶ್ಯಕ್ತತೆಯನ್ನು ಕಡಿಮೆ ಮಾಡುವುದು .

*ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು  ಕಾಂತಿಯುತವಾಗುವುದು.

*ಲೈಂಗಿಕ  ತೊಂದರೆಯೂ ನಿವಾರಣೆಯಗುವುದು

*ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವುದು.

*ದಾಳಂಬೆ ಬೀಜವನ್ನು  ತಿನ್ನುವದರಿಂದ ಹಲ್ಲುಗಳ ಹೊಳಪು  ಹೆಚ್ಚುವುದು.

*ಮನಸ್ಸು ಉಲ್ಲಾಸದಿಂದ ಇರುವುದು.

*ಓದು, ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚ್ಚಿಸುವುದು.

ಮನುಷ್ಯನ ದೇಹದಲ್ಲಿರುವ ಯುರೋಲಿಥಿನ್ ‘ಎ’ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯರ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯಾ ಇದ್ದರೆ ಮಾತ್ರ ದಾಳಿಂಬೆಯಲ್ಲಿರುವ ರಾಸಾಯನಿಕದಿಂದ ಪ್ರಯೋಜನವಾಗುತ್ತದೆ. ಸೂಕ್ಷ್ಮಜೀವಿಗಳು ಹಣ್ಣಿನಲ್ಲಿರುವ ಕಚ್ಚಾ ಪದಾರ್ಥಗಳನ್ನು ಯುರೋಲಿಥಿನ್ ‘ಎ’ ಯಾಗಿ ಬದಲಾಯಿಸುತ್ತದೆ.

ದಾಳಿಂಬೆ ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದರೆ ಜೀವಿತಾವಧಿ ಕೂಡ ಜಾಸ್ತಿಯಾಗುತ್ತದಂತೆ. ವಿಜ್ಞಾನಿಗಳು ಅಮಜೆಂಟಿಸ್ ಎಂಬ ಕಂಪೆನಿಯನ್ನು ಆರಂಭಿಸಿದ್ದು, ಯರೋಪಿಯನ್ ರಾಷ್ಟ್ರಗಳ ಅನೇಕ ಆಸ್ಪತ್ರೆಗಳಲ್ಲಿ ಇದನ್ನು ಬಳಸಲಾಗುತ್ತಿದೆಯಂತೆ.

ಸ್ವಿರ್ಜರ್ಲೆಂಡಿನ ಎಕೋಲೆ ಪಾಲಿಟೆಕ್ನಿಕ್ ಫೆಡರಲ್ ಡಿ ಲಾಸನ್ನೆಯ ಪ್ರಾಧ್ಯಾಪಕ ಜೋಹನ್ ಔವೆರ್ಸ್ಕ್, ಇಳಿವಯಸ್ಸಿನಲ್ಲಿ ಬಲವರ್ಧನೆಗೆ ಇದು ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.

ಈ ಅಧ್ಯಯನ ನೇಚರ್ ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಮೈಟೋಕಾಂಡ್ರಿಯಾದ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ.

ದಾಳಿಂಬೆ ಹೃದ್ರೋಗ ಸಮಸ್ಯೆಗಳಿಗೆ, ಉರಿಯೂತ ಮತ್ತು ಸಂಧಿವಾತ, ನೆನಪು ಶಕ್ತಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.