ಆಲೂ ದೋಸಕಾಯ ಮಸಾಲ

0
1334

ಸಾಮಗ್ರಿ:

ಬೇಯಿಸಿದ ಆಲೂಗಡ್ಡೆ ಹೋಳು-1/2 ಕಪ್ (ಆಲೂ ಹೋಳು ಗಟ್ಟಿಯಾಗಿ ಬೆಂದಿರಲಿ),

ಸಿಪ್ಪೆ ತೆಗೆದ ದಪ್ಪ ಸೌತೆಕಾಯಿ ಹೋಳು-1/2 ಕಪ್,

ಹಸಿಮೆಣಸಿನಕಾಯಿ-4,

ಖಾರದ ಪುಡಿ-1 ಚಮಚ,

ಶುಂಠಿ, ಬೆಳ್ಳುಳ್ಳಿ ಮಿಶ್ರಣ-1 ಚಮಚ,

ಈರುಳ್ಳಿ-1/2 ಕಪ್,

ಟೊಮೆಟೊ-1,

ಜೀರಿಗೆ-1/4 ಚಮಚ,

ಗೋಡಂಬಿ-3,

ಶೇಂಗಾ ಬೀಜ-1 1/2 ಚಮಚ,

ಚಕ್ಕೆ-1 ತುಂಡು,

ಲವಂಗ-3,

ಕಸೂರಿ ಮೇಥಿ-1 ಚಮಚ,

ಗರಂ ಮಸಾಲ-1/4 ಚಮಚ,

ಎಣ್ಣೆ-ಕರಿಯಲು, ಕೊತ್ತಂಬರಿ ಸೊಪ್ಪು-1 ಚಮಚ, ಧನಿಯಾ-1/2 ಚಮಚ.

ವಿಧಾನ:

ಆಲೂಗಡ್ಡೆ ಸಿಪ್ಪೆ ತೆಗೆದ ಹೋಳುಗಳನ್ನು ಎಣ್ಣೆಯಲ್ಲಿ ಕರಿದು ತೆಗೆದು ಟಿಶ್ಶೂ ಹಾಳೆಯ ಮೇಲೆ ಹರಡಿ. ಗೋಡಂಬಿ, ಶೇಂಗಾ ಬೀಜ, ಧನಿಯಾ ಹು-ರಿದು ಅದಕ್ಕೆ ಟೊಮೆಟೊ ಸೇರಿಸಿ ಹುರಿದು ರುಬ್ಬಿಕೊಳ್ಳಿ. ಒಗ್ಗರಣೆಯಲ್ಲಿ ಸಾಸಿವೆ, ಜೀರಿಗೆ, ಚಕ್ಕೆ, ಲವಂಗ ಹುರಿದು ಈರುಳ್ಳಿ, ಸೌತೆಕಾಯಿ ಹೋಳು, ಉಪ್ಪು ಸೇರಿಸಿ ಹುರಿಯಿರಿ. ಬೆಂದು ಮೆತ್ತಗಾದಾಗ ಶುಂಠಿ, ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹು-ರಿಯಿರಿ. ನಂತರ ರುಬ್ಬಿದ ಮಸಾಲೆ ಸೇರಿಸಿ ಒಂದು ಕುದಿ ಬಂದಾಗ ಆಲೂಗಡ್ಡೆ, ಗರಂ ಮಸಾಲೆ, ಖಾರದ ಪುಡಿ ಸೇರಿಸಿ ಗ್ರೇವಿ ಹದಕ್ಕೆ ಕುದಿಸಿ. ಕಸೂರಿ ಮೇಥಿ ಸೇರಿಸಿ. ಚೆನ್ನಾಗಿ ಕುದಿ ಬಂದ ನಂತರ ಇಳಿಸಿ. ಚಪಾತಿ, ಪುಲ್ಕ ಜೊತೆ ಸವಿಯಲು ರುಚಿ.