ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಗೆ ನೆರ್ಥಲರ್ಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಎಚ್ಚರಿಕೆ!

0
1166

ಹೊಸದಿಲ್ಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಟ್ವೆಂಟಿ20 ವಿಶ್ವಕಪ್ನಲ್ಲಿ ಕೊನೆಯ ಓವರ್ ನಲ್ಲಿ ನಾಲ್ಕು ಬಾಲ್ಗಳಿಗೆ ಬೌಂಡರಿ ಹೊಡೆಸಿಕೊಂಡು ವಿಲನ್ ಎನಿಸಿಕೊಂಡಿದ್ದ ಅತೀವೇಗದಿಂದ ವಾಹನ ಚಲಾಯಿಸುವ ಚಾಳಿ ಅವರಿಗೆ ಮುಳುವಾಗುವ ಸಾಧ್ಯತೆಯನ್ನು ನಿರ್ಮಿಸಿದೆ. ಒಂದು ವೇಳೆ ಈ ಆಲ್ರೌಂಡರ್ ಮುಂದಿನ ಆರು ತಿಂಗಳು ಯಾವುದೇ ವಾಹನ ಚಲಾಯಿಸಿದ್ದು ಗೊತ್ತಾದರೆ ಅವರನ್ನು ಬಂಧಿಸಿ ಪೊಲೀಸರು ಜೈಲಿಗೆ ದೂಡಬಹುದು ಎಂದು ನೆರ್ಥಲರ್ಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎಚ್ಚರಿಕೆ ನೀಡಿದೆ.

  ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕಿಂತ ಮೊದಲು ಇಂಗ್ಲೆಂಡ್ ತಂಡದಿಂದ ದೂರವುಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಮಂಡಿಗೆ ಗಾಯವಾಗಿತ್ತು. ಒಂದೆಡೆ ಅವರ ಫಿಟ್ನೆಸ್ಗೆ ಇಂಗ್ಲೆಂಡ್ ತಂಡ ಹೆಚ್ಚು ಗಮನ ಇರಿಸುತ್ತಿದ್ದರೆ ಇತ್ತ ಇಂಗ್ಲೆಂಡ್ ಕಾನೂನು ವಿಭಾಗ ಅವರ ಮೇಲೆ ನಿಗಾ ಇರಿಸಿದೆ. ಸ್ಟೋಕ್ಸ್ ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ವೇಗವಾಗಿ ಕಾರು ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇದನ್ನು ನ್ಯಾಯಾಲಯದಲ್ಲಿ ಸ್ಟೋಕ್ಸ್ ಒಪ್ಪಿಕೊಂಡಿದ್ದು ಇಂತಹ ತಪ್ಪನ್ನು ಪುನರಾವರ್ತಿಸಲಾರೆ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಮುಂದಿನ ಆರು ತಿಂಗಳಲ್ಲಿ ಸ್ಟೋಕ್ಸ್ ಕಾರು ಚಲಾಯಿಸಿದ್ದು ಕಂಡುಬಂದರೆ ಸೀದಾ ಜೈಲಿಗೆ ಹೋಗಬೇಕಾದೀತು ಎಂದು ನೆರ್ಥಲರ್ಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎಚ್ಚರಿಕೆ ನೀಡಿದೆ.