ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗ ಅವಕಾಶ

0
1313

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಎಂಜಿನಿಯರಿಂಗ್ ಅಸಿಸ್ಟೆಂಟ್, ಜೂನಿಯರ್ ಮೆಟೀರಿಯಲ್ಸ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಖಾಲಿ ಇರುವ ಹುದ್ದೆಗಳು 53

ಅರ್ಜಿಯ ಕೊನೆಯ ದಿನಾಂಕ: ಜನವರಿ 23

ಅಭ್ಯರ್ಥಿಗಳ ವಯೋಮಿತಿ: ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18ರಿಂದ 26 ವರ್ಷದೊಳಗಿರಬೇಕು.

ಹುದ್ದೆಗಳ ವಿವರ: 

ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್: ಪ್ರೊಡಕ್ಷನ್, ಪವರ್ ಯುಟಿಲಿಟೀಸ್, ಎಲೆಕ್ಟ್ರಿಕಲ್, ಪವರ್-ಸೇಫ್ಟಿ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗಗಳಲ್ಲಿ ಜೂ. ಎಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಡಿಪ್ಲೊಮಾ (ಕೆಮಿಕಲ್ ಮತ್ತು ರಿಫೈನರಿ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ /ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್/ಇನ್ಸ್ಟ್ರುಮೆಂಟೇಶನ್-ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್-ಕಂಟ್ರೋಲ್ ಎಂಜಿನಿಯರಿಂಗ್ ) ಓದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಮೆಟೀರಿಯಲ್ ಅಸಿಸ್ಟೆಂಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್: ಬಿಎಸ್ಸಿ (ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥ್ಸ್) ಓದಿರುವ ಮತ್ತು ಕನಿಷ್ಠ ಒಂದು ವರ್ಷ ಇನ್ಸ್ಟ್ರುಮೆಂಟ್ಗಳನ್ನು ನಿರ್ವಹಿಸಿದ ಅನುಭವ ಇದ್ದರೆ ಅರ್ಜಿ ಸಲ್ಲಿಸಬಹುದು.