ಇನ್ಮೇಲೆ ರೈಲಿನಲ್ಲಿ selfie ತಗೊಂಡ್ರೆ ಜೈಲ್ ಗೆ ಹೋಗ್ತೀರಾ…

0
3351

ಅಬ್ಬಾ, ಈ ಸೆಲ್ಫಿ ಬಂದು ಏನ್ ಎಲ್ಲ ಅವಾಂತರ ಮಾಡ್ತಿದೆ ಅಂತ ನಿಮಗೆಲ್ಲ ಗೊತ್ತಿರೋ ವಿಚಾರ, ನೀವ್ ಏನೇ ಹೇಳಿ ಜನ ಸೆಲ್ಫಿಗೆ ಸೆಲ್ಯೂಟ್ ಹೊಡಿತಾ ತಮ್ಮನ್ನು ತಾವೇ ಮರೆಯುತ್ತ ಇರುವುದಂತೂ ಸತ್ಯ.

ಪ್ರವಾಸಕ್ಕೆ ಹೋಗುವಾಗ ಅಥವಾ ಗೆಳೆಯರ ಜೊತೆಗೆ ಸುತ್ತಾಡುವ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ ಆಗಿದೆ. ಹಲವು ಕಡೆ ಅನಾಹುತ ಸೃಷ್ಟಿಸಿದ ಈ ಸೆಲ್ಫಿ ಈಗಾಗಲೇ ಕೆಲ ಕಡೆ ಬ್ಯಾನ್ ಆಗಿದೆ. ಇನ್ನು ಮುಂದೆ ರೈಲಿನಲ್ಲಿ ಕೂಡ ಬ್ಯಾನ್ ಆಗಲಿದೆ…

ಸೆಲ್ಫಿ ಅಷ್ಟೇ ಅಲ್ಲ ರೈಲಿನಲ್ಲಿ ಇಸ್ಪೀಟ್ ಆಡುವುದಕ್ಕೂ ಕಟ್ಟುನಿಟ್ಟಾಗಿ ಕಡಿವಾಣ ಹಾಕಲು ಮುಂದಾಗಿದ್ದು, ಹಾಗೊಮ್ಮೆ ನಿಯಮವನ್ನು ಮೀರಿದರೆ ಭಾರತೀಯ ರೈಲ್ವೆ ನಿಯಮದ ಸೆಕ್ಷನ್ 145ರ ಅನ್ವಯ 5 ವರ್ಷ ಶಿಕ್ಷೆ ನೀಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ಹೊಸ ನೀತಿ ಅಂಗೀಕಾರವಾದರೆ ಮೊದಲು ಗುಜರಾತಿನಲ್ಲಿ ಹಾಗೂ ನಂತರ ದೇಶದ ಎಲ್ಲ ಕಡೆ ಆರಂಭವಾಗಲಿದೆ.

ರೈಲಿನ ಬಳಿ, ಹಳಿಗಳ ಮೇಲೆ ಹಾಗೂ ರೈಲಿನ ಬಾಗಿಲುಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವವರ ಹಾಗೂ ರೈಲಿನಲ್ಲಿ ಇಸ್ಪೀಟ್ ಆಡುವವರ ವಿರುದ್ಧ ರೈಲ್ವೆ ಪೊಲೀಸ್ ಫೋರ್ಸ್ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ.