ಈ ದೇವಸ್ಥಾನದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಎಂಟ್ರಿ…!

0
1821

ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧ ಮಾಡಿರುತ್ತಾರೆ. ಮಹಿಳೆಯರಿಗೆ ಪ್ರವೇಶ ನಿಷೇಧ ಇರುವ ಹಾಗೆ ಪುರುಷರ ಪ್ರವೇಶವನ್ನು ನಿಷೇಧಿಸುವ ಸ್ಥಳಗಳು ಇವೆ ಎಂಬುದು ನಿಮಗೆ ಗೊತ್ತಾ?

ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಪಾರ್ವತಿ ದೇವಿಯ ಒಂದು ಮಂದಿರ 51 ಶಕ್ತಿ ಪೀಠಗಳಲ್ಲಿ ಒಂದೆನಿಸಿದೆ. ಈ ದೇವಿಯನ್ನು ಸನ್ಯಾಸಿ ದೇವರು ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿಯ ದೇವಿ ಸನ್ಯಾಸಿನಿಯಾಗಿರುವ ಕಾರಣ ಇಲ್ಲಿನ ಗರ್ಭಗುಡಿಯೊಳಗೆ ವಿವಾಹಿತ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ.

ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಈ ಕಾರಣಕ್ಕಾಗಿಯೇ ಇದನ್ನು ‘ನಾರಿ ಶಬರಿಮಲೆ’ ಎಂದು ಕರೆಯುತ್ತಾರೆ.

ಬ್ರಹ್ಮನನ್ನು ಪೂಜಿಸುವ ಏಕಮಾತ್ರ ದೇವಸ್ಥಾನ ರಾಜಸ್ತಾನದ ಪುಷ್ಕರ್ ನಲ್ಲಿದೆ. ಈ ಬ್ರಹ್ಮನ ದೇವಸ್ಥಾನದಲ್ಲಿ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ. ದೇವಿ ಸರಸ್ವತಿಯ ಶಾಪದ ಪರಿಣಾಮ ಇಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಹೇಳಲಾಗುತ್ತದೆ.