ಉದ್ಯಾನ ನಗರಿಯಲ್ಲಿ ಬೇಕಾಬಿಟ್ಟಿ ಮರ ಕಡಿಯುವ ಸ೦ಪ್ರದಾಯಕ್ಕೆ ಬಿದ್ದಿದೆ ಬ್ರೇಕ್

0
969

ಬೆ೦ಗಳೂರು: ಉದ್ಯಾನ ನಗರಿಯಲ್ಲಿ ಬೇಕಾಬಿಟ್ಟಿ ಮರ ಕಡಿಯುವ ಸ೦ಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ತಮಗೆ ತೋಚಿದ೦ತೆ ಮರ ಕಡಿಯುತ್ತಿದ್ದ ನಡವಳಿಕೆಯನ್ನು ತಿದ್ದಿಕೊಳ್ಳಲು ಬಿಬಿಎ೦ಪಿ ಮು೦ದಾಗಿದ್ದು, ಮರ ಕಡಿಯುವ ಅವಶ್ಯಕತೆ ಬಗ್ಗೆ ಪರಿಶೀಲಿಸಿ ಅನುಮತಿ ನೀಡಲು ಪರಿಸರವಾದಿಗಳ ಸಮಿತಿ ರಚಿಸಿದೆ.

ಬೆ೦ಗಳೂರಿನಲ್ಲಿ ದಿನದಿ೦ದ ದಿನಕ್ಕೆ ಮರಗಳ ಸ೦ಖ್ಯೆ ಕಡಿಮೆಯಾಗುತ್ತಿದೆ ಎ೦ಬುದು ಪರಿಸರವಾದಿಗಳ ಆತ೦ಕ. ಇದರಿ೦ದ ನಗರದ ಪರಿಸರ ಹಾಳಾಗುತ್ತಿದ್ದು, ಉಷ್ಣಾ೦ಶ ಏರಿಕೆ ಕಾಣುತ್ತಿದೆ. ಬೇಸಿಗೆಯಲ್ಲಿ ತಾಪಮಾನ ದಾಖಲಾಗಲು ಇದು ಒ೦ದು ಕಾರಣ ಎ೦ಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮರ ಕಡಿಯುವುದಕ್ಕೆ ಕಡಿವಾಣ ಹಾಕಲು ಬಿಬಿಎ೦ಪಿ ಅರಣ್ಯ ಘಟಕ ಮು೦ದಾಗಿದೆ. ಪರಿಸರವಾದಿಗಳ ಸಮಿತಿ ರಚನೆ ಮಾಡಿದ್ದು, ಮರ ಕಡಿಯುವ ಸ೦ದಭ೯ ನಾಗರಿಕರು ಅಥವಾ ಇತರೆ ಇಲಾಖೆಗಳು ಈ ಸಮಿತಿಯಿ೦ದ ಕಡ್ಡಾಯವಾಗಿ ಒಪ್ಪಿಗೆ ಪಡೆಯಬೇಕಾಗಿದೆ.

ಮನೆಯ ಸೌ೦ದಯ೯, ವಾಹನ ನಿಲುಗಡೆ ಜಾಗ, ಇನ್ನಿತರ ಕ್ಷುಲ್ಲಕ ಕಾರಣಗಳಿಗೆ ಮರಗಳನ್ನು ಕತ್ತರಿಸಿ ಬಿಸಾಡುವ ಪ್ರವೃತ್ತಿ ಜನರಲ್ಲಿ ಹೆಚ್ಚಾಗುತ್ತಿದೆ. ಮರ ಕಡಿಯಲು ಕೋರಿ ಸಲ್ಲಿಕೆಯಾಗುವ ಅಜಿ೯ಗಳ ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ಅವಶ್ಯಕವಿದ್ದಲ್ಲಿ ಮಾತ್ರ ಅನುಮತಿ ನೀಡುವ ಅ˜ಕಾರ ನೀಡಿದೆ. ಸಮಿತಿ ಅಜಿ೯ ತಿರಸ್ಕರಿಸಿದರೆ ಅಥವಾ ಅನುಮತಿ ಪಡೆಯದೇ ಮರ ಕಡಿಯಲು ಮು೦ದಾದರೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವ ಪ್ರಕಾರ ಸಮಿತಿಗಿದೆ.

ಮೆಟ್ರೋ ಕಾಮಗಾರಿ ಸೇರಿದ೦ತೆ ಇನ್ನಿತರ ಕಾಮಗಾರಿ ನೆಪದಲ್ಲಿ ಸರಕಾರದ ಕೆಲ ಇಲಾಖೆಗಳು ಕೂಡ ನಗರದ ಮರಗಳನ್ನು ಧರೆಗುರುಳಿಸುತ್ತಿವೆ.

ಪರಿಸರವಾದಿಗಳ ಸಮಿತಿ

ಕಾಮಗಾರಿಗಳಿಗೆ ಹಿನ್ನಡೆ

ಮೆಟ್ರೋ ಕಾಮಗಾರಿ ಅಥವಾ ರಸ್ತೆ ಅಗಲೀಕರಣ ಹೆಸರಿನಲ್ಲಿ ಕನಿಷ್ಠ 50 ಮರ ಕಡಿಯಬೇಕಾದರೆ ಈ ಸಮಿತಿಯ ಮು೦ದೆ ಪ್ರಸ್ತಾವನೆ ಸಲ್ಲಿಸಬೇಕು. ಸಮಿತಿ ಸ್ಥಳ ಪರೀಶೀಲನೆ ನಡೆಸಿ ಅಗತ್ಯವಿದ್ದರೆ ಮಾತ್ರ ಮರ ಕಡಿಯಲು ಅನುಮತಿ ನೀಡುತ್ತದೆ. ಸಮಿತಿ ಅನುಮತಿ ನೀಡಲು ನಿರಾಕರಿಸಿದರೆ ಮರ ಕಡಿಯುವ೦ತಿಲ್ಲ. ಹೀಗಾಗಿ ಮೆಟ್ರೋದ೦ತಹ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತದೆ. ಅವಶ್ಯಕ ಸ೦ದಭ೯ದಲ್ಲಿ ಸಮಿತಿ ಮು೦ದೆ ಕೂರುವುದು, ಸಮಿತಿ ಉದ್ದೇಶಪೂವ೯ಕ ಅನುಮತಿ ನಿರಾಕರಿಸುವುದು. ಇದೆಲ್ಲ ನಗರದ ಮೂಲಸೌಕಯ೯ ಅಭ್ಃಈವೃದ್ಧಿ ದೃಷ್ಟಿಯಿ೦ದ ತೊಡಕಾಗುತ್ತದೆ ಎ೦ಬುದು ಮತ್ತೊ೦ದು ವಾದ.

ಹೈಕೋಟ್‍೯ ಆದೇಶದ೦ತೆ ಸಮಿತಿ

ಅನಾವಶ್ಯಕವಾಗಿ ಮರ ಕಡಿಯುವುದನ್ನು ತಡೆಯಲು ಹೈಕೋಟ್‍೯ ಸೂಚಿಸಿದ್ದ ಹಿನ್ನೆಲೆಯಲ್ಲಿ ಬಿಬಿಎ೦ಪಿ ಸಮಿತಿ ರಚಿಸಿದೆ. ಮೆಟ್ರೋ ಕಾಮಗಾರಿ ವೇಳೆ ಪರಿಸರವಾದಿಗಳ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಹೈಕೋಟ್‍೯ ಈ ಸ೦ಬ೦ಧ ಸಮಿತಿ ರಚಿಸುವ೦ತೆ ಸೂಚಿಸಿತ್ತು.

Source: vishwavani