ಎಬಿವಿಪಿಯ ಪ್ರತಿಭಟನೆ ನಿಯಂತ್ರಣಕ್ಕೆ ಕೆಎಸ್ ಆರ್ ಪಿ ನಿಯೋಜನೆ

0
1058
Members of ABVP staged a protest Bangalore rape case at Deputy Commissioners Office premises, in Mysore on Thursday. - DH PV Photo / IRSHAD MAHAMMAD

ಬೆಂಗಳೂರು: ಅಮ್ನೆಸ್ಟಿಇಂಟರ್ ನ್ಯಾಷನಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟಿಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಕಾಲೇಜು ಬಳಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಮ್ಮ ಪ್ರತಿಭಟನೆ ತೀವ್ರವಾಗಲಿದ್ದು, ಮಲ್ಲೇಶ್ವರಂ 13ನೇ ಕ್ರಾಸ್ ನಲ್ಲಿರುವ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಇದರ ಪರಿಣಾಮವನ್ನು ಅರಿತ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಬಳಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಪ್ರತಿಭಟನೆಯನ್ನು ತಪ್ಪಿಸಲು ಶೇಷಾದ್ರಿಪುರಂನಲ್ಲಿರುವ ಎಬಿವಿಪಿ ಕಚೇರಿಯಲ್ಲಿ ಪೊಲೀಸ್ ಕಾವಲು ಇದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಬಿವಿಪಿ ಕಾರ್ಯಕರ್ತ ಸಂತೋಷ್ ರೆಡ್ಡಿ, ನಮ್ಮ ಹೋರಾಟ ಪೊಲೀಸರ ವಿರುದ್ಧವಲ್ಲ. ದೇಶ ದ್ರೋಹಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಈ ಮಧ್ಯೆ ನಗರದ ಕಾಲೇಜುಗಳ ಪ್ರಾಂಶುಪಾಲರಿಗೆ ಸಲಹೆ, ಸೂಚನೆ ನೀಡಿರುವ ಪೆÇಲೀಸರು ಎಬಿವಿಪಿ ಆಯೋಜಿಸಿರುವ ಪ್ರತಿಭಟನೆಗೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ ಹೇಳಿದ್ದಾರೆ. ಕಾಲೇ ಜಿನೊಳಗೆ ಪ್ರವೇಶಿಸಲು ನೋಡಿದ ಎಬಿವಿಪಿ ಕಾರ್ಯಕರ್ತರು ಗೇಟ್ ಬಳಿಯೇ ಪೊಲೀಸರು ತಡೆದರು. ಎಬಿವಿಪಿ ಕಾರ್ಯಕರ್ತರು ಕಾಲೇಜು ಬಳಿ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿದ ಸನ್ನಿವೇಶ ನಡೆಯಿತು.