ಎರಡು ಸಾಗರಗಳ ಮಿಲನದ ಅದ್ಭುತ ಸೌಂದರ್ಯ ನೋಡಬೇಕೆಂದರೆ ಇಲ್ಲಿ ಬನ್ನಿ

0
3309

ನಿಮಗೆ ಯಾವತ್ತಾದರು ಎರಡು ಸಮುದ್ರಗಳು ಜೊತೆಯಾಗಿ ಸೇರುವ ಸೌಂದರ್ಯ ನೋಡಲು ಸಿಕ್ಕರೆ ಹೇಗಿರಬಹುದು. ನೀವು ಈ ತಾಣಕ್ಕೆ ಹೋದರೆ ನಿಮ್ಮ ಈ ಆಸೆ ಖಂಡಿತವಾಗಿಯೂ ನೆರವೇರುತ್ತದೆ. ಅಲಸ್ಕಾ ಕೊಲ್ಲಿಯಲ್ಲಿ ಇಂತಹ ಒಂದು ತಾಣವಿದೆ. ಅಲ್ಲಿ ಎರಡು ಸಮುದ್ರಗಳು ಸೇರುವುದನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಇಲ್ಲಿ ನೀವು ಎರಡು ಸಮುದ್ರಗಳನ್ನು ಸರಿಯಾಗಿ ಗಮನಿಸಬಹುದು ಕೂಡ. ಯಾಕೆಂದರೆ ಇವೆರಡರ ಬಣ್ಣ ಬೇರೆ ಬೇರೆಯಾಗಿದೆ. ಇದರ ಸೌಂದರ್ಯ ನೋಡಲು ಮಾತ್ರ ಎರಡು ಕಣ್ಣು ಸಾಲದು.

6a0105371bb32c970b0120a509103a970b

ಈ ಸಮುದ್ರದ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಈ ಎರಡು ಸಾಗರಗಳು ಜೊತೆಯಾಗಿ ಸೇರಿದರೂ ಕೂಡ ಯಾವತ್ತೂ ತನ್ನ ಬಣ್ಣವನ್ನು ಬದಲಾಯಿಸುವುದಿಲ್ಲ. ಈ ಎರಡು ಸಾಗರಗಳ ಮಧ್ಯದಲ್ಲಿ ಅಂತರ ರೇಖೆ ಎಳೆದಂತೆ ಕಾಣಿಸುತ್ತದೆ. ಅದಕ್ಕಾಗಿಯೇ ಈ ಜಾಗ ಜಗತ್ತಿನೆಲ್ಲೆಡೆ ಜನಪ್ರಿಯತೆ ಗಳಿಸಿರುವುದು. ಇದು ನದಿಗಳು ಅಲಸ್ಕಾದ ಕೊಲ್ಲಿಯಲ್ಲಿ ಸೇರುವುದರಿಂದ ಉಂಟಾಗುತ್ತದೆ.

Amazing

ಇಂಟರೆಸ್ಟಿಂಗ್ ಸಂಗತಿ ಎಂದರೆ ಎರಡು ಬಣ್ಣಗಳ ನೀರು ಒಂದೇ ಜಾಗದಲ್ಲಿ ಬಂದು ಸೇರಿದರೂ ಕೂಡ ನೀರು ಯಾವತ್ತೂ ಮಿಕ್ಸ್ ಆಗೋದಿಲ್ಲ. ತಮ್ಮ ವಿಭಿನ್ನ ಬಣ್ಣಗಳಿಂದಲೇ ಇವು ಸದಾ ಕಾಲ ಹರಿಯುತ್ತದೆ. ಇಲ್ಲಿ ಗ್ಲೇಶೀಯರ್‍ನಿಂದ ಬರುವಂತಹ ನೀರು ಲೈಟ್ ನೀಲಿ ಬಣ್ಣ ಹೊಂದಿದ್ದರೆ, ನದಿಯಿಂದ ಬರುವಂತಹ ನೀರಿನ ಬಣ್ಣ ಡಾರ್ಕ್ ನೀಲಿ ಬಣ್ಣ ಹೊಂದಿದೆ ಎಂದು ರಿಸರ್ಚ್‍ನಲ್ಲಿ ತಿಳಿದು ಬಂದಿದೆ.