ಎರಡೇ ನಿಮಿಷದಲ್ಲಿ ಸಿಂಗಾರಗೊಳ್ಳುತ್ತದೆ ನಿಮ್ಮ ಗಾಡಿ…

0
1541

ಬೇಸಿಗೆ ಬಂತೆಂದರೆ ದೂಳು, ಮಳೆಗಾಲ ಬಂತೆಂದರೆ ಕೊಚ್ಚೆ, ಇದೆಲ್ಲದರ ಮದ್ಯೆ ಗಾಡಿಯ ಮಾಲೀಕನ ಹೇಗ್ ಸ್ವಾಮಿ ತಡೆದು ಕೊಳುತ್ತೆ, ಮಡುಗಟ್ಟಿ ನಿಂತಿರುವ ಬೈಕ್ ಗಳನ್ನು ತೊಳೆಯುವುದೆಂದರೆ ಅದಕ್ಕಿಂತಲೂ ಬೇಡವಾದ ಕೆಲಸ ಇನ್ನೊಂದಿಲ್ಲ. ಹೇಗೋ ಸಾಹಸ ಮಾಡಿ ಬೈಕ್ ತೊಳೆಯುವುದರ ಬದಲು ಬೈಕ್ ವಾಶ್ ಸೆಂಟರ್ ಗೆ ತೆರಳಿ ತೊಳೆಯುವುದು ಅತ್ಯುತ್ತಮ ಎನಿಸುತ್ತದೆ. ಆದರೆ ಎರಡು ಮೂರು ಗಂಟೆ ಬೈಕ್ ವಾಶ್ ಮಾಡುವುದಕ್ಕೆ ವೇಸ್ಟ್ ಮಾಡಿದರೆ ಭಾನುವಾರದ ಕತೆ ಮುಗಿಯುತ್ತದೆ, ಭಾನುವಾರ ಬಂತೆಂದರೆ ತಿರುಗಾಡಲು ಬೈಕ್ ಬೇಕೇ ಬೇಕು. ಹಾಗಿರುವಾಗ ಬೈಕ್ ವಾಶ್ ಮಾಡಲು ಸಮಯ ಸಿಗದೇ ಹೊಸ ಬೈಕ್ ಸಹ ಹಾಳಾಗಿ ಹೋಗುವ ಭೀತಿ ಕಾಡುತ್ತಿದೆ.

washing

ಇದೆಲ್ಲದರಿಂದ ಮುಕ್ತಿ ಹೊಂದಲು ಎರಡೇ ನಿಮಿಷಗಳಲ್ಲಿ ಬೈಕ್ ತೊಳೆದು ಕೊಡುವ ತಂತ್ರಜ್ಞಾನವನ್ನು ಭಾರತದಲ್ಲೇ ಮೊತ್ತ ಮೊದಲ ಬಾರಿಗೆ ಮುಂಬೈ ಮೂಲದ ಸಂಸ್ಥೆಯು ಪರಿಚಯಿಸುತ್ತಿದೆ. ಎಂಜಿನಿಯರಿಂಗ್ ಸಂಸ್ಥೆಯಾಗಿರುವ ಎನ್ ಟ್ರೋಫಿ ಇನ್ನೋವೇಷನ್ಸ್ ಭಾಗವಾಗಿರುವ ಇಬಿಡಬ್ಲ್ಯು 2013ರಲ್ಲಿ ಸ್ಥಾಪನೆಗೊಂಡಿತ್ತು. ಐಐಟಿ ಮತ್ತು ಐಐಎಂ ಪದವಿದಾರರು ಈ ಆಟೋಮ್ಯಾಟಡ್ ಬೈಕ್ ವಾಶ್ ಮೆಷಿನನ್ನು ಕಂಡು ಹುಡುಕಿದ್ದಾರೆ.
ಬೆಂಗಳೂರಿನ ಕೊತಗುಡಾದಲ್ಲಿ 3ನೇ ಬೈಕ್ ವಾಶ್ ಕೇಂದ್ರ ತೆರೆದಿರುವ ಸಂಸ್ಥೆಯೀಗ ತನ್ನ ಮಾರಾಟ ಜಾಲವನ್ನು ದೇಶದ್ಯಾಂತ ವಿಸ್ತರಿಸುವ ಯೋಜನೆ ಹೊಂದಿದೆ.

21-1477047409-express-bike-wash

ನೆರೆಯ ಹೈದಾರಾಬಾದ್ ಗೂ ತನ್ನ ಸೇವೆಯನ್ನು ವಿಸ್ತರಿಸಿರುವ ಎಕ್ಸ್ ಪ್ರೆಸ್ ಬೈಕ್ ವರ್ಕ್ಸ್ (ಇಬಿಡಬ್ಲ್ಯು) ಸಂಸ್ಥೆಯು ಅತ್ಯಾಧುನಿಕ ವಾಟರ್ ವಾಶ್ ತಂತ್ರಗಾರಿಕೆಯೊಂದಿಗೆ ನಿಮಿಷಗಳ ಅಂತರದಲ್ಲಿ ಪಳಪಳನೆ ಹೊಳೆಯುವ ಬೈಕಾಗಿ ಪರಿವರ್ತಿಸುತ್ತಿದೆ.

churchgate

ಇಲ್ಲಿನ ಗಮನಾರ್ಹ ಸಂಗತಿಯೆಂದರೆ ಇದರಲ್ಲಿರುವ ಆಟೋಮ್ಯಾಟಿಕ್ ಮೆಷಿನ್ ಗಳು ಶೇಕಡಾ 90ರಷ್ಟು ನೀರನ್ನು ಮರು ಬಳಕೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಸ್ವಯಂಚಾಲಿತ ತಂತ್ರಜ್ಞಾನವಾಗಿರುವುದರಿಂದ ಕೇವಲ ಎರಡೇ ನಿಮಿಷಗಳಲ್ಲಿ ಬೈಕ್ ತೊಳೆದು ಕೊಡಲಾಗುತ್ತಿದೆ. ಇದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಸಮಯ ಲಾಭದೊಂದಿಗೆ ಕೆಲಸಗಾರರು ಬೈಕ್ ತೊಳೆಯುವಾಗ ಉಂಟಾಗುವ ಹಾನಿ ಸಂಭವಿಸುವ ಭೀತಿಯೂ ತಪ್ಪಿದಂತಾಗಿದೆ.

detailing

ಪ್ರಸ್ತುತ ಸಂಸ್ಥೆಯು ಡಿಟೈಲಿಂಗ್, ನಿರ್ವಹಣೆ ಹಾಗೂ 24*7 ರೋಡ್ ಸೈಡ್ ಸಹಾಯ ಸೇವೆಯನ್ನು ನೀಡುತ್ತದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತು ಮಾರ್ಕ್ ಮೊಬಿಯಸ್ ಸಹಯೋಗದಲ್ಲಿ ಇಬಿಡಬ್ಲ್ಯು ಕಾರ್ಯಾಚರಿಸುತ್ತಿದೆ. ದೇಶದ ನಂಬರ್ ವನ್ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಸಹ, ಇಬಿಡಬ್ಲ್ಯು ಆಟೋಮ್ಯಾಟಿಕ್ ಬೈಕ್ ವಾಶ್ ಮೆಷಿನ್ ಗಳ ಬಗ್ಗೆಯೂ ಅತೀವ ಸಂತೃಪ್ತಿಯನ್ನು ವ್ಯಕ್ತಪಡಿಸಿದೆ.