ಎಲ್ಲರೂ ನಮ್ಮವರು..ಎಲ್ಲದೂ ನಮ್ಮದು…ನಾವೇ ಎಲ್ಲ…

0
1434

ನಮ್ಮಲ್ಲಿಯ ಮುಸಲ್ಮಾನ ಬಾಂಧವರನ್ನು ಪಾಕಿಸ್ತಾನಿಗಳಂತೆ ನೋಡುವ ಕೆಟ್ಟ ಚಟವನ್ನು ನಾವು ಬಿಡಬೇಕು…ಅವರೆಂದರೆ ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳದೇ ಹೋದರೆ ನಾವು ಮನುಷ್ಯತ್ವವನ್ನೇ ಮರೆತಂತೆ…ಏನೇ ಅವಗಡವಾದರೂ ಅವರನ್ನೇ ಟಾರ್ಗೇಟ್ ಏಕೆ ಮಾಡಬೇಕು? ಮೊದಲು ನಮ್ಮವರಂತೆಯೇ ಅವರನ್ನು ಟ್ರೀಟ್‌ ಮಾಡಬೇಕು. ನಮ್ಮ ಗ್ರಾಮೀಣ ವಲಯದ ಮುಸಲ್ಮಾನರು ಎಷ್ಟೊಂದು ನಂಬಿಕಸ್ತರೆಂದರೆ , ಅದು ನಗರ ವಲಯದವರಿಗೆ ಗೊತ್ತಾಗದು. ಪೂರ್ವಾಗ್ರಹ ಬದಿಗೊತ್ತಿ ಪ್ರೀತಿಗೆ ಒತ್ತು ಕೊಟ್ಟರೆ ನಮಗೆ ಅಚ್ಚರಿಯಾಗುವಂತ ಅಪೂರ್ವ ಮುತ್ತುಗಳಿಗೆ ಎಲ್ಲೆಲ್ಲಿಯೂ ಲಭ್ಯ..

ದಯವಿಟ್ಟು ಯಾವ. ಮಾನದಂಡಗಳನ್ನು ಪರಿಗಣಿಸದೆ ಎಲ್ಲರನ್ನೂ ಪ್ರೀತಿಸೋಣ…ಅದರ ಕೊರತೆಯೇ ಈ ಎಲ್ಲಾ ತಾಪತ್ರಯ,ಅಪನಂಬಿಕೆಗೆ ಕಾರಣವಾದಂತಿದೆ..ಪ್ರೀತಿ ಕೊಟ್ಟರೆ ಈ ಜಗತ್ತೇ ನಮ್ಮದಾಗಬಹುದು…ಪ್ರಾಮಾಣಿಕ ಪ್ರೀತಿಗೆ ಬದ್ಧರಾಗೋಣ. ಇದಕ್ಕಿಂತ ದೊಡ್ಡದಾದ ಮದ್ದು ಬೇರಿಲ್ಲವೆಂದೇ ನನ್ನ ನಂಬಿಕೆ….ಎಲ್ಲರೂ ನಮ್ಮವರು..ಎಲ್ಲದೂ ನಮ್ಮದು…ನಾವೇ ಎಲ್ಲ…

ಪ್ರೀತಿ, ಮಮಕಾರದಿಂದ ಜಗತ್ತನ್ನೆ ಗೆಲ್ಲ ಬಹುದು, ದ್ವೇಷ ಅಸೂಯಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಕೆಟ್ಟತನ, ಒಳ್ಳೆತನ ಎಂಬುದು ಯಾವುದೋ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ.

ವಿಜಯಕಾಂತ್ ಪಾಟೀಲ್ ಲೇಖಕ
ಕ್ಯಾಸನೂರು