ಓಂ ಸಿನಿಮಾ ಬಗ್ಗೆ ಈ ವಿಚಾರಗಳನ್ನು ಕೇಳುದ್ರೆ ಆಶ್ಚರ್ಯ ಪಡ್ತಿರಾ…!!

0
4376

ಓಂ ಸಿನಿಮಾದ ಬಗ್ಗೆ ನಿಮಗೆಷ್ಟು ಗೊತ್ತು… ಕನ್ನಡದ ಆಲ್ ಟೈಂ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದಾದ ‘ಓಂ’ ಚಿತ್ರ ಡಿಜಲೀಕರಣಗೊಂಡು ಮತ್ತೆ ತೆರೆಗೆ ಬಂದಿದೆ. ಮೇ 1995ರಲ್ಲಿ ಬಿಡುಗಡೆಯಾಗಿದ್ದ ಮೂಲ ಈ ಚಿತ್ರ recreated with 5.1 digital and DI ಟೆಕ್ನಾಲಜಿಯ ಮೂಲಕ ಮತ್ತೆ ಇಂದು ಕಪಾಲಿ ಚಿತ್ರಮಂದಿರದಲ್ಲಿ ರೀ-ರಿಲೀಸ್ ಆಗಿದೆ.ಶಿವಣ್ಣ, ಪ್ರೇಮಾ ಪ್ರಮುಖ ಭೂಮಿಕೆಯಲ್ಲಿರುವ ಓಂ ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಕಥೆ, ಚಿತ್ರಕಥೆ, ಡೈಲಾಗ್ ಹೆಣೆದು ನಿರ್ದೇಶಿಸಿದ್ದರು.

ರಿಯಲ್ ಡಾನ್ ಗಳು :

ಬೆಕ್ಕಿನಕಣ್ಣು ರಾಜೇಂದ್ರ, ತನ್ವೀರ್, ಕೊರಂಗು, ಜೇಡ್ರಳ್ಳಿ ಮುಂತಾದ ರಿಯಲ್ ಡಾನ್ ಗಳು ಚಿತ್ರದಲ್ಲಿ ನಟಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ನಡೆಯುವ ಆಯಿಲ್ ಮಿಕ್ಸಿಂಗ್ ದಂಧೆ ಮತ್ತು ರೌಡಿಗಳ ಅಡ್ಡಾವನ್ನು ಚಿತ್ರೀಕರಿಸಿದ ಶೈಲಿಗೆ ಉಪೇಂದ್ರ ಬೆನ್ನು ತಟ್ಟಲೇ ಬೇಕು.

ಓಂ ಡಿವಿಡಿಗೆ ಬೇಡಿಕೆ :

1995ರಲ್ಲಿ ತೆರೆ ಕಂಡ ಬೆಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವುಳ್ಳ ಈ ಚಿತ್ರದ ಡಿವಿಡಿಗೆ ಬಂದಷ್ಟು ಬೇಡಿಕೆ ಬೇರೆ ಯಾವ್ ಚಿತ್ರಕ್ಕೂ ಬಂದಿಲ್ಲ. ಈಗಲೂ ಮಾರುಕಟ್ಟೆಯಲ್ಲಿ ಓಂ ಚಿತ್ರದ ಡಿವಿಡಿ/ಸಿಡಿ ಮಾರಾಟ ಹೆಚ್ಚಾದರೆ ಮಾತ್ರ ಡಿವಿಡಿ ಅಂಗಡಿಗೆ ಬೆಲೆ ಸಿಗಲಿದೆ ಎಂದು ದೊಡ್ಡ ದೊಡ್ಡ ವಿಡಿಯೋ ಸಿಡಿ ಅಂಗಡಿ ಮಾಲೀಕರು ಬೆಂಗಳೂರು ಮಿರರ್ ಜೊತೆ ತಮ್ಮ ವ್ಯಥೆ ಹಂಚಿಕೊಂಡಿದ್ದಾರೆ.

ಶಿವಣ್ಣ ಅಭಿನಯ :

ಮುಗ್ಧ ಸತ್ಯ ಶಾಸ್ತ್ರಿ ಮತ್ತು ಡಾನ್ ಸತ್ಯ ಈ ಎರಡು ಶೇಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ, ಬಾಡಿ ಲಾಂಗ್ವೇಜ್ ಫಂಟಾಸ್ಟಿಕ್. ಚಿತ್ರ ಶುರುವಾಗಿ ಹದಿನೈದು ನಿಮಿಷದ ನಂತರ ಎಂಟ್ರಿ ಕೊಡುವ ಶಿವಣ್ಣ , ಕ್ಲೈಮ್ಯಾಕ್ಸ್ ವರೆಗಿನ ಎರಡು ಶೇಡಿನಲ್ಲಿನ ಇವರ ನಟನೆಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಯ ಮಹಾಪೂರವೇ ಹರಿದು ಬರುತ್ತದೆ.

25 ಕೋಟಿ ದೋಚಿದ್ದ ಚಿತ್ರ :

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇಬ್ಬರಿಗೂ ಲೈಫ್ ಕೊಟ್ಟ ಚಿತ್ರ. ಈ ಚಿತ್ರದ ನಂತರ ಉಪೇಂದ್ರ ನಿರ್ದೇಶಕನಾಗಿ ದೊಡ್ಡ ಹೆಸರು ಮಾಡಿದರೆ, ನಟನಾಗಿ ಶಿವರಾಜ್ ಕುಮಾರ್ ಮರುಜನ್ಮ ಪಡೆದರು. 1995ರ ಆ ಹೊತ್ತಿನಲ್ಲೇ ಚಿತ್ರ ಬರೋಬ್ಬರಿ 25 ಕೋಟಿ ರೂ. ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು.

ಚಿತ್ರಕ್ಕೆ ಕತೆಯೇ ಜೀವಾಳ :

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಮುಗ್ಧ ಶಿವರಾಜ್ ಕುಮಾರ್ (ಸತ್ಯಮೂರ್ತಿ ಶಾಸ್ತ್ರಿ ಆಲಿಯಾಸ್ ಸತ್ಯ) ಬದಲಾದ ಪರಿಸ್ಥಿತಿಯಲ್ಲಿ ಡಾನ್ ಆಗಿ ಭೂಗತಲೋಕವನ್ನು ಹೇಗೆ ತನ್ನ ಸುಪರ್ದಿಗೆ ತೆಗೆದುಕೊಂಡ? ಮತ್ತೆ ಇದರಿಂದ ಹೊರಬಂದು ಹೇಗೆ ನೆಮ್ಮದಿಯ ಬದುಕಿಗೆ ಜಾರಿದ? ಇದರ ಹಿಂದೆ ಈತನ ಪ್ರೇಯಸಿ ಪ್ರೇಮಾ (ಮಧು) ಪಾತ್ರವೇನು ಎನ್ನುವುದೇ ಚಿತ್ರದ ಕಥಾಸಾರಾಂಶ.

500 ಹೆಚ್ಚು ಬಾರಿ ರಿಲೀಸ್ ಆದ ಮೊದಲ ಚಿತ್ರ :

ಉಪೇಂದ್ರ ಅವರ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ’ಓಂ’ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದ ಚಿತ್ರ. 17 ವರ್ಷಗಳಲ್ಲಿ ’ಓಂ’ ಚಿತ್ರ 500ಕ್ಕೂ ಹೆಚ್ಚು ಬಾರಿ ರಿಲೀಸ್ ಆಗಿ ಬ್ಲಾಕ್ ಬ್ಲಾಸ್ಟರ್‌ನಲ್ಲಿ ಹಿಟ್ ಸಿನಿಮಾ ಎನಿಸಿಕೊಂಡಿದೆ.