ಸುಂದರ ಕಣ್ಣಿನ ರಕ್ಷಣೆ ಮಾಡುವುದು ಹೇಗೆ?

0
3400
Woman brown eye with extremely long eyelashes

ಪಂಚೇಂದ್ರಿಯಗಳಲ್ಲಿ ಪ್ರಮುಖವಾಗಿರುವ ಕಣ್ಣು ಮನುಷ್ಯ ದೇಹದ ಶ್ರೇಷ್ಠ ಅಂಗವಾಗಿದ್ದು, ಕಣ್ಣಿನ ರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು.  ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ವೃದ್ಧರವರೆಗೆ ಕಣ್ಣಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಆಗಾಗ ಕಣ್ಣಿನ ತಪಾಸಣೆಯನ್ನು ನಿರಂತರವಾಗಿ ಮಾಡಿಸಿಕೊಳ್ಳುತ್ತಿರಬೇಕು. ಕಣ್ಣಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ  ದೃಷ್ಟಿಹೀನತೆ ಎದುರಿಸಬೇಕಾಗುತ್ತದೆ

 

Woman brown eye with extremely long eyelashes
ನಿಮ್ಮ ಕಣ್ಣುಗಳು ಸದಾ ಅಂದವಾಗಿ ಕಾಣಬೇಕೆಂದರೆ ಕಣ್ಣನ್ನು ದೂಳು ಹಾಗೂ ಸೋಂಕು ಗಾಳಿಯಿಂದ ತಪ್ಪಿಸಿಕೊಳ್ಳಬೇಕು. ಆದರೆ ಅಷ್ಟಕ್ಕೇ ಕಣ್ಣಿಗೆ ರಕ್ಷಣೆ ದೊರಕುವುದಿಲ್ಲ. ಅದ್ದರಿಂದ ನಿಮ್ಮ ಕಣ್ಣಿನ ರಕ್ಷಣೆ ನೀವೆ ನೋಡಿಕೊಳ್ಳಬೇಕು.

 

 

ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?

1)ಕಣ್ಣಿನ ರಕ್ಷಣೆ  ಹಾಗೂ ಕಾಳಜಿ ಹೇಗೆ ಮಾಡುವುದೆಂದರೆ ಕಣ್ಣಿಗೆ ಶ್ರಮ ನೀಡದೇ ಇರುವುದು. ಅಧಿಕ ಶ್ರಮ ನೀಡುವುದರಿಂದ ಕಣ್ಣು ಬಾಡುವುದು; ಅಲ್ಲದೇ, ದೃಷ್ಟಿ ಕೂಡ ಕಡಿಮೆಯಾಗಬಹುದು. ಕಣ್ಣಿನ ಶ್ರಮ ತಪ್ಪಿಸಿ, ದೃಷ್ಟಿ ಹೆಚ್ಚಿಸಿಕೊಳ್ಳುವ ಕೆಲವು ಸಂಗತಿಗಳು ಇಲ್ಲಿವೆ. ಕಣ್ಣಿನ ದೃಷ್ಟಿಯ ಮೇಲೆ ಅಧಿಕ ಗಮನವಿರಿಸಿ ಮಾಡುವಂತಹ ಕೆಲಸಗಳ ಬಗ್ಗೆ ಎಚ್ಚರವಿರಲಿ.

2)ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಕೆಲಸ ಮಾಡುವವರಾಗಿದ್ದರೆ ಇಪ್ಪತ್ತು ನಿಮಿಷಗಳಿಗೊಮ್ಮೆ ನಿಮ್ಮ ದೃಷ್ಟಿಯನ್ನು ಬದಲಾಯಿಸಿ. ನಿಮ್ಮ ಎದುರಿಗಿನ ಗೋಡೆಯನ್ನೋ, ಗೋಡೆಯ ಮೇಲೆ ನೇತು ಹಾಕಿದ ಚಿತ್ರವನ್ನೋ ಅಥವಾ ಕಿಟಕಿಯ ಹೊರಗಿನ ಚಿತ್ರಣವನ್ನೋ 30 ಸೆಕೆಂಡುಗಳ ಕಾಲ ನೋಡಿ ಪುನಃ ಕೆಲಸ ಮುಂದುವರಿಸುವುದರಿಂದ ಕಣ್ಣಿಗೆ ಶ್ರಮ ಕಡಿಮೆಯಾಗುತ್ತದೆ.

3)ನಿಮ್ಮ ಎರಡು ಕೈಗಳನ್ನು ದೀರ್ಘವಾಗಿ ಉಜ್ಜಿ. ಅವು ಬೆಚ್ಚಗೆ ಆಗುವವರೆಗೆ ಉಜ್ಜುತ್ತಲೇ ಇರಿ, ಅವು ಬಿಸಿಯಾದ ನಂತರ ಕಣ್ಣನ್ನು ಮುಚ್ಚಿ ಬಿಸಿಯಾದ ಕೈಗಳನ್ನು ಮುಚ್ಚಿದ ಕಣ್ಣಿನ ಮೇಲಿಡಿ. ಹೀಗೆ ಕೆಲ ಸಮಯ ಇಡುವುದರಿಂದ ಕಣ್ಣಿಗೆ ವಿಶ್ರಾಂತಿ ದೊರಕುತ್ತದೆ.

4)ನಿಮ್ಮ ಕಣ್ಣಿಗೆ ಅಧಿಕ ಶ್ರಮ ಅಥವಾ ಒತ್ತಡ ಎನ್ನಿಸಿ ಉರಿ ಬಂದರೆ ಸ್ವಚ್ಛವಾಗಿರುವ ಕರವಸ್ತ್ರ ಅಥವಾ ಬಟ್ಟೆಯೊಂದನ್ನು ಶುದ್ಧ ನೀರಿನಲ್ಲಿ ಅದ್ದಿ ನೀರುನ್ನು ಹಿಂಡಿ ಕಣ್ಣಿನ ಮೇಲೆ ಇರಿಸಿಕೊಳ್ಳುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ನಿಮಗೆ ಸಮೀಪದೃಷ್ಟಿ ಚೆನ್ನಾಗಿದ್ದರೆ, ಆದಷ್ಟು ಕನ್ನಡಕ ಉಪಯೋಗಿಸದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿ.

5)ಕಂಪ್ಯೂಟರ್ ವೀಕ್ಷಣೆಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಹೇಗೆ ಎಂದರೆ; ಹೊಸ ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತವೆ. ಸತತವಾಗಿ 8 ಗಂಟೆಗಳವರೆಗೆ ಕಂಪ್ಯೂಟರ್ ಸ್ಕ್ರೀನ್ ವೀಕ್ಷಿಸುವುದು ಕಣ್ಣಿಗೆ ಶ್ರಮ. ಇದರಿಂದ ಕಣ್ಣಿನ ಜತೆ ಬೆನ್ನಿಗೂ ಕೆಲವು ಸಮಸ್ಯೆಗಳು ಉಂಟಾಗಬಹುದು. ಕಂಪ್ಯೂಟರ್‌ನಲ್ಲಿ ನಮ್ಮ ಕಣ್ಣಿನ ದೃಷ್ಟಿಯ ಮಟ್ಟಕ್ಕಿಂತ ಕೆಲವು ಇಂಚುಗಳ ಕೆಳಗೆ ನೋಡುವುದು ಅನುಕೂಲಕರ ಭಂಗಿ.

6)ಕಣ್ಣಿನ ದೃಷ್ಟಿಯ ಮಟ್ಟಕ್ಕಿಂತ ಮೇಲೆ ನೋಡುವುದರಿಂದ ಕಣ್ಣನ್ನು ಮಾಮೂಲಿಗಿಂತ ಹೆಚ್ಚು ಅಗಲಿಸಬೇಕಾಗುತ್ತದೆ. ಇದರಿಂದ ದೃಷ್ಟಿ ಮತ್ತು ಭಂಗಿಯ ಸಮಸ್ಯೆಗಳು ಉಂಟಾಗುತ್ತದೆ. ಕಂಪ್ಯೂಟರ್ ಮಾನಿಟರ್ ನಿಮ್ಮ ಕಣ್ಣಿನ ಮಟ್ಟಕ್ಕಿಂತ 4-8 ಇಂಚು ಕೆಳಕ್ಕೆ ಇದ್ದರೆ ಒಳ್ಳೆಯದು.

7)ಪ್ರತಿ ಅರ್ಧಗಂಟೆಗೆ ಕಣ್ಣನ್ನು ಮುಂಚಿ ರೆಪ್ಪೆಯ ಒಳಗೆ ಕಣ್ಣಿನ ಗುಡ್ಡೆಗಳನ್ನು ಅತ್ತಿತ್ತ ಚಲಿಸಿ. ಮಾನಿಟರ್ ನಿಮ್ಮ ಮುಖದಿಂದ 20-30 ಇಂಚುಗಳು ದೂರದಲ್ಲಿರಬೇಕು. ಮಾನಿಟರ್ ನಮ್ಮೆದುರು ನೇರವಾಗಿ ಇರಬೇಕು, ಅದನ್ನು ಕೋನವಾಗಿ ಇಡಬಾರದು.

8)ಕಂಪ್ಯೂಟರ್ ಪರದೆಯಿಂದ ಬೆಳಕು ಪ್ರತಿಬಿಂಬಿಸಬಾರದು. ಕಿಟಕಿಯಿಂದ ಪ್ರಕಾಶಮಾನ ಬೆಳಕು ಪರದೆ ಮೇಲೆ ಬೀಳುತ್ತಿದ್ದರೆ ಕೆಲಸದ ಸ್ಥಳ ಬದಲಿಸಿ ಅಥವಾ ಕಿಟಕಿ ಬಾಗಿಲು ಬಂದ್ ಮಾಡಿ.

9)ಸೂರ್ಯನ ಕಿರಣಗಳು ಕಣ್ಣಿಗೆ ನೇರವಾಗಿ ಬೀಳದಂತೆ ರಕ್ಷಣೆ, ಧೂಮಪಾನ ನಿಷೇಧ ಮತ್ತು ಆಂಟಿಆಕ್ಸಿಡೆಂಟ್ ವಿಟಮಿನ್‌ಗಳು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕಣ್ಣಿನ ಆರೋಗ್ಯ ಕಾಪಾಡಬಹುದು.

10)ಕಣ್ಣನ್ನು ಆರೋಗ್ಯವಾಗಿಡುವ ಮುಖ್ಯ ಕ್ರಮಗಳಲ್ಲಿ ನಿಯಮಿತ ಕಣ್ಣಿನ ಪರೀಕ್ಷೆಗಳು ಕೂಡ ಸೇರಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸೂರ್ಯನ ಬೆಳಕಿನಲ್ಲಿರುವ ಯುವಿಎ ಮತ್ತು ಯುವಿಬಿ ಕಿರಣಗಳು ಕಣ್ಣಿಗೆ ಹಾನಿಕರ. ಕೆಟಾರೆಕ್ಟ್ ಮುಂತಾದ ಕಾಯಿಲೆಗಳಿಗೆ ಅವು ಕಾರಣವಾಗಿದೆ.

11) ಸನ್ಶೈನ್ / ಸೂರ್ಯನ ಕಿರಣಗಳು ಸನ್ಶೈನ್ ನಿಮ್ಮ ಕಣ್ಣುಗಳು ಅತ್ಯುತ್ತಮ ಉಚಿತ ಚಿಕಿತ್ಸೆಯಾಗಿದೆ. ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರ ಸ್ನಾಯುಗಳ ಬಿಡಿಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ.

12) ಒಣ ಗಾಳಿಯಿಂದ ದೂರವಿರಿ ನಿಮ್ಮ ಕಾರು ಅಥವಾ ನಿಮ್ಮ ಕಛೇರಿಯಿಂದ ಹವಾನಿಯಂತ್ರಿತ ಗಾಳಿ ನಿಮ್ಮ ಕಣ್ಣುಗಳಲ್ಲಿ ಎಲ್ಲಾ ತೇವಾಂಶ ಎಳೆದುಕೊಳ್ಳಲು ಯಾವತ್ತಿಗೂ ಬಿಡಬೇಡಿ. ನಿಮ್ಮ ಮುಖ ಆದಷ್ಟು ಹವಾನಿಯಂತ್ರಿತ ಫಲಕದ ಕೆಳಕ್ಕೆ ಅಥವಾ ದೂರವಿರಲಿ. ಏರ್ ಕಂಡಿಷನರ್ ನ ಗಾಳಿ ಮತ್ತಷ್ಟು ಕುರುಡು ಅಥವಾ ಯಾವುದೇ ಇತರ ಕಾರ್ನಿಯಾ ಅಸ್ವಸ್ಥತೆ ಉಂಟುಮಾಡಬಲ್ಲ ಗಂಭೀರ ಶುಷ್ಕತೆಗೆ ಕಾರಣವಾಗಬಹುದು.

13) ಸುರಕ್ಷತೆಯ ಕನ್ನಡಕ ಧರಿಸಿ ಕಣ್ಣಿನ ಗಾಯಗಳು ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಆದ್ದರಿಂದ ಯಾವಾಗಲೂ, ರಾಸಾಯನಿಕ ಕೆಲಸ ಮಾಡುವಾಗ, ಆಟವಾಡುವಾಗ, ಪಟಾಕಿ ಸಿಡಿಸುವಾಗ, ಅಥವಾ ಈಜುವಾಗ ಸುರಕ್ಷತೆಯ ಕನ್ನಡಕಗಳನ್ನು ಧರಿಸಲು ಮರೆಯದಿರಿ.

14) ಕಣ್ಣಿನ ಮೇಕಪ್ ತೆಗೆಯಿರಿ ಹಾಸಿಗೆ ಹೋಗುವ ಮೊದಲು, ನೀವು, ನಿಮ್ಮ ಕಣ್ಣಿನ ಮೇಕಪ್ ತೆಗೆಯಲು/ತೊಳೆಯಲು ಮರೆಯದಿರಿ. ರಾತ್ರಿಯಲ್ಲಿ ಕಣ್ಣಿನ ಮೇಕಪ್ ತೆಗೆಯುವುದರಿಂದ ಮೇಕಪ್ ನಿಮ್ಮ ಕಣ್ಣುಗಳ ಒಳಹೋಗದಂತೆ, ಕಣ್ಣೀನಲ್ಲಿ ತುರಿಕೆ ಕಾಣಿಸಿಕೊಳ್ಳದಂತೆ ತಡೆಯಬಹುದು.

15) ಚೆನ್ನಾಗಿ ನಿದ್ದೆ ಮಾಡಿ ಅಸಮರ್ಪಕ ನಿದ್ರೆ ನಿಮ್ಮ ಆಯಾಸಕ್ಕೆ, ತಲೆನೋವಿಗೆ ಕಾರಣವಾಗಬಹುದು. ಇದು ನಿಮ್ಮಲ್ಲಿ ಕಣ್ಣಿನ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಚೆನ್ನಾಗಿ ನಿದ್ದೆ ಮಾಡಿ. ಇದು ಉತ್ತಮ ದೃಷ್ಟಿಗೆ ಸಹಾಯ ಮಾಡಬಹುದು ಮತ್ತು ನಿಮ್ಮ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

16) ಹೆಡ್ ಮಸಾಜ್ ವಾರಕ್ಕೊಮ್ಮೆ ಮಲ್ಲಿಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ನಿಮ್ಮ ತಲೆಯನ್ನು ಮಸಾಜ್ ಮಾಡಿ. ಇದು ಜಾಗರೂಕತೆಯನ್ನು ಹೆಚ್ಚಿಸುವ ಮತ್ತು ಗಮನವನ್ನು ಸಕ್ರಿಯಗೊಳಿಸುವನಿಮ್ಮ ಮೆದುಳಿನ ಬೀಟಾ ಅಲೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.