ಕನ್ನಡಿಗರಾದ ಕೆಎಲ್ ರಾಹುಲ್-ಸ್ಟುವರ್ಟ್ ಬಿನ್ನಿಗೆ ಲಕ್…

0
1862

ಆಗಸ್ಟ್ 27 ಮತ್ತು 28ರಂದು ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟಿ20 ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.ಇಬ್ಬರು ಆಟಗಾರರು ಮಾತ್ರ ಭಾರತದಿಂದ ಅಮೆರಿಕಾಗೆ ಪ್ರಯಾಣ ಬೆಳಸಲಿದ್ದಾರೆ. ವಿಂಡೀಸ್ ವಿರುದ್ಧ ಟೆಸ್ಟ್ ಆಡುತ್ತಿರುವ ತಂಡದಲ್ಲಿ 12 ಆಟಗಾರರು ಆಯ್ಕೆಯಾಗಿದ್ದಾರೆ.

ಬಿಸಿಸಿಐ ಮಾಸ್ಟರ್ ಪ್ಲಾನ್’ನಿಂದ ಕನ್ನಡಿಗ ಕೆಎಲ್ ರಾಹುಲ್ಗೆ ಲಕ್ ಹೊಡೆದಿದೆ. ರೈನಾ-ಪಾಂಡೆ ಡ್ರಾಪ್ ಆಗಿದ್ದರಿಂದ ಅವರ ಸ್ಥಾನಕ್ಕೆ ಕೆಎಲ್ ರಾಹುಲ್ ಮತ್ತು ಸ್ಟುವರ್ಟ್ ಬಿನ್ನಿ ಆಯ್ಕೆಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ರಾಹುಲ್ಗೆ ಚಾನ್ಸ್ ಸಿಕ್ಕಿದೆ. 11ರ ಬಳಗದಲ್ಲಿ ರಾಹುಲ್ ಆಡಿದರೆ ಕಮಾಲ್ ಮಾಡಲಿದ್ದಾರೆ. ಬಿನ್ನಿ 2 ಟಿ20 ಪಂದ್ಯಗಳನ್ನಾಡಿದ್ದಾರೆ.

ರಂಗೇರಿದ 20-20 ಹಣಾಹಣಿ :

ಹೌದು, ಭಾರತ-ವಿಂಡೀಸ್ ತಂಡಗಳು ಅತ್ಯುತ್ತಮ ಆಟಗಾರರನ್ನೇ ಆಯ್ಕೆ ಮಾಡಿವೆ. ಎಲ್ಲರೂ ಟಿ20 ತಜ್ಞ ಪ್ಲೇಯರ್ಸ್. ಹೀಗಾಗಿ ಎರಡು ಪಂದ್ಯಗಳು ರೋಚಕವಾಗಿರಲಿವೆ.

ಕಾಸ್ಟ್ ಕಟಿಂಗ್ ಬಿ.ಸಿ.ಸಿ.ಐ : ಪಾಂಡೆ-ರೈನಾ ಡ್ರಾಪ್

ನಾಯಕ ಧೋನಿ ಆಯ್ಕೆ ಮಾಡುವುದು ಅನಿವಾರ್ಯ. ಟಿ20 ತಜ್ಞ ಬೌಲರ್ ಆಗಿರುವುದರಿಂದ ಬುಮ್ರಾ ಆಯ್ಕೆಯಾಗಿದ್ದಾರೆ. ಕೇವಲ ಎರಡು ಟಿ20 ಪಂದ್ಯವನ್ನಾಡಲು ಭಾರತದಿಂದ ಅಮೆರಿಕಾಗೆ ಆಟಗಾರರನ್ನು ಕಳುಹಿಸಿ ದುಡ್ಡು ದುಂದು ವೆಚ್ಚ ಮಾಡಲು ಬಿಸಿಸಿಐಗೆ ಇಷ್ಟವಿಲ್ಲ. ಹೀಗಾಗಿ ವರ್ಲ್ಡ್ಕಪ್ ಟಿ20 ತಂಡದಲ್ಲಿದ್ದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಮನೀಶ್ ಪಾಂಡೆಯನ್ನು ಆಯ್ಕೆ ಮಾಡಿಲ್ಲ. ವಿಂಡೀಸ್’ನಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡುವ ಮೂಲಕ ದುಂದ್ದುನ ವೆಚ್ಚಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ.

ಭಾರತ ಟಿ20 ತಂಡ :

ನಾಯಕ ಎಂ.ಎಸ್. ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್, ಉಮೇಶ್ ಯಾದವ್.