ಕನ್ನಡ ಚಿತ್ರರಂಗದ ತಾಯಿ ಸಮಾನರಾದ ಪಾರ್ವತಮ್ಮ ರಾಜಕುಮಾರ್ ಇನ್ನಿಲ್ಲ!!

0
872

ಪಾರ್ವತಮ್ಮ ರಾಜಕುಮಾರ್ ಇನ್ನಿಲ್ಲ!!!

ಕನ್ನಡ ಚಿತ್ರ ನಿರ್ಮಾಪಕರಾದ, ಮೇರು ನಟ ರಾಜಕುಮಾರ್ ರವರ ಧರ್ಮಪತ್ನಿ ಪಾರ್ವತಮ್ಮ ರಾಜಕುಮಾರವರು ಬುಧವಾರ ಬೆಳಿಗ್ಗೆ ೪.೪೦ ರ ಸುಮಾರಿಗೆ ಕೊನೆ ಉಸಿರೆಳೆದಿದ್ದಾರೆ. ಇವರಿಗೆ ೭೮ ವರ್ಷ ವಯಸ್ಸಾಗಿತ್ತು.

        Image result for parvathamma rajkumar ಮೇ ೧೪ ರಿಂದ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು  ಕಳೆದ ರಾತ್ರಿ ಹೃದಯಾಘಾತದಿಂದ  ಸುಮಾರು ೪.೪೦ ರ ಹೊತ್ತಿಗೆ ಸಾವನ್ನಪ್ಪಿದ್ದಾರೆ  ಎಂದು ರಾಮಯ್ಯ ಆಸ್ಪತ್ರೆಯ ಆಡಳಿತಾಧಿಕಾರಿ ನರೇಶ್ ಶೆಟ್ಟಿಯವರು ತಿಳಿಸಿದ್ದಾರೆ.  ಡಿ ಪಾರ್ವತಮ್ಮ ರಾಜಕುಮಾರ್ ರವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕಳೆದ ೧೫ ದಿನಗಳಲ್ಲಿ ಅದು ಶ್ವಾಶಕೋಶ  ಹಾಗು ಯಕೃತ್ತನ್ನು ಆವರಿಸಿತ್ತು ಎಂದು ಹೇಳಲಾಗುತ್ತಿದೆ.

Image result for parvathamma rajkumarಪರ್ವತಮ್ಮರವರು ೮೦ ಚಿತ್ರಗಳನ್ನು ನಿರ್ಮಾಣ ಮಾಡಿರುತ್ತಾರೆ, ಇದು ಕನ್ನಡ ಚಿತ್ರ ರಂಗಕ್ಕೆ ಒಂದು ಮಹತ್ತರ ಕೊಡುಗೆ. ಕನ್ನಡ ಚಿತ್ರರಂಗ ಬೆಳವಣಿಗೆಗೆ ಇವರ ಕೊಡುಗೆ ಅಪಾರ. ಇವರನ್ನು ಕಳೆದುಕೊಂಡ ಕನ್ನಡ ಚಿತ್ರ ರಂಗ, ಇವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ..

Image result for parvathamma rajkumarಅವರ ಮರಣ ಸಮಯದಲ್ಲಿ ಅವರ ಪುತ್ರರಾದ ರಾಘವೇಂದ್ರ ರಾಜ್ಕುಮಾರ್, ಶಿವ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ರವರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರು.
        ಪಾರ್ವತಮ್ಮ ರಾಜ್ಕುಮಾರ್ ರವರ ಈ ಹಠಾತ್  ಮರಣದಿಂದ ಕನ್ನಡ ಚಿತ್ರರಂಗ ಒಬ್ಬ ತಾಯಿಯನ್ನು ಕಳೆದು ಕೊಂಡಿದೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.