ಕರಿಯ ನಿನ್ನ ಮುಖ ನೋಡ್ಕೋ ಹೋಗು ಅಂತ ಬೈದಿದ್ದಕ್ಕೆ ಸ್ವಾತಿನ ಕೋಂದೆ…!

0
1195

ತಮಿಳುನಾಡು: : ‘ನಾನು ಆಕೆಯ ಮುಂದೆ ನನ್ನ ಪ್ರೀತಿಯ ವಿಷಯ ಹೇಳಿದಾಗ ಆಕೆ ನನ್ನ ಸೌಂದರ್ಯದ ಬಗ್ಗೆ ಎಲ್ಲರ ಮುಂದೆ ಅವಮಾನಿಸಿದ್ದಳು. ಜತೆಗೆ ನೀನು ನೋಡಲು ಕುರೂಪನಾಗಿದ್ದಿಯಾ ಎಂದು ಹೇಳಿದ್ದಕ್ಕೆ ನಾನು ಆಕೆಗೆ ಕೊಲೆ ಮಾಡಿರುವೆ’ ಎಂದು ಇನ್ಫೋಸಿಸ್ ಉದ್ಯೋಗಿ ಟೆಕ್ಕಿ ಸ್ವಾತಿ ಕೊಲೆ ಪ್ರಕರಣದ ಆರೋಪಿ ರಾಮ್ ಕುಮಾರ್ ಹೇಳಿದ್ದಾನೆ.

ಚೆನ್ನೈನ ನುಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಮಾಡಿದ್ದ ಆರೋಪಿ ರಾಮ್ ಕುಮಾರ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದು, ವಿಚಾರಣೆ ವೇಳೆ ಮಹತ್ವದ ಮಾಹಿತಿಗಳು ಸಿಕ್ಕಿವೆ ಅಂತೆ.

ತಿರುನ್ವೇಲಿಯ ರಾಂಕುಮಾರ್ ಸ್ವಾಮಿಯನ್ನು  ಮೊದಲು ನೋಡಿದ್ದು, ಫೇಸ್ಬುಕ್ ನಲ್ಲಿ ಅಂತೆ, ಸ್ವಾತಿಯನ್ನು ನೋಡಿ ಮನಸೋತ ರಾಂಕುಮಾರ್, ಉದ್ಯೋಗ ಹುಡುಕುವ ನೆಪ ಹೇಳಿ ತಿರುನ್ವೇಲಿಯಿಂದ ಚೆನ್ನೈಗೆ ಬಂದು ಸ್ವಾತಿ ಮನೆಯ ಪಕ್ಕದಲ್ಲಿಯೇ ರೂಂ ಮಾಡಿಕೊಂಡಿದ್ದ ಎನ್ನಲಾಗಿದೆ.

ದಿನ ಸ್ವಾತಿಯನ್ನು ಫಾಲೋ ಮಾಡುವುದು, ಸ್ವಾತಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳುವುದೇ ರಾಂಕುಮಾರ್ ನಿತ್ಯ ಕೆಲಸವಾಗಿತ್ತಂತೆ, ಸ್ವಾತಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಸ್ವಾತಿ ಫೇಸ್ಬುಲ್ ನಲ್ಲಿ ಅಫ್ಲೋಡ್ ಮಾಡುತ್ತಿದ್ದ ಚಿತ್ರಗಳಿಗೆ ಲೈಕ್, ಕಾಮೆಂಟ್ ಮಾಡುತ್ತಿದ್ದನಂತೆ.

ಹೀಗೆ ಸ್ವಾತಿಯೊಂದಿಗೆ ಗೆಳತನ ಸಂಪಾದಿಸಿದ ರಾಂ ಕುಮಾರ್ ಸ್ವಾತಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾನೆ, ಆದರೆ ಸ್ವಾತಿ ಇದಕ್ಕೆ ಒಪ್ಪಿಲ್ಲ, ಆದರೂ ಸ್ವಾತಿಯ ಹಿಂದೆ ಬಿದ್ದಿದ್ದ ರಾಂ ಕುಮಾರ್, ಮತ್ತೆ ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ, ಇದರಿಂದ ರೋಸಿ ಹೋದ ಸ್ವಾತಿ ಮನೆಯವರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ್ದಾಳೆ.

ಕೊಲೆಯಾಗುವುದಕ್ಕೂ ಒಂದೆರೆಡು ದಿನ ಮುಂಚೆ ಸ್ವಾತಿಗೆ ಮತ್ತೆ ರಾಂ ಕುಮಾರ್ ಪ್ರಫೋಸ್ ಮಾಡಿದ್ದಾನೆ, ಆಗ ಸ್ವಾತಿ, ರಾಂಕುಮಾರ್ ನನ್ನು ಕರಿಯ ನಿನ್ನ ಮುಖ ನೋಡ್ಕೋ ಹೋಗು ಅಂತ ಬೈದಿದ್ದಾಳೆ, ಇದರಿಂದಾ ಸಿಟ್ಟಿಗೆದ್ದ ರಾಂಕುಮಾರ್, ರೈಲ್ವೆ ನಿಲ್ದಾಣದಲ್ಲಿ ಕೊನೆ ಬಾರಿ ಪ್ರಫೋಸ್ ಮಾಡಿದಾಗಲೂ ಸ್ವಾತಿ ಒಪ್ಪದೇ ಇದ್ದಾಗ, ಅವಳನ್ನು ಕೊಲೆ ಮಾಡಿ ತನ್ನೂರಿಗೆ ಹೋಗಿದ್ದಾನೆ.

ಊರಿಗೆ ಹೋದ ಮೇಲೆ ಕುಟುಂಬಸ್ಥರ ಜೊತೆ ಸೇರದೆ ಒಂಟಿಯಾಗಿ ಇರುತ್ತಿದ್ದಂತೆ, ಮೇಕೆಗಳೊಂದಿಗೆ ರಾತ್ರಿ ವೇಳೆ ಕುಡಿದು ಮಲಗುತ್ತಿದ್ದನಂತೆ, ಕೊಲೆ ಮಾಡಿರುವ ವಿಚಾರ ಹಾಗೂ ತನ್ನಲ್ಲಿ ಆಗಿರುವ ಬದಲಾವಣೆ, ಕುಟುಂಬಸ್ಥರ ಗಮನಕ್ಕೆ ಬಾರದಂತೆ ಜಾಗೃತೆ ವಹಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ರಾಂ ಕುಮಾರ್ ಹೇಳಿದ್ದಾನೆ ಎಂದು ವರದಿಯಾಗಿದೆ.