ಕರ್ನಾಟಕ ಬಿ.ಜೆ.ಪಿ ಗೆ ಯಾರ್ ಸ್ವಾಮಿ ಅಧ್ಯಕ್ಷರು…!?

0
1161
Minister Shobha Karandlaje arrives at Sri Jaydeva Institute of Cardiovascular Sciences & Research on Bannerghatta road in Bangalore on Sunday to visit former Chief Minister B S Yeddyurappa who was rushed to the hospital after he complained of chest pain on Saturday night. –KPN

ಹೌದು, ಹೀಗೊಂದು ಪ್ರೆಶ್ನೆ ಬಿ.ಜೆ.ಪಿ ಕಾರ್ಯಕರ್ತರಲ್ಲಿ ಮೂಡಿದೆ, “ನಾವ್ ಯಡ್ಯೂರಪ್ಪ ಅವ್ರ್ನ ಮೀಟ್ ಮಾಡಕ್ ಬಂದ್ರೆ ಹೋಗ್ ಮೇಡಂನ ವಿಚಾರಿಸಿ” ಅಂತಾರೆ ಸ್ವಾಮಿ…. ಇದು ದಿನನಿತ್ಯ ಯಡ್ಯೂರಪ್ಪ ಅವರನ್ನ ಮೀಟ್ ಮಾಡಲು ಬರುವ ಕಾರ್ಯಕರ್ತರಿಗೆ ಸಿಗೊ ಉತ್ತರ… ಈ ಮೇಡಂ ಬೇರೆ ಯಾರು ಅಲ್ಲ ಓದುಗರೇ, ಬಿ.ಜೆ.ಪಿ ನಾಯಕಿ ಶೋಭಾ ಕರಂದ್ಲಾಜೆ, ಅದಕ್ಕೆ ಪೂರಕವಾಗಿ ಯಡಿಯೂರಪ್ಪ ಅವರೂ ಕೂಡ ತಳ ಮಟ್ಟದ ಕಾರ್ಯಕರ್ತರಿಗೆ ಸಿಗ್ತಾ ಇಲ್ಲ.

ಇಂದು ಮಲ್ಲೇಶ್ವರಂ ಬಿ.ಜೆ.ಪಿ ಕಚೇರಿಯಲ್ಲಿ ನೆಡೆದ ಕಾರ್ಯಕರ್ತರ ಸಾಮಾನ್ಯ ಸಭೆಯಲ್ಲಿ ಭಿನ್ನಮತೀಯರ ಗುಂಪು ಶೋಭಾ ಅವರ ಮೇಲೆ ಆಕ್ರೋಶ ವೆಕ್ತಪಡಿಸಿತು. ಇದರೊಂದಿಗೆ ಪಕ್ಷದೊಳಿಗಿನ ಆಕ್ರೋಶ ಸ್ಫೋಟಗೊಂಡಿದೆ. ಎಲ್ಲರಿಗೂ ತಿಳಿದಿರುವಂತೆ ಸಿ.ಟಿ ರವಿ ಗುಂಪು ಮತ್ತೆ ಶೋಭಾ ಗುಂಪಿನ ನಡುವೆ ಮುಸುಕಿನ ಗುದ್ದಾಟ ನೆಡೆಯುತ್ತಲೇ ಇದೆ. ಈ ವಿಚಾರವಾಗಿ ಪಕ್ಷದೊಳಗಿನ ನಿಷ್ಟಾವಂತ ಕಾರ್ಯಕರ್ತ ಅಸಮಾಧಾನಗೊಂಡಿದಾನೆ.

ಆದರೆ ಯಾರೊಬ್ಬರೂ ಕೂಡ ಯಡಿಯೂರಪ್ಪ ಅವರ ನಾಯಕತ್ವ ಬಗ್ಗೆ ಚಕಾರ ಎತ್ತಲಿಲ್ಲ ಎನ್ನಲಾಗಿದೆ…