ಕುವೆಂಪುರವರ ಕುಪ್ಪಳ್ಳಿ – ಕವಿಶೈಲ

0
1907

ಕವಿಮನೆ

ಕಾಡು ಮುತ್ತು ಕೊಡತಲಿರುವ

ಸೊಬಗವೀಡು ನನ್ನ ಮನೆ.

                               -ಕುವೆಂಪು

ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನುದಾರರ ಮನೆಯ ಮಾದರಿಯಾಗಿದೆ.

ಭೀಮ ಗಾತ್ರದ ಮುಂಡಿಗೆಗಳು ಕೆತ್ತನೆ ಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ನೆನಪಿಸುವಂತಿವೆ.

kevempu_house

ಕುವೆಂಪು ಅವರ ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರ ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂಡಿರುವ ಮಹಡಿ, ‘ಮನೆಯ ಶಾಲೆ’ ನಡೆಯುತ್ತಿದ್ದ ಸ್ಥಳ, ‘ಅಜ್ಜಯ್ಯನ ಅಭ್ಯಂಜನದ’ ಬಚ್ಚಲುಮನೆ, ಕೊಳ, ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ.

ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪು ಅವರ ದಿನನಿತ್ಯ ಬಳಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ಪುಸ್ತಕಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತಪ್ರತಿಗಳೂ ಇಲ್ಲಿವೆ.

ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕ ವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂಧುಗಳ ಛಾಯಾಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತಿದ್ದ ಗೃಹಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ಸಾಹಿತ್ಯ ಕೃತಿಗಳು

ಶ್ರೀ ರಾಮಾಯಣ ದರ್ಶನಂ – ಮಹಾಕಾವ್ಯ

(ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕೈತಿ)

ಕಾನೂರು ಹೆಗ್ಗಡತಿ – ಕಾದಂಬರಿ.

ಮಲೆಗಳಲ್ಲಿ ಮದುಮಗಳು – ಕಾದಂಬರಿ.

ನೆನಪಿನ ದೋಣಿಯಲ್ಲಿ – ಆತ್ಮಚರಿತ್ರೆ.

ಕವನ ಸಂಗ್ರಹಗಳು:-

ನಾಟಕಗಳು

ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾಕೃತಿಗಳು.

ವೈಚಾರಿಕ ಲೇಖನಗಳು.

ಮಲೆನಾಡಿನ ಚಿತ್ರಗಳು – ಲಲಿತ ಪ್ರಬಂಧ.

ಕಥಾಸಂಕಲನಗಳು.

ಜೀವನ ಚರಿತ್ರೆಗಳು.

ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು

*1956- ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ನೇಮಕ.

*1957 – ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ.

*1958 – ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ.

*1964 – ರಾಜ್ಯ ಸರ್ಕಾರದಿಂದ ರಾಷ್ಟ್ರಕವಿ ಬಿರುದಿನ ಗೌರವ.

*1968 – ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ.

*1988 – ಕರ್ನಾಟಕ ಸರ್ಕಾರದ ಪ್ರಥಮ ‘ಪಂಪಪ್ರಶಸ್ತಿ’ ಪ್ರದಾನ.

*1992 – ಕರ್ನಾಟಕ ಸರ್ಕಾರದ ಪ್ರಥಮ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ.

*1956 – ರಿಂದ 1995 ವರೆಗೆ 8 ಬೇರೆ – ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವುದು.

ಕವಿಶೈಲ

ಕವಿಮನೆಯ ದಕ್ಷಿಣ ದಿಕ್ಕಿಗೆ ಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ. ಕವಿಯ ಸ್ಫೂರ್ತಿಯ ತಾಣ. ಕುವೆಂಪು ಎಳವೆಯಿಂದಲೇ ಆಕರ್ಷಿತರಾಗಿ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದ ಸ್ಥಳ ಕವಿಶೈಲ. ಅವರ ಅನೇಕ ಪ್ರಸಿದ್ಧ ಕವಿತೆಗಳೂ, ಕಾದಂಬರಿ – ಮಹಾಕಾವ್ಯಗಳ ನಿಸರ್ಗ ವರ್ಣನೆಗಳೂ ಇಲ್ಲಿಯ ಸ್ನಿಗ್ಧ, ಭವ್ಯ ಸೌಂದರ್ಯದಿಂದ ಪ್ರೇರಿತವಾದವು. ಕವಿಯೇ ಹೇಳುವಂತೆ –

“ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ

ಈ ಸಹ್ಯ ಮಹಾ ಬೃಹತ್ತಿನಲ್ಲಿ”

ಕುವೆಂಪು ರವರ ಆಪ್ತ ಸ್ನೇನಿತರು, ಸಾಹಿತಿಗಳು ಆಗಾಗ ಕುಪ್ಪಳ್ಳಿಗೆ ಕವಿಶೈಲಕ್ಕೆ ಭೇಟಿ ನೀಡುತ್ತಿದ್ದುದುಂಟು. 1936 ರಲ್ಲಿ ಕವಿಶೈಲದ ಬಂಡೆಯ ಮೇಲೆ “ದೇವರ ರುಜು”ವಿನ ಸಮ್ಮುಖದಲ್ಲಿ, ಇರುವ ತಮ್ಮ ಹೆಸರಿನ ಅಕ್ಷರಗಳನ್ನೂ ಕೆತ್ತಿ ತಮ್ಮ ಭೇಟಿಯ ಗುರುತುಗಳನ್ನು ಊಳಿಸಿ ಹೋಗಿದ್ದಾರೆ. ಕುವೆಂಪು, ಬಿ.ಎಂ.ಶ್ರೀ,. ಟಿ.ಎಸ್. ವೆಂ. ಎಂಬ ಅಕ್ಷರಗಳು ಇಲ್ಲಿವೆ.

ಬಾಲ್ಯದ ಒಡನಾಡಿಯಾಗಿ, ನಂತರ ಸ್ಮೃತಿಕೋಶದ ಭಾಗವಾಗಿ, ಕವೆಂಪುರವರನ್ನು ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ 11.11.1994 ರಂದು ಅವರ ಭೌತಿಕ ಶರೀರ ಲೀನವಾಯಿತು. ಕವಿಯ ಪ್ರೀತಿಯ ಕವಿಶೈಲದ ಅಂತಿಮ ಸಂಸ್ಕಾರ ನಡೆಯಿತು. ಆ ಜಾಗವೀಗ ಇಲ್ಲಿನ ಪ್ರಕೃತಿಯ ಚೆಲುವಿನೊಡನೆ ಸೇರಿ ಪವಿತ್ರ ಪ್ರಭಾವಲಯವೊಂದನ್ನು ಸೃಷ್ಡಿಸಿದೆ.

“ಗಿರಿಯ ಬಿತ್ತರ, ಶಿಖರದತ್ತರ ಹಾಗೂ ರಸಋಷಿಮತಿ ಕವಿದೃಷ್ಟಿ”ಗಳು ಕೂಡಿ ಸೃಷ್ಟಿಸಿದ ಭವ್ಯ ಸಾಹಿತ್ಯ ಲೋಕದ ಅನುಭೂತಿ ಕವಿಶೈಲದಲ್ಲಿ ನಿಂತಾಗ ಆದೀತು. ಕಲಾವಿದ ಕೆ.ಟಿ. ಶಿವಪ್ರಸಾದ್ ರವರ ಬೃಹತ್ ಶಿಲಾ ಶಿಲ್ಪದ ರೂಪದಲ್ಲಿ ನಿಂತಿದೆ. ‘ಸ್ಥಳ ನಿರ್ದಿಷ್ಟ ಕಲಾಕೃತಿಗೆ” ಉತ್ತಮ ಉದಾಹರಣೆ ಈ ಶಿಲ್ಪಗಳು.

ಕವಿಮನೆಯಿಂದ ಕವಿಶೈಲಕ್ಕೆ ಕಾಲುದಾರಿಯಲ್ಲಿ ನಡೆದರೆ 5-10 ನಿಮಿಷ ಬೇಕಾಗುತ್ತದೆ. ರಸ್ತೆಯ ಮೂಲಕ ವಾಹನದಲ್ಲೂ ಹೋಗಬಹುದು.

ಕುವೆಂಪು ಜೈವಿಕ ಧಾಮ

ಕುಪ್ಪಳ್ಳಿ ಮತ್ತು ಕವಿಶೈಲ ಪರಿಸರದ ಸುತ್ತಲಿನ ಸುಮಾರು 3,600 ಎಕರೆ ಅರಣ್ಯ ಪ್ರದೇಶವನ್ನು ‘ಕುವೆಂಪು ಜೈವಿಕ ಅರಣ್ಯಧಾಮ’ ಎಂದು ಕರ್ನಾಟಕ ಸರ್ಕಾರವು ಘೋಷಿಸಿ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ.

ಜೀವ ವೈವಿಧ್ಯದ ದರಷ್ಟಿಯಿಂದ ಮುಖ್ಯವಾದ ಪ್ರಪಂಚದ ಮೊದಲ18 ಸ್ಥಳಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಅರಣ್ಯ ಇಲ್ಲಿದೆ. ಅನೇಕ ಬಗೆಯ ಅಪರೂಪದ ಪ್ರಾಣಿ – ಪಕ್ಷಿಗಳೂ, ಗಿಡಮೂಲಿಕೆಗಳೂ, ವಿರಳ ಪ್ರಭೇದವಾದ ಅಶೋಲ ವೈಕ್ಷ (Saraca Indica) ಗಳೂ ಈ ಕಾಡಿನಲ್ಲಿವೆ. ವೀಕ್ಷಣೆ – ಸಂಶೋಧನೆ ಕಾರ್ಯಕ್ಕೆ ಈ ಅರಣ್ಯಧಾಮದಲ್ಲಿ ಅನುಕೂಲವಿದೆ. ಪ್ರಕೃತಿ ಪ್ರಿಯರು ಇಲ್ಲಿ ತಂಗಿ, ಚಾರಣ ಹಮ್ಮಿಕೊಳ್ಳಬಹುದು. ಕವಿಮನೆಯ ಪಕ್ಕದಲ್ಲಿ ಚಿಟ್ಟೆವನವನ್ನು ಅಭಿವೃದ್ಧಿಪಡಿಸಲಾಗಿದೆ.

ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನ

ಮಲೆನಾಡಿನ ಮನೆಗಳ ಸಾಂಪ್ರದಾಯಿಕ ವಿನ್ಯಾಸದಲ್ಲಿ ನಿರ್ಮಿಸಿರುವ ಸುಂದರ ಕಟ್ಟಡ. ಸ್ಥಳೀಯವಾಗಿ ದೊರೆಯುವ ಕಲ್ಲಿಂದ ಕಂಬ, ತೊಲೆಗಳನ್ನು ಹೆಚ್ಚನದಾಗಿ ಬಳಸಲಾಗಿದೆ.

15%e0%b2%b6%e0%b2%a4%e0%b2%ae%e0%b2%be%e0%b2%a8%e0%b3%8b%e0%b2%a4%e0%b3%8d%e0%b2%b8%e0%b2%b5%e0%b2%a6-%e0%b2%95%e0%b2%9f%e0%b3%8d%e0%b2%9f%e0%b2%a1

ಒಳಾಂಗಣದಲ್ಲಿ ‘ಹೇಮಾಂಗಣ’ ಹೆಸರಿನ ರಂಗಮಂದಿರ ಇದೆ. ಕೆಳ ಅಂತಸ್ತಿನಲ್ಲಿ ಗ್ರಂಥಾಲಯವಿದೆ, ಅಧ್ಯಯನಾಸಕ್ತರು, ಪ್ರವಾಸಿಗಳು ಉಳಿದುಕೊಳ್ಳಲು ಕೊಠಡಿಗಳು ಮತ್ತು ಅಗತ್ಯ ಸೌಲಭ್ಯಗಳು ಇಲ್ಲಿವೆ.

ಮುಂಭಾಗದ ಕೊಠಡಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಯಲಯದ ಕುವೆಂಪು ಅಧ್ಯಯನ ಕೇಂದ್ರದ ಕಛೇರಿಯಿದೆ, ಮಹಡಿಯಲ್ಲಿರುವ ಸಭಾಂಗಣ ಸಾಹಿತ್ಯ ಗೋಷ್ಠಿಗಳನ್ನು ನಡೆಸಲು ಅನುಕೂಲವಾಗಿದೆ.

ಕಟ್ಟಡದ ಮುಂಭಾಗವನ್ನು ‘ತೆರೆದ ರಂಗಭೂಮಿ’ಯಂತೆ ವಿನ್ಯಾಸಗೊಳಿಸಲಾಗಿದೆ. ಮೆಟ್ಟಿಲು ಮೆಟ್ಟಿಲಾಗಿ ಹುಲ್ಲು ಬೆಳಸಲಾದ ಜಾಗದಲ್ಲಿ ಕುಳಿತುಕೊಂಡು ಮುಖ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದು. ಒಳಾಂಗಣದಲ್ಲಿ ಕುವೆಂಪು ಸೂಕ್ತಿಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು, ಗೋಷ್ಠಿಗಳನ್ನು ಮತ್ತು ಶಿಬಿರಗಳನ್ನು ನಡೆಸಲು ಸೂಕ್ತವಾದ ಕಟ್ಟಡ ಇದಾಗಿದೆ. ವಿಶೇಷವಾಗಿ ಶಿಬಿರಾರ್ಥಿಗಳು ವಾಸ್ತವ್ಯ ಮಾಡಲು ಅನುಕೂಲವನ್ನು ಈ ಕಟ್ಟಡ ಹೊಂದಿದೆ.

ಕುವೆಂಪು ಅಧ್ಯಯನ ಕೇಂದ್ರ

ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರು ಕುಪ್ಪಳಿಯಲ್ಲಿ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ವನ್ನು ತೆರೆದಿರುತ್ತಾರೆ. ಕನ್ನಡ ಸಾಂಸ್ಕೃತಿಕ ಅಧ್ಯಯನದಲ್ಲಿ ಪಿ.ಎಚ್.ಡಿ. ಹಾಗೂ ಎಂ.ಫಿಲ್. ಸಂಶೋಧನೆಯಲ್ಲಿ ತೊಡಗುವವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಉತ್ತಮವಾದ ಗ್ರಂಥಾಲಯವನ್ನು ಸಿದ್ಧಗೊಳಿಸಲಾಗುತ್ತಿದೆ. ಕುವೆಂಪು ಕುರಿತ ಬಹಳಷ್ಟು ಕೆಲಸಗಳನ್ನು ಮಾಡಲು ಕನ್ನಡ ವಿಶ್ವವಿದ್ಯಾಲಯವು ಮುಂದಾಗಿದೆ.

ಅರಣ್ಯ ಇಲಾಖೆಯ ಕುಟೀರಗಳು

ಅರಣ್ಯ ಇಲಾಖೆ 3 ಕುಟೀರಗಳನ್ನು ಹಾಗೂ ಸಭಾಮಂಟಪವನ್ನು ಕಾಡಿನ ಮಧ್ಯದಲ್ಲಿ ನಿರ್ಮಿಸಿದೆ. ಮಳೆಗಾಲದ ನೀರನ್ನು ತಡೆದು ನಿಲ್ಲಿಸಲು ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಕುಟೀರಕ್ಕೆ ಹೊಂದಿಕೊಂಡಿರುವ 10 ಎಕರೆ  ಪ್ರದೇಶದಲ್ಲಿ ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಈ ಪ್ರದೇಶಕ್ಕೆ “ಕುವೆಂಪು ಸಂದೇಶ ವನ” ಎಂದು ಹೆಸರಿಡಲಾಗಿದೆ.

ನವಿಲು ಕಲ್ಲು

ಸುತ್ತಮುತ್ತಲ ಕಾಡುಗಳಲ್ಲಿರುವ ನವಿಲುಗಳು ಬಂದು ಈ ಶಿಲಾ ಶಿಖರದಲ್ಲಿ ವಿಹರಿಸುವುದರಿಮದ ಈ ಹೆಸರು ಬಂದಿದೆ. ಕುವೆಂಪು ಅವರ ಪ್ರಕಾರ “ವಸಂತ ಪ್ರಭಾತದ ನವಿಲುಕಲ್ಲಿನ ಸೌಂದರ್ಯವನ್ನು ನೋಡಿ ಅನುಭವಿಸಿದಲ್ಲದೆ ತಿಳಿಯುವುದಿಲ್ಲ, ಸ್ವರ್ಗಿಯ ಸದೃಶ ಚಿತ್ರಗಳು ದಿನದಿನವೂ ಅಲ್ಲಿ ಆರಾಧನೆ ನೀಡುತ್ತವೆ. ಸೂರ್ಯೋದಯ, ಸೂರ್ಯೋಸ್ತಗಳೆರಡನ್ನೂ ನೋಡಲು ಸೊಗಸಾದ ತಾಣ”

ಕುವೆಂಪು ಅವರಿಗೆ ಬಹಳ ಪ್ರಿಯವಾದ ಸ್ಥಳ, ನವಿಲುಕಲ್ಲಿಗೆ ಕುಪ್ಪಳಿಯಿಂದ ಸುಮಾರು 14 ಕಿ.ಮೀ ಇದೆ.

ಸಿಬ್ಬಲು ಗುಡ್ಡೆ

ಕುಪ್ಪಳ್ಳಿಯಿಂದ 14 ಕಿ.ಮೀ. ದೂರದಲ್ಲಿರುವ ಸಿಬ್ಬಲುಗುಡ್ಡೆ ಮತ್ತೊಂದು ನಿಸರ್ಗ ರಮ್ಯ ತಾಣ. ಇಲ್ಲಿರುವ ಪುರಾತನ ಗಣೇಶನ ಗುಡಿಯ ಹಿಂದೆ ಕಾಡಿನ ನಡುವೆ ತುಂಗಾ ನದಿ ಹರಿಯುತ್ತದೆ. “ಆಚೆ ದಡದಲ್ಲಿ ತುಸು ಹಳದಿ ಬಿಳಿ ಬಣ್ಣದ ಮರಳ ರಾಶಿ. ಅದರಂಚಿನಲ್ಲಿ ಹಚ್ಚ ಹಸಿರಿನ ವನ ಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭಿತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಅವು ವಿಘ್ನೇಶನ ರಕ್ಷೆಯಲ್ಲಿ ಬೆಳೆದು ವಿಹರಿಸುತ್ತವೆ”.

%e0%b2%b8%e0%b2%bf%e0%b2%ac%e0%b3%8d%e0%b2%ac%e0%b2%b2%e0%b3%81-%e0%b2%97%e0%b3%81%e0%b2%a1%e0%b3%8d%e0%b2%a1%e0%b3%86

ಕುವೆಂಪು ಅವರ ಪ್ರಸಿದ್ಧ ಕವಿತೆ “ದೇವರು ರುಜು ಮಾಡಿದನು” ಈ ಸ್ಥಳದ ಸ್ಫೂರ್ತಿಯಲ್ಲಿ ರಚಿತವಾದದ್ದು.

ಸಿಬ್ಬಲುಗುಡ್ಡೆ ಹಾಗೂ ನವಿಲು ಕಲ್ಲು ಅಕ್ಕ-ಪಕ್ಕದ ಸ್ಥಳಗಳು.

ಹಿರೇಕೊಡಿಗೆ

ಕುವೆಂಪು ಅವರ ತಾಯಿ ಸೀತಮ್ಮನವರ ತವರು ಮನೆ. ಕುವೆಂಪು ಅವರು 29.12.1904 ರಂದು ಜನಿಸಿದ್ದು ಈ ಮನೆಯಲ್ಲಿ, ಕುಪ್ಪಳ್ಳಿಯಿಂದ ಆರು ಕಿ.ಮೀ. ದೂರದಲ್ಲಿರುವ ಸ್ಥಳ ಹಿರೋಕೊಡಿಗೆ. ಮಹಾಕವಿಯ ಜನ್ಮಸ್ಥಳದ ಕುರುಹಾಗಿ ಅಲ್ಲಿ ‘ಸಂದೇಶ ಮಂಟಪ’ ವೊಂದನ್ನು ನಿರ್ಮಿಸಲಾಗಿದೆ.

ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗ “ಕವಿಮನೆ” ಯಾಗಿದೆ.  ಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಒಬ್ಬ ಜಮೀನ್ದಾರನ ಮನೆಯ ತರಹ ಇದೆ.  ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಈ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.  ಇಂತಹ ಮನೆಯಲ್ಲಿ ಬೆಳೆದ ಬಾಲ್ಯ ಕುವೆಂಪು ತನ್ನ ಮನೆಯ ಬಗ್ಗೆ ಅವರೇ ಬರೆದಿರುವ ಕಾವ್ಯ, ಅವರ ಈ ಮನೆಯ ಒಡನಾಟ ಎಷ್ಟಿತ್ತೆಂಬುದನ್ನು ಕಣ್ಣಮುಂದೆ ತರಿಸುತ್ತದೆ.

*ತನ್ನ ಮನೆಯ ಬಗ್ಗೆ ಬರೆದಿರುವ ಕವಿತೆ

1-%e0%b2%a4%e0%b2%a8%e0%b3%8d%e0%b2%a8-%e0%b2%ae%e0%b2%a8%e0%b3%86%e0%b2%af-%e0%b2%ac%e0%b2%97%e0%b3%8d%e0%b2%97%e0%b3%86-%e0%b2%ac%e0%b2%b0%e0%b3%86%e0%b2%a6%e0%b2%bf%e0%b2%b0%e0%b3%81%e0%b2%b5

*“ಕವಿಮನೆಯ” ವಿಹಂಗಮ ನೋಟ”

“ಕವಿಮನೆಯ” ವಿಹಂಗಮ ನೋಟ

*ಕವಿಮನೆ

3-%e0%b2%95%e0%b2%b5%e0%b2%bf%e0%b2%ae%e0%b2%a8%e0%b3%86

*ಕವಿಶೈಲ ಕಾಲುದಾರಿಯಿಂದ ಕವಿಮನೆ ನೋಟ

4%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2-%e0%b2%95%e0%b2%be%e0%b2%b2%e0%b3%81%e0%b2%a6%e0%b2%be%e0%b2%b0%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b2%b5%e0%b2%bf

*ಕವಿಮನೆಯ ಮುಂದಿನ ಉದ್ಯಾನ

5-%e0%b2%95%e0%b2%b5%e0%b2%bf%e0%b2%ae%e0%b2%a8%e0%b3%86%e0%b2%af-%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%89%e0%b2%a6%e0%b3%8d%e0%b2%af%e0%b2%be%e0%b2%a8

ಮನೆಯಿಂದ ಹೊರಗೆ ಬಂದ ಕೂಡಲೇ ಪಕ್ಕದಲ್ಲಿ ಕವಿಶೈಲಗೆ ಕಾಲುದಾರಿ ಇದೆ.  ಕವಿಶೈಲ ಕುವೆಂಪು ಮನೆಗೆ ಹೊಂದಿಕೊಂಡಂತೆ ಇರುವ ಒಂದು ಭವ್ಯವಾದ, ಪರಿಸರದ ತಾಣ.  ಮಳೆಯನ್ನು ತನ್ನ ಉಸಿರಾಗಿಸಿಕೊಂಡ ಮಲೆನಾಡಿನ ಈ ತಾಣ ನಿತ್ಯವೂ ಹಚ್ಚ ಹಸಿರಿನಿಂದ ಕೂಡಿ ಕಂಗೊಳಿಸುತ್ತಿದೆ.

6%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6-%e0%b2%b6%e0%b2%bf%e0%b2%b2%e0%b2%be-%e0%b2%b6%e0%b2%bf%e0%b2%b2%e0%b3%8d%e0%b2%aa%e0%b2%97%e0%b2%b3%e0%b3%81

*ಕವಿಶೈಲದ ಶಿಲಾ ಶಿಲ್ಪಗಳು

7-%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6-%e0%b2%b6%e0%b2%bf%e0%b2%b2%e0%b2%be-%e0%b2%b6%e0%b2%bf%e0%b2%b2%e0%b3%8d%e0%b2%aa%e0%b2%97%e0%b2%b3%e0%b3%81

*ಕವಿಶೈಲದ ಶಿಲಾ ಶಿಲ್ಪಗಳು

8%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6-%e0%b2%b6%e0%b2%bf%e0%b2%b2%e0%b2%be-%e0%b2%b6%e0%b2%bf%e0%b2%b2%e0%b3%8d%e0%b2%aa%e0%b2%97%e0%b2%b3%e0%b3%81

ಇಲ್ಲಿ ಮಾತಿಗಿಂತ ಮೌನವೆ ಶ್ರೇಷ್ಠ ಎಂದೆನಿಸುವುದರಲ್ಲಿ ಸಂದೇಹವೆ ಇಲ್ಲ.  ಅಲ್ಲಿರುವ ನಿಶಬ್ಧತೆ ಎಷ್ಟಿತ್ತೆಂದರೆ, ಮರದ ಒಂದೆ ಒಂದು ಎಲೆ ಅಲ್ಲಾಡಿದರು ಸಹ ಅದರ ಶಬ್ದ ಕೇಳಿಸುವಷ್ಟಿತ್ತು.  ನಿತ್ಯಹರಿದ್ವರ್ಣದ ಕಾಡು, ಸಹ್ಯಾದ್ರಿ ಬೆಟ್ಟಗಳ ನೋಟ ಮಲೆನಾಡಿನ ನಿಜವಾದ ಚಿತ್ರಣವನ್ನು ಪ್ರತಿಬಿಂಭಿಸುತ್ತಿತ್ತು.

9%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6-%e0%b2%b6%e0%b2%bf%e0%b2%b2%e0%b2%be-%e0%b2%b6%e0%b2%bf%e0%b2%b2%e0%b3%8d%e0%b2%aa%e0%b2%97%e0%b2%b3%e0%b3%81

ಕುವೆಂಪು ಅವರೊಬ್ಬರೆ ಅಲ್ಲದೆ ಅವರ ಆಪ್ತ ಸ್ನೇಹಿತರು ಕೂಡ ಬಂದು ಬೆಟಿಯಾಗುತ್ತಿದ್ದ ಜಾಗ ಈ ಕವಿಶೈಲ.  ಹಾಗೆ ಬಂದಾಗ ಬಿ ಎಂ ಶ್ರೀಕಂಠಯ್ಯ, ಟಿ ಎಸ್ ವೆಂಕಟರಾಯರು ಮತ್ತು ಕುವೆಂಪು ಕವಿಶೈಲದ ಬಂಡೆಯ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಉಳಿಸಿ ಹೋಗಿದ್ದಾರೆ.  ಇದನ್ನು ನೋಡುವುದೇ ಒಂದು ರೋಮಾಂಚನ.

10%e0%b2%95%e0%b3%81%e0%b2%b5%e0%b3%86%e0%b2%82%e0%b2%aa%e0%b3%81-%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6-%e0%b2%ac%e0%b2%82%e0%b2%a1%e0%b3%86%e0%b2%af-%e0%b2%ae%e0%b3%87

ಇಷ್ಟು ಅದ್ಬುತವಾದ ಕವಿಶೈಲದ ವರ್ಣನೆಯನ್ನು ಕವಿ ವಾಣಿಯಲ್ಲೇ ಕೇಳಬೇಕಾದರೆ, ಇಲ್ಲಿದೆ ನೋಡಿ…

12

“ನೀಂ ಭುವನದಲಿ ಸ್ವರ್ಗವಾಗಿಹೆ…” ಎಂಬ ಸಾಲುಗಳು ಇಲ್ಲಿಗೆ ಬರುವ ಪ್ರತಿಯೊಬ್ಬ ಪರಿಸರ ಪ್ರೇಮಿಗು ಅನ್ವಹಿಸುವುದರಲ್ಲಿ ಎರಡು ಮಾತಿಲ್ಲ.  ಕವೆಂಪುರವರನ್ನು ಜೀವನದುದ್ದಕ್ಕೂ ಪ್ರೇರೇಪಿಸಿದ ಕವಿಶೈಲದಲ್ಲಿಯೇ ಅವರ ಬಾಹ್ಯ ಶರೀರವನ್ನು ಲೀನ ಮಾಡಲಾಗಿದೆ.

11

*ಕವಿಸಮಾಧಿ ಮತ್ತು ಶಿಲಾ ಶಿಲ್ಪಗಳು

13-%e0%b2%95%e0%b2%b5%e0%b2%bf%e0%b2%b8%e0%b2%ae%e0%b2%be%e0%b2%a7%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b6%e0%b2%bf%e0%b2%b2%e0%b2%be-%e0%b2%b6%e0%b2%bf%e0%b2%b2%e0%b3%8d

*ಕವಿಶೈಲದಿಂದ ಸಹ್ಯಾದ್ರಿ ಬೆಟ್ಟಗಳ ವಿಹಂಗಮ ನೋಟ

14%e0%b2%95%e0%b2%b5%e0%b2%bf%e0%b2%b6%e0%b3%88%e0%b2%b2%e0%b2%a6%e0%b2%bf%e0%b2%82%e0%b2%a6-%e0%b2%b8%e0%b2%b9%e0%b3%8d%e0%b2%af%e0%b2%be%e0%b2%a6%e0%b3%8d%e0%b2%b0%e0%b2%bf-%e0%b2%ac%e0%b3%86

*ಶತಮಾನೋತ್ಸವದ ಕಟ್ಟಡ

15%e0%b2%b6%e0%b2%a4%e0%b2%ae%e0%b2%be%e0%b2%a8%e0%b3%8b%e0%b2%a4%e0%b3%8d%e0%b2%b8%e0%b2%b5%e0%b2%a6-%e0%b2%95%e0%b2%9f%e0%b3%8d%e0%b2%9f%e0%b2%a1

*ಕಲಾನಿಕೇತನ
16%e0%b2%95%e0%b2%b2%e0%b2%be%e0%b2%a8%e0%b2%bf%e0%b2%95%e0%b3%87%e0%b2%a4%e0%b2%a8
*ಕಾನೂರು ಹೆಗ್ಗಡತಿಯಲ್ಲಿ ಬರುವ ಹೆಗ್ಗಡತಿಯ ಪುತ್ಹಳಿ
17%e0%b2%95%e0%b2%be%e0%b2%a8%e0%b3%82%e0%b2%b0%e0%b3%81-%e0%b2%b9%e0%b3%86%e0%b2%97%e0%b3%8d%e0%b2%97%e0%b2%a1%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%b0
ತೇಜಸ್ವಿಯವರ ಬಾಹ್ಯ ಶರೀರವನ್ನು ಅವರ ತಂದೆಯೇ ಹೇಳುವಂತೆ ಸ್ವರ್ಗದಂತಿದ್ದ ಕವಿಶೈಲದಲ್ಲಿಯೇ ಲೀನಮಾಡಲಾಗಿತ್ತು.  ಬೃಹತ್ ಶಿಲಾ ಶಿಲ್ಪಾದ ಸ್ಮಾರಕ, ಪ್ರಕೃತಿಯ ಮಗದೊಂದು ಬಾಗವಾಗಿ, ಪವಿತ್ರ ಸ್ಥಳವಾಗಿ ಕಂಗೊಳಿಸುತಿತ್ತು.
18%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf-%e0%b2%b9%e0%b3%81%e0%b2%b2%e0%b2%bf%e0%b2%af
*ತೇಜಸ್ವಿಯ ಸ್ಮಾರಕ
19%e0%b2%a4%e0%b3%87%e0%b2%9c%e0%b2%b8%e0%b3%8d%e0%b2%b5%e0%b2%bf%e0%b2%af-%e0%b2%b8%e0%b3%8d%e0%b2%ae%e0%b2%be%e0%b2%b0%e0%b2%95
ಬೆಂಗಳೂರಿನಿಂದ ಪ್ರತಿದಿನವು KSRTC ಸುವಿಹಾರಿ (Sleeper Coach) ಬಸ್ಸು ರಾತ್ರಿ 10:30 ಕ್ಕೆ ಕುಪ್ಪಳಿಗೆ ಸಂಚರಿಸಲಿದೆ. ಕುಪ್ಪಳಿಯಿಂದ ಪ್ರತಿದಿನ ಮತ್ತೊಂದು ಬಸ್ಸು ರಾತ್ರಿ 08:30 ಕ್ಕೆ ಬೆಂಗಳೂರಿಗೆ ಸಂಚರಿಸಲಿದೆ.  ಯವಾಗಲಾದರೂ ಸಮಯ ಮಾಡಿಕೊಂಡು ಈ ದಾರ್ಶನಿಕ ಕವಿಯ ಅಂಗಳಕ್ಕೆ ಒಮ್ಮೆ ಬೇಟಿ ಕೊಡಿ.

ಪ್ರವಾಸಿ ಮಾಹಿತಿ

ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ (NH-13) 15 ಕಿ.ಮೀ. ಕ್ರಮಿಸಿದರೆ ಎಡಕ್ಕೆ ಕುಪ್ಪಳಿಗೆ ಹೋಗುವ ದಾರಿ ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ ದೂರದಲ್ಲಿ ಕವಿಮನೆಯಿಂದೆ. ಹತ್ತಿರದ ವಿಮಾನ ನಿಲ್ದಾಣ ಮಂಗಳೂರು 140 ಕಿ.ಮೀ ದೂರ. ಬೆಂಗಳೂರಿನಿಂದ ಪ್ರತಿ ದಿನ ಕುಪ್ಪಳ್ಳಿಗೆ ನೇರ ಸುವಿಹಾರಿ ಬಸ್ ಇದೆ. ಪ್ರವಾಸಿಗರು ಮುಂಚಿತವಾಗಿ ತಿಳಿಸಿದರೆ ಕುಪ್ಪಳಿಯಲ್ಲಿ ತಂಗಲು ಸೌಕರ್ಯವಿದೆ. ಊಟ ತಿಂಡಿಗಾಗಿ ಕ್ಯಾಂಟೀನ್ ಸೌಲಭ್ಯ ಕೂಡ ಕೇಂದ್ರಗಳಾದ ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ಒಳ್ಳೆಯ ಖಾಸಗಿ ಹೋಟೆಲ್ ಗಳು ಇವೆ.

ಹತ್ತಿರದ ಇತರ ಪ್ರೇಕ್ಷಣೀಯ ಸ್ಥಳಗಳೆಂದರೆ, ಆಗುಂಬೆ 40 ಕಿ.ಮೀ. ಶೃಂಗೇರಿ 38 ಕಿ.ಮೀ., ಮಂಡಗದ್ದೆ ಪಕ್ಷಿಧಾಮ 48 ಕಿ.ಮೀ, ಹಾಗೂ ಹೊರನಾಡು, ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ ಮತ್ತು ಪ್ರಸಿದ್ಧ ಜೈನ ಕ್ಷೇತ್ರ ಹೊಂಬುಜ (ಹುಂಚ), ಕುಂದಾದ್ರಿ ಬೆಟ್ಟ, ಜೋಗಜಲಪಾತ ಈ ಸ್ಥಳಗಳು ಹತ್ತಿರದ ಪ್ರವಾಸಿ ಸ್ಥಳಗಳಾಗಿರುತ್ತವೆ.

 

ಹೆಚ್ಚಿನ ಮಾಹಿತಿಗಾಗಿ:

ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

ಗೋಪಾಲಗೌಡ ಬಡಾವಣೆ, ಶಿವಮೊಗ್ಗ

ದೂರವಾಣಿ: 08182-251444

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು 1992ರಲ್ಲಿ ಕರ್ನಾಟಕ ಸರ್ಕಾರವು ಸ್ಥಾಪಿಸಿತು. ಸಾಹಿತಿಗಳು, ಕುವೆಂಪು ಅಭಿಮಾನಿಗಳು, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಪ್ರಮುಖರು ಇದರ ಸದಸ್ಯರಾಗಿರುವರು.

ಪ್ರತಿಷ್ಠಾನ ಕೈಗೊಂಡ ಮೊದಲ ಕೆಲಸ ಶಿಥಿಲಾವಸ್ಥೆಯಲ್ಲಿದ್ದ ಕವಿಮನೆಯ ನವೀಕರಣ. ಮೂಲ ಮನೆಯ ವಿನ್ಯಾಸ ಹಾಗೂ ಸೊಗಸಿಗೆ ಚ್ಯುತಿ ಬರದಂತೆ ಇಡೀ ಮನೆಯನ್ನು ಸಜ್ಜುಗೊಳಿಸಿ, ಮನೆಯನ್ನು ಒಳಗೊಂಡಂತೆ ಒಂದು ವಸ್ತುಸಂಗ್ರಹಾಲಯವಾಗಿ ಇಡಲಾಗಿದೆ. ಕವಿಗೆ ಸ್ಫೂರ್ತಿ ನೀಡಿದ ಸ್ಥಳ ಕವಿಶೈಲದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿರುತ್ತದೆ. ಪ್ರವಾಸಿಗರ ಅನುಕೂಲಕ್ಕೆ ನಾಮಫಲಕಗಳನ್ನು ಹಾಕುವುದರ ಮೂಲಕ ಮಾರ್ಗಗಳನ್ನು ಸೂಚಿಸಿರುತ್ತದೆ. ಕವಿಮನೆಗೆ ಬರುವವರ ಅನುಕೂಲಕ್ಕಾಗಿ ಕ್ಯಾಂಟೀನ್ ವ್ಯವಸ್ಥೆ ಸಹಾ ಒದಗಿಸಲಾಗಿದೆ. ಕವಿಯ ಜನ್ಮಶತಮಾನೋತ್ಸವ ಭವನದ ನಿರ್ಮಾಣದ ಮೂಲಕ ಪ್ರವಾಸಿಗರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಾಹಿತ್ಯಕ್ಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವವರಿಗೆ ಸ್ಥಳಾವಕಾಶ ಕೊಡುವ ವ್ಯವಸ್ಥೆ ಸಹಾ ಇರುತ್ತದೆ. ಕವಿಮನೆಯಲ್ಲಿ ಕವಿಯ ಎಲ್ಲ ಕೃತಿಗಳು ಸಿಗುವಂತೆ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ಕುವೆಂಪು ಸಾಹಿತ್ಯ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಶಿಬಿರಗಳನ್ನು ನಡೆಸಿಕೊಂಡು ಮುಂದಿನ ಜನಾಂಗಕ್ಕೆ ಅವರ ಪರಿಚಯವನ್ನು ಮಾಡಿಕೊಡುವುದು ಹಾಗೂ ಕುಪ್ಪಳ್ಳಿಯನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿರುತ್ತದೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ(ರಿ.)

ಕುಪ್ಪಳ್ಳಿ, ದೇವಂಗಿ ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

ಕರ್ನಾಟಕ ರಾಜ್ಯ, ಭಾರತ – 577415.

ದೂರವಾಣಿ: ಕವಿಮನೆ – 08265-230166, ಕಛೇರಿ- 08181 – 274120