ಕಾಳಿ ಮಾತೆಗೆ ತನ್ನ ನಾಲಿಗೆಯನ್ನು ಅರ್ಪಿಸಿದ ಕಾಲೇಜು ಯುವತಿ!

0
5291

ಕೆಲವು ನಂಬಿಕೆಗಳಲ್ಲಿ ಕ್ರಿಯಾವಿಧಿಯ ಯಾವ ಗುಣಗಳೂ ಇಲ್ಲದಿರುವಾಗ ಸಮುದಾಯಗಳು ಅಂತಹವುಗಳನ್ನು ಭಯ­ದಿಂದಲೇ ಸ್ವೀಕರಿಸುತ್ತೇವೆ. ಭಯ ನಿವಾರಿಸಿಕೊಳ್ಳಲು ಭಕ್ತಿ ಎನ್ನುವು­ದೊಂದು ಮಾರ್ಗವಾಗಿದೆ. ಭಕ್ತನ ಆತ್ಮವಿಶ್ವಾಸ ಸದೃಢಗೊಳಿಸಬೇಕಾದ ಅನೇಕರು ಅವನ ಭಯವನ್ನೇ ಬಂಡ­ವಾಳ ಮಾಡಿಕೊಂಡು ಮೂಢನಂಬಿಕೆ ಇಂದ ಬದುಕುತ್ತಿದ್ದಾರೆ. ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ತಿಳಿದವರು ತಿಳಿಸಿದರೆ ಬಲವಾಗಿ ನಂಬಿಕೊಂಡ ನಂಬಿಕೆಯೂ ಸುಳ್ಳಾಗುತ್ತದೆ..

ಈ ವೈವಿಧ್ಯ ಸಂಸ್ಕೃತಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಮೌಢ್ಯತೆಯ ಗುಂಗಿನಲ್ಲಿ ಹಾದಿತಪ್ಪಿ ಸಣ್ಣಪುಟ್ಟ ದುರಾಸೆ­ಗೊಳ­ಗಾ­ಗು­ವವರು ಬಡವರು ಮತ್ತು ತಳವರ್ಗ­ದವರೇ ಹೆಚ್ಚು ಎನ್ನುವುದನ್ನು ನೋಡಿದ್ದೇವೆ, ಆದರೆ ಈ ವೈಚಾರಿಕ ಜಗತ್ತಿನಲ್ಲಿ ಪ್ರಜ್ಞಾವಂತರು ಈ ಸಾಲಿಗೆ ಸೇರುತ್ತಿದ್ದಾರೆ ಅದಕ್ಕೆ ಉದಾಹರಣೆ ಭೋಪಾಲ್ ನಲ್ಲಿ ನೆಡೆದಿರುವ ಒಂದು ಘಟನೆ.

ಭೋಪಾಲ್-ನಲ್ಲಿ ನೆಡೆದಿರುವ ಘಟನೆ ಮೂಢನಂಬಿಕೆಯ ಪರಮಾವಧಿಯನ್ನು ಸಹ ಮೀರಿದೆ. ಕಾಳಿ ಮಾತೆಗಾಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಲಿಗೆಯನ್ನೇ ಕತ್ತರಿಸಿ ಕೊಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮಧ್ಯಪ್ರದೇಶದ ಟಿಆರ್ ಎಸ್ ಕಾಲೇಜಿನ ಆರತಿ ದುಬೆ (19ವರ್ಷ) ಎಂಬ ವಿದ್ಯಾರ್ಥಿನಿಗೆ ಕನಸಿನಲ್ಲಿ ಕಾಳಿ ಮಾತೆ ಕಾಣಿಸಿಕೊಂಡು ನಾಲಿಗೆ ಬಲಿ ಕೊಡಲು ಕೇಳಿದ್ದಳಂತೆ. ಅದರಂತೆ ಮಧ್ಯಪ್ರದೇಶದ ರೀವಾ ನಗರದಲ್ಲಿರುವ ಕಾಳಿ ಮಾತೆ ದೇವಾಲಯಕ್ಕೆ ಬಂದ ಆರತಿ ಬ್ಲೇಡ್ ನಿಂದ ನಾಲಿಗೆಯನ್ನು ಕತ್ತರಿಸಿಕೊಂಡುಬಿಟ್ಟಿದ್ದಳು. ಪುರೋಹಿತರು ಹಾಗೂ ಇತರ ಭಕ್ತರು ನೋಡ, ನೋಡುತ್ತಿದ್ದಂತೆಯೇ ಆರತಿ ಕುಸಿದು ಬಿದ್ದಿದ್ದಳು. ಕೂಡಲೇ ಅಲ್ಲಿ ಸೇರಿದ್ದ ಭಕ್ತ ಸಮೂಹ, ಪುರೋಹಿತರು ಶಾಲೊಂದನ್ನು ಆಕೆಯ ಮೈಮೇಲೆ ಹಾಕಿದ್ದರು.

ಅಚ್ಚರಿ ಏನಪ್ಪಾ ಅಂದರೆ ಸುಮಾರು 5 ತಾಸುಗಳ ನಂತರ ಆರತಿಗೆ ಪ್ರಜ್ಞೆ ಬಂದಿತ್ತು. ನೆರೆದಿದ್ದ ಭಕ್ತರು ಆಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಪ್ರಜ್ಞೆ ಬಂದ ನಂತರ ಆರತಿ ಸಂಪ್ರದಾಯದಂತೆ ನಗುಮೊಗದಿಂದಲೇ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿರುವುದಾಗಿ ವರದಿ ತಿಳಿಸಿದೆ.

image

ಈ ಸುದ್ದಿ ಎಲ್ಲೆಡೆ ಹಬ್ಬಿದ ಪರಿಣಾಮ ಸ್ಥಳಕ್ಕೆ ಪೊಲೀಸರು, ವೈದ್ಯರು ಆಗಮಿಸಿದ್ದರು. ವೈದ್ಯರು ಆಕೆಯನ್ನು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರಂತೆ!

ಈ ಬಗ್ಗೆ ಆರತಿ ತನ್ನ ಅಣ್ಣನ ಬಳಿ ಹೇಳಿಕೊಂಡಿದ್ದಳು, ಆದರೆ ತಾನು ಆಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಮಾಷೆ ಮಾಡುತ್ತಿದ್ದಾಳೆ ಅಂದುಕೊಂಡಿದ್ದೆ. ಅನಕ್ಷರಸ್ಥರು, ಮೂಢನಂಬಿಕೆ ನಂಬುವ ಜನರು ಈ ರೀತಿ ನಡೆದುಕೊಳ್ಳುತ್ತಾರೆ ಅಂತ ತಿಳಿದುಕೊಂಡಿದ್ದೆ. ಕಾಲೇಜಿಗೆ ಹೋಗುವ ನನ್ನ ತಂಗಿಯೇ ಈ ರೀತಿ ಮೂಢನಂಬಿಕೆಗೆ ಜೋತು ಬೀಳುತ್ತಾಳೆ ಅಂತ ಯಾವತ್ತೂ ನಂಬಿಲ್ಲ ಎಂದು ಆರತಿ ಸಹೋದರ ಸಚಿನ್ ಹೇಳಿರುವುದಾಗಿ ಡೈಲಿ ಮೇಲ್ ಆನ್ ಲೈನ್ ವರದಿ ಮಾಡಿದೆ.

Source: dailyhunt