ಕಾವೇರಿ ತೀರ್ಪು ನೀಡಿದ ನ್ಯಾಯಮೂರ್ತಿಗಳು ’ಹಿತಾಸಕ್ತಿ ಸಂಘರ್ಷಕ್ಕೆ ’ ಕಾರಣರಾದರೇ ?

0
618

ಮಹಾರಾಷ್ಟ್ರ ಮೂಲದ ಲಲಿತ್, 2014ರ ಆ. 13 ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.

ಕಾವೇರಿ ಜಲವಿವಾದದಲ್ಲಿ ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ  ಉದಯ್ ಉಮೇಶ್ ಲಲಿತ್ ಅವರು ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪರ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು.

15 ವರ್ಷ ಜಯಲಲಿತಾರ ವಿವಿಧ ಪ್ರಕರಣಗಳಲ್ಲಿ   ಜಯಲಲಿತಾ ಪರ ವಾಕಾಲತ್ತು ವಹಿಸಿದ್ದರು.

ವಕೀಲಿ ವೃತ್ತಿಯ ಹಿನ್ನೆಲೆಯಿಂದ ನ್ಯಾಯಾಧೀಶರಾಗಿ ನೇಮಕಗೊಂಡವರು ಈ ಹಿಂದೆ ತಾವು ವಾಕಾಲತ್ತು ವಹಿಸಿದ್ದ ವ್ಯಕ್ತಿ, ಸಂಸ್ಥೆಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ತಮ್ಮ ಮುಂದೆ ಬಂದಾಗ ವಿಚಾರಣೆಯಿಂದ ಹಿಂದೆ ಸರಿಯುವ ಸಾಮಾನ್ಯ ಸಂಪ್ರದಾಯ ಇದೆ.

ಆದರೆ, ಹೀಗೆ ಹಿಂದೆ ಸರಿಯುವುದು ಕಡ್ಡಾಯವೇನೂ ಅಲ್ಲ. ಆಯಾ ನ್ಯಾಯಮೂರ್ತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

ಕ್ರಿಮಿನಲ್ ಮೊಕದ್ದಮೆಗಳಲ್ಲಿ ಪರಿಣತರಾಗಿದ್ದ ಲಲಿತ್ ಹಲವಾರು ಹೆಸರಾಂತ ರಾಜಕಾರಣಿಗಳು, ಸಿನಿಮಾ ತಾರೆಯರು, ಅಧಿಕಾರಿಗಳ ಪರ ವಾಕಾಲತ್ತು ವಹಿಸಿದ್ದರೆ. ಈ ಪೈಕಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ಎಸ್ ಯಡಿಯೂರಪ್ಪ, ಜನರಲ್ ವಿ. ಕೆ ಸಿಂಗ್, ಸಲ್ಮಾನ್ ಖಾನ್ ಅವರ ಪರವು ವಾದ ಮಂಡಿಸಿದರು.