ಕಾವೇರಿ ವಿಷಯವಾಗಿ ಕೊನೆಗೂ ಮಾತನಾಡಿದ ಪ್ರಧಾನಿ ಮೋದಿ

0
868

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿನ ಬೆಳವಣಿಗೆ ಬಗ್ಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು, ಕರ್ನಾಟಕ, ತಮಿಳುನಾಡಿನ ಬೆಳವಣಿಗೆಯಿಂದ ನನಗೂ ವೈಯಕ್ತಿಕವಾಗಿ ನೋವಾಗಿದೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರು ಶಾಂತಿ ಕಾಪಾಡಬೇಕು ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಟ್ವೀಟ್ ಮಾಡಿರುವ ಪ್ರಧಾನಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಹಿಂಸಾಚಾರ ಸರಿಯಲ್ಲ. ಘರ್ಷಣೆಯಿಂದ ಯಾವುದೇ ಪರಿಹಾರ ಸಿಗಲ್ಲ ಎಂಬುದನ್ನು ಎರಡೂ ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಈ ವಿವಾದವನ್ನು ಕಾನೂನು ಪರಿಮಿತಿಯಲ್ಲೇ ಪರಿಹರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
https://twitter.com/PMOindiaNamo/status/775598256420118528

ಕಾವೇರಿ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಉಭಯ ರಾಜ್ಯಗಳಿಗೆ ಸಲಹೆ ನೀಡಿರುವ ಪ್ರಧಾನಿ ತಮ್ಮ ಮಧ್ಯಸ್ಥಿಕೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಪತ್ರಿಕಾ ವಿತರಣೆಯನ್ನು ಇಲ್ಲಿ ಓದಿ: http://pib.nic.in/newsite/PrintRelease.aspx