ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮಲಗಿದ್ದ ೧೭ ಯೋಧರ ಸಾವು

0
596

ಜಮ್ಮು-ಕಾಶ್ಮೀರ: ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಶಾಂತಗೊಂಡಿದೆ ಎಂದು ಕರ್ಫ್ಯೂ ಹಿಂದಕ್ಕೆ ಪಡೆದ ಕೆಲವೇ ದಿನಗಳಲ್ಲಿ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಭಾನುವಾರ ಮುಂಜಾನೆ ಗಡಿ ಭಾಗದ ಊರಿಯಲ್ಲಿರುವ ಸೇನಾಪಡೆಯ ಆಡಳಿತ ಕೇಂದ್ರದ ಮೇಲೆ ದಾಳಿ ನಡೆಸಿದ ಉಗ್ರರು ೧೭ ಯೋಧರನ್ನು ಹತೈಗೈದಿದ್ದಾರೆ. ಪ್ರತಿದಾಳಿ ನಡೆಸಿದ ಸೇನಾಪಡೆ ಎಲ್ಲಾ ನಾಲ್ವರು ಉಗ್ರರನ್ನು ಕೊಂದು ಹಾಕಿದ್ದಾರೆ. ಇದು ಇತ್ತೀಚಿನ ದಿನಗಳಲ್ಲೇ ಉಗ್ರರು ನಡೆಸಿದ ಅತೀ ದೊಡ್ಡ ದಾಳಿಯಾಗಿದೆ.

ಮುಂಜಾನೆ ೪ ಗಂಟೆ ಸುಮಾರಿಗೆ ಸೇನಾ ನೆಲೆಯ ಮೇಲೆ ‘ಫಿದಾಯಿನ್’ ಎಂದು ಹೇಳಿಕೊಳ್ಳುವ ಆತ್ಮಾಹುತಿ ತಂಡ ದಾಳಿ ನಡೆಸಿತು.

ಸುಮಾರು ೬ ಗಂಟೆಗಳ ಕಾಲ ಉಗ್ರರ ನಡುವೆ ಗುಂಡಿನ ಚಕಾಮಕಿ ನಡೆದಿದ್ದು, ೬ ಯೋಧರು ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಇದು ಒಂದೇ ದಾಳಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯೋಧರು ಗಾಯಗೊಂಡ ಘಟನೆ ಆಗಿದೆ. ಪಠಾಣ್‌ಕೋಟ್ ದಾಳಿಯಲ್ಲಿ ೭ ಮಂದಿ ಗಾಯಗೊಂಡಿದ್ದರು.

ಯೋಧರು ನಿದ್ರಿಸುತ್ತಿದ್ದ ವೇಳೆ ದಾಳಿ ನಡೆಸಿದ ಉಗ್ರರು ಎಸೆದ ಗ್ರೇನೆಡ್‌ಗೆ ಬಹುತೇಕ ಯೋಧರು ಮೃತಪಟ್ಟಿದ್ದಾರೆ. ನಂತರ ಬೆಂಕಿ ಹೊತ್ತಿಕೊಂಡಿದ್ದು ಅನಾಹುತದ ತೀವ್ರತೆ ಹೆಚ್ಚಲು ಕಾರಣವಾಯಿತು. ಈ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ ಯೋಧರು ತಂಗಿದ್ದರು.

ರಷ್ಯಾಕ್ಕೆ ತೆರಳಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಲೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದು, ತುರ್ತು ಸಭೆ ಕರೆದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣ ಮಾಡುವ ಉದ್ದೇಶದಿಂದ ಉಗ್ರರು ಈ ದಾಳಿ ಸಂಘಟಿಸಿದ್ದಾರೆ ಎಂದು ಕೇಂದ್ರ ಸರಕಾರದ ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.