ಕಾಶ್ಮೀರದಲ್ಲಿ ವಾಸಿಸುವ ಎಲ್ಲರೂ ಭಾರತೀಯರು: ಪಾಕ್’ ಪ್ರಧಾನಿಗೆ ಸ್ಪಷ್ಟ ಉತ್ತರ ನೀಡಿದ ಸುಷ್ಮಾ

0
1105

ಪಾಕ್’ಗೆ ತಿರುಗೇಟು ನೀಡಿದ ಸುಷ್ಮಾ

ಪಾಕ್ ಪ್ರಧಾನಿ ನವಾಜ್ ಷರೀಪ್ ಧೋರಣೆಗೆ ಸ್ಪಷ್ಟ ಉತ್ತರ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಶ್ಮೀರದಲ್ಲಿ ವಾಸಿಸುವ ಎಲ್ಲರೂ ಭಾರತೀಯರು, ಅವರ ದೇಶ ಭಾರತ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಕಾಶ್ಮೀರದ ಕನಸು ಶಾಶ್ವತವಾಗಿ ಕೊನೆಗೊಳ್ಳಲಿದೆ. ಭಯೋತ್ಪಾದನೆಯನ್ನು ನಾಚಿಕೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದು ಹಾಗೂ ಕಪ್ಪು ಹಣದ ಮೂಲಕ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಕಪಟ ನೀತಿಯನ್ನು ಭಾರತ ಖಂಡಿಸಿದೆ.

22 ವರ್ಷದ ಉಗ್ರ ಬುರಾನ್ ವಾನಿ ಜುಲೈ 8 ರಂದು ಪೊಲೀಸರ ಗುಂಡಿಗೆ ಬಲಿಯಾದ ನಂತರ ಕಾಶ್ಮೀರದಲ್ಲಿ ನಡೆದ ಗಲಭೆಯಲ್ಲಿ 50 ಮಂದಿ ಮೃತಪಟ್ಟು 3 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಹಿಜ್ಬುಲ್ ಮುಜಾಹಿ ದೀನ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಪಾಕಿಸ್ತಾನ ನಡೆಸಿದ್ದ ’ಕರಾಳ ದಿನಾಚರಣೆ’ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಣಿವೆ ರಾಜ್ಯದಲ್ಲಿ ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಿ ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

ಉಗ್ರ ಬುರಾನ್ ವಾನಿನನ್ನು ಹುತಾತ್ಮ ಎಂದು ಹೊಗಳುವ ಅಲ್ಲಿನ ಪ್ರಧಾನಿ ನಾಟಕ ಬಯಲಾಗಿದೆ. ಅಲ್ಲದೆ ಕಾಶ್ಮೀರದಲ್ಲಿ ಮಾನವಹಕ್ಕು ಉಲ್ಲಂಘನೆ ಹೆಚ್ಚುತ್ತಿದೆ ಎಂದು ಪಾಕ್ ನೇರನಾಗಿ ಆರೋಪ ಮಾಡಿತ್ತು. ಸೇನೆ ಗುಂಡಿಗೆ ಬಲಿಯಾದ ಬುರಾನ್ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಯುವಕರನ್ನು ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಚೋದನೆ ನೀಡುತ್ತಿದ್ದ.