ಕಿವೀಸ್ ಮುನ್ನಡೆ ಕನಸಿಗೆ ಮಳೆ ಅಡ್ಡಿ

0
468

ಭಾರತ-ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ 34 ಓವರ್ ಗಳ ಆಟವನ್ನು ಮಳೆ ನುಂಗಿ ಹಾಕಿದ್ದು, ನ್ಯೂಜಿಲೆಂಡ್ ಮುನ್ನಡೆಯ ಕನಸಿಗೆ ಅಡ್ಡಿ ಮಾಡಿದೆ.

ಕಾನ್ಪುರನ ಗ್ರೀನ್ ಪಾರ್ಕ್ ಅಂಗಳದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಪ್ರವಾಸಿ ಕಿವೀಸ್ ತಂಡದ ಬ್ಯಾಟ್ಸ್ ಮನ್ ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 9 ವಿಕೆಟ್ ಗೆ 291 ರನ್ ಗಳಿಂದ ಆಟವನ್ನು ಮುಂದುವರೆಸಿದ ಭಾರತ 318 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಕೇನ್ ವಿಲಿಯಮ್ಸನ್ ಪಡೆ 47 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿದೆ. ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲಾಥಮ್ ಅವರು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಮಾರ್ಟಿನ್ ಗುಪ್ಟಿಲ್ 21 ರನ್ ಗಳಿಸಿ ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.

ಎರಡನೇ ವಿಕೆಟ್ ಗೆ ಲಾಥಮ್ ಜೊತೆಯಾದ ನಾಯಕ ಕೇನ್ ಉತ್ತಮ ಆಟವನ್ನು ಆಡಿ, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಲಾಥಮ್ 56 ಹಾಗೂ ಕೇನ್ 65 ರನ್ ಕಲೆ ಹಾಕಿ ಅಜೇಯರಾಗಿ ಉಳಿದಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 318

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 47 ಓವರ್ ಗಳಲ್ಲಿ 1 ವಿಕೆಟ್ ಗೆ 152

(ಲಾಥಮ್ ಅಜೇಯ 56 ಕೇನ್ ಅಜೇಯ65, ಉಮೇಶ್ ಯಾದವ್ 22ಕ್ಕೆ 1).