ಕೆ.ಪಿ.ಎನ್ ಕಪಟ ಬಯಲು !

0
8062

ಕೆ.ಪಿ.ಎನ್ ಕಪಟ ಬಯಲು ! ‘ನಟ’ ರಾಜನ ಕಪಟ ನಾಟಕ ಬಹುತೇಕ ಸಾಬೀತು ! ಇನ್ಶೂರೆನ್ಸ್ ಆಸೆಗೆ ಸಿಬ್ಬಂದಿಯಿಂದಲೇ ಬಸ್ಗಳನ್ನು ಸುಟ್ಟ ಕೃತ್ಯ ಗುಪ್ತಚರ ಇಲಾಖೆಯಿಂದ ಬಯಲು.

ನಗರದ ಪ್ರಮುಖ ಟ್ರಾವೆಲ್ ಸಂಸ್ಥೆಯಾಗಿರುವ ಕೆ.ಪಿ.ಎನ್ ಟ್ರಾವೆಲ್ಸ್ ನ 52 ಬಸ್ ಗಳು ಉದ್ರಿಕ್ತರಿಂದ ಭಸ್ಮವಾಗಿರುವ ಬಗ್ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಗುಪ್ತಚರ ಇಲಾಖೆ ಮತ್ತು ದೃಶ್ಯ ಮಾಧ್ಯಮಗಳು ಇವರ ಕಪಟ ನಾಟಕವನ್ನು ಬಯಲು ಮಾಡಿದ್ದಾರೆ. ಗುಜರಿಗೆ ಹಾಕುವ ಬಸ್ ಗಳನ್ನೂ ಅವರೇ ಬೆಂಕಿ ಹಚ್ಚಿ; ಇದರಿಂದಾಗುವ ನಷ್ಟವನ್ನು ‘ವಿಮೆ’ ಪಡೆಯುವ ಉದ್ದೇಶದಿಂದ ಈ ದುಷ್ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಯಾವುದೂ ಹೊಸ ಬಸ್ ಗಳಿಲ್ಲ, ಗುಜರಿಗೆ ಸೇರಬೇಕಾಗಿದ್ದ ಬಸ್ಗಳು !

ಬ್ಯಾಟರಾಯನಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ, ನಾಯಂಡನಹಳ್ಳಿಯಲ್ಲಿರುವ ಈ ಗ್ಯಾರೇಜಿಗೆ ಬಿಗಿ ಭದ್ರತೆಯಿತ್ತು. ಒಳಗೆ ನಿಲ್ಲಿಸಿದ್ದ ಬಸ್ ಗಳಿಗೆ ಭದ್ರತೆ ಮತ್ತು ಗೇಟ್ ಇದ್ದು, ಗೇಟ್ ಗಳನ್ನೂ ಮುಚ್ಚಿತ್ತು. ಅಲ್ಲಿ ಕೆಲ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. 52 ಬಸ್ ಗಳು 7-8 ವರ್ಷ ಹಳೆಯದಾಗಿದೆ, ಯಾವುದೂ ಹವಾನಿಯಂತ್ರಿತ ಬಸ್ ಗಳಿರಲಿಲ್ಲ. ಕಳೆದ ಎರಡು, ಮೂರು ದಿನಗಳಿಂದ ಕಾವೇರಿ ವಿಚಾರವಾಗಿ ಆಗುತ್ತಿರುವ ಗಲಾಟೆಯ ದುರಪಯೋಗವನ್ನು ಪಡೆಸಿಕೊಂಡಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಅದು 2 ಎಕರೆಯ ಜಾಗ !

ಕೆ.ಪಿ.ಎನ್ ಟ್ರಾವೆಲ್ಸ್ ರವರ ಕಪಟ ನಾಟಕ ಇದೇನು ಹೊಸದಲ್ಲ. ಈ ಹಿಂದೆ ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ವಿಜೇತ ರಾದ ಡಾ.ರಾಜಕುಮಾರ್ ತೀರಿಕೊಂಡಾಗ ಕೂಡ, ಇದೆ ರೀತಿಯಾದ ಘಟನೆ ಸಂಭಿವಿಸಿತ್ತು. ಆಗ, ಕೂಡ ಕೆ.ಪಿ.ಎನ್ ಸಂಸ್ಥೆಯ ಬಸ್ ಗುರಿಯಾಗಿತ್ತು. ಆದರೆ, ತನಿಖೆ ಮಾಡುತ್ತಿರುವ ಪೊಲೀಸರು, ಟ್ರಾವೆಲ್ಸ್ ನವರು ‘ವಿಮೆ ಹಣ’ ಪಡೆಯಲು ಈ ರೀತಿಯಾದ ಕೃತ್ಯಕ್ಕೆ ಕೈಹಾಕಿರಬಹುದೆಂದು ಹೇಳಿದ್ದಾರೆ. ಅವರ ಸಿಬ್ಬಂದಿಗಳಿಂದಲೇ ಬೆಂಕಿ ಹಚ್ಚಿ, 20 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಕೆ.ಪಿ.ಎನ್ ಸಂಸ್ಥೆಯ ಮಾಲೀಕರಾದ ನಟರಾಜನ್ – ರವರು ಹೇಳಿದ್ದಾರೆ.

ರಾತ್ರಿ ಬೆಂಕಿ ಹಚ್ಚಿದರೆ ?

52 ಬಸ್ ಸುತ್ತು ಹೋಗಿದೆ ಎಂದು ಒಂದೇ ಕಣ್ಣಿನಿಂದ ಅಳುತ್ತಿರುವ ‘ನಟ’ ಭಯಂಕರ ನಟರಾಜಪ್ಪ ನವರು – ರಾತ್ರೋ ರಾತ್ರಿ ಬೆಂಕಿ ಹಚ್ಚಿದ್ರಪ್ಪ ಎಂದು ಹೇಳುತ್ತಿರುವುದು ಹಲವು ಅನುಮಾನಗಳು ಮೂಡುತ್ತಿದೆ. 2 ಎಕರೆ ವಿಸ್ತೀರ್ಣದ ಜಾಗಕ್ಕೆ, 20 ಕೋಟಿ ಮೌಲ್ಯ ಆಸ್ತಿ, ಜನ ನಿಭಿಡ ಪ್ರದೇಶದಲ್ಲಿರುವ ಬಸ್ ಡಿಪೊಗೆ ಯಾವುದೇ ಸುರಕ್ಷತೆ ಇರಲಿಲ್ಲವೇ ? ಅಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆಂದು ಕೆ.ಪಿ.ಎನ್ ಸಂಸ್ಥೆಯೇ ಹೇಳಿದೆ. ಹಾಗಿದ್ದರೆ, ಅವರು ಉದ್ರಿಕ್ತರನ್ನು ಚದುರಿಸಲು, ಪೊಲೀಸರಿಗೆ / ಅಗ್ನಿಶಾಮಕ ಇಲಾಖೆಗೆ ಏಕೆ ಮಾಹಿತಿ ನೀಡಲಿಲ್ಲ? ಇವೆಲ್ಲವೂ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿರುವುದಂತೂ ನಿಜ.

ಅವನು ಕ [ಪಟ] ರಾಜನ್ !

ಬಿಳಿ ಬಟ್ಟೆ ಹಾಕಿಕೊಂಡು, ಪ್ಯಾರಾಚೂಟ್ ತೆಂಗಿನಕಾಯಿ ಎಣ್ಣೆ ಹಾಕಿಕೊಂಡು, ತಲೆ ತುಂಬಾ ಆಡ್ ಅಡ್ಡ ಕುಂಕ್ಮ ಹಚ್ಚ್ಕೊಂಡು, ಬಿಳಿ ಕೂದಲಿಗೆ ಅಚ್ಚುಕಟ್ಟಾಗಿ ಡೈ ಬಳೆದು, ಪಂಚೆಗೆ ಮ್ಯಾಚಿಂಗ್ ಬಿಳಿ ಅಂಗಿಗೆ ಇಸ್ತ್ರಿ ಹಾಕಿ, ಕೊಬ್ಬಿದ ಕುರಿಯಂತಿರುವ ಏಳನೇ ತರಗತಿ ವರೆಗೂ ಓದಿಕೊಂಡಿರುವ ಅತ್ಯಂತ [ಅ] ಶಿಕ್ಷಿತ ನಟರಾಜ – ಇನ್ಶೂರೆನ್ಸ್ ಕಂಪನಿಗಳಿಗೆ ‘ಉಂಡೆನಾಮ’ ಹಾಕೋ ಪ್ರೋಗ್ರಾಮ್ಗೆ ನಮ್ಮ ಗುಪ್ತಚರ ಪೊಲೀಸರು ತಣ್ಣೀರ್ ಎರಚಿದ್ದಾರೆ. ಕೆ.ಪಿ. ನಟರಾಜನ್ ಮೂಲತಃ ತಮಿಳು ನಾಡಿನ ರಾಜ್ಯದ ಸೇಲಂ ಮೂಲದವನು. ಹವಾನಿಯಂತ್ರಿತ ಬಸ್ಗಳನ್ನು ನೀಡಿ, ಉತ್ತಮ ಸೇವೆ ನೀಡುತ್ತಿದ್ದಾರೆಂದು ಬಡಾಯಿ ಕೊಚ್ಚಿ ಕೊಳ್ಳುತ್ತದೆ; ‘ನಟ ‘ ಒಡೆತನದ ಈ ಸಾರಿಗೆ ಸಂಸ್ಥೆ.

ವ್ಯವಸಾಯ ಕುಟುಂಬದಿಂದ ಬಂದ ನಟರಾಜನ್, ಕ್ಲೀನರ್ ಆಗಿ ಕೆಲಸ ಮಾಡುತಿದ್ದ. ಬಿಳಿ ಪಂಚೆ, ಅಡ್ಡ್ ಅಡ್ಡ ಕುಂಕ್ಮ ಆಸಾಮಿಯ ಸಂಸ್ಥೆಗೆ 3 ನೇ ಬಾರಿ ಬೆಂಕಿ ಬಿದ್ದಿರುವುದು ಅದ್ಯಾಕೋ ನಂಬಲು ಖಂಡಿತ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ತನಿಖೆಯಲ್ಲಿ ಕೆ.ಪಿ.ಎನ್ ಕಪಟ ನಾಟಕ ಸಾಬೀತಾದಲ್ಲಿ; ಇವರ ಅನುಮತಿಯನ್ನು ಕೂಡಲೇ ರದ್ದು ಮಾಡಿ; ಇನ್ಶೂರೆನ್ಸ್ ಕಂಪನಿಗಳಿಗೆ ಮೋಸ ಮಾಡಿದಕ್ಕಾಗಿ ಕ್ರಿಮಿನಲ್ ದೂರು ದಾಖಲಿಸಿಕೊಂಡು ಅವರದೇ ಬಸ್ ನಲ್ಲಿ ‘ಪರಪ್ಪನ ಅಗ್ರಹಾರದಲ್ಲಿ’ ಹಾಕಬೇಕಾಗಿರುವುದು ಸರ್ಕಾರ ಮತ್ತು ಪೋಲೀಸರ ಕೆಲಸ.