ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಇಂದು ಬಂಪರ್ ಗಿಫ್ಟ್…

0
1692

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಇಂದು ಬಂಪರ್ ಗಿಫ್ಟ್… ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಇಂದು ಬಂಪರ್ ಗಿಫ್ಟ್ ಸಿಕ್ಕಿದೆ. 7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಶಿಫಾರಸು ಜಾರಿಯಾದ ಕಾರಣ 50 ಲಕ್ಷ ನೌಕರರು ಹಾಗೂ 58 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ನೌಕರರ ವೇತನ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಶೇಕಡ 23.5ರಷ್ಟು ಹೆಚ್ಚಾಗಲಿದೆ.

ಹೊಸದಾಗಿ ಸೇರುವ ನೌಕರರಿಗೆ ಪ್ರಸ್ತುತ ಈಗ 7 ಸಾವಿರ ರೂ.ವೇತನ ಇದ್ದರೆ, ಈ ಶಿಫಾರಸಿನಂತೆ ವೇತನ 18 ಸಾವಿರ ರೂ. ಇರಲಿದೆ. ಗರಿಷ್ಟ ವೇತನ ಈಗಿರುವ 90 ಸಾವಿರ ರೂ ನಿಂದ. 2.50ಲಕ್ಷ ರೂ.ಗೆ ಹೆಚ್ಚಳವಾಗಿದೆ. ಈ ಶಿಫಾರಸು ಜಾರಿ ಆದ ಕಾರಣ ಸರ್ಕಾರಕ್ಕೆ 1.02 ಲಕ್ಷ ಕೋಟಿ ರೂ. ಹೆಚ್ಚು ಹೊರೆ ಬಿದ್ದಿದೆ.

ಕೃಪೆ : ಪಬ್ಲಿಕ್ ನ್ಯೂಸ್