ಕೋಟಿ ದಾಟಿದ ಮಲೆಮಹದೇಶ್ವರ ಹುಂಡಿ collection…

0
2146

ಸಾಮಾನ್ಯವಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಅಷ್ಟು ಕೋಟಿ ಕಲೆಕ್ಷನ್ ಆಯ್ತು, ಇಷ್ಟ್ ಕೋಟಿ ಆಯ್ತು ಅಂತ ಕೇಳಿರ್ತೇವೆ… ಆದರೆ ಕೊಳ್ಳೇಗಾಲ ತಾಲೂಕ್ಕಿನ ಐತಿಹಾಸಿಕ ಮಲೆಮಹದೇಶ್ವರ ದೇವಸ್ಥಾನ ಒಂದೇ ತಿಂಗಳಿಗೆ ಒಂದು ಕೋಟಿ ಆರು ಲಕ್ಷದ ನಲವತ್ತು ಸಾವಿರ ರೂಪಾಯಿ(1,06,45000) ಸಂಗ್ರಹಿಸಿ ದಾಖಲೆ ನಿರ್ಮಿಸಿದ್ದು, ಹಣದ ಜೊತೆಗೆ 30 ಗ್ರಾಂ ಚಿನ್ನ, ಮತ್ತು 13 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಹೇಳಿಕೆ ನೀಡಿದೆ.

ಕರ್ನಾಟಕದ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ಅತಿ ಹೆಚ್ಚು ದೇಣಿಗೆ ಸಂಗ್ರಹವಾಗುತ್ತಿದ್ದು, ಈಗ ನಂತರದ ಸ್ಥಾನ ಮಲೆಮಹದೇಶ್ವರ ದೇವಸ್ಥಾನ ಪಡೆದುಕೊಂಡಿದೆ.