ಭಾರತಕ್ಕೆ ಅಗ್ರ ಪಟ್ಟ

0
476

ಕೋಲ್ಕತಾ ಟೆಸ್ಟ್ ಗೆದ್ದರು, ನಂ.1 ಸ್ಥಾನನೂ ಪಡೆದರು!

ಕೋಲ್ಕತಾ: ನಾಟಕೀಯ ತಿರುವುಗಳ ಹೊರತಾಗಿಯೂ ನಿರೀಕ್ಷೆಯಂತೆ ಭಾರತ ತಂಡ ೧೨೭ ರನ್ ಗಳಿಂದ ನ್ಯುಜಿಲೆಂಡ್ ತಂಡವನ್ನು ಮಣಿಸಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಆತಿಥೇಯರು ರ್ಯಾಂಕಿಂಗ್ ನಲ್ಲಿ  ನಂ.೧ ಸ್ಥಾನ ಅಲಂಕರಿಸಿತು.

ಪಂದ್ಯದ ಉಪಾಂತ್ಯ ದಿನವಾದ ಸೋಮವಾರ 8ವಿಕೆಟ್ ಗೆ 227 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ 263 ರನ್ ಗೆ ಆಲೌಟಾಯಿತು. 376 ರನ್ ಗಳ ಗುರಿ ಪಡೆದ ನ್ಯುಜಿಲೆಂಡ್ 197 ಆಲೌಟಾಗುವ ಮೂಲಕ 178 ರನ್ ಗಳಿಂದ ಸೋಲುಂಡಿತು.

ಹಸಿರು ಹಾಸಿನ ಪಿಚ್‌ನಲ್ಲಿ ನಾಲ್ಕನೇ ದಿನ ಸ್ಪಿನ್ ಬೌಲರ್‌ಗಳು ದರ್ಬಾರ್ ನಡೆಸಿದರು. ರವೀಂದ್ರ ಜಡೇಜಾ ಹಾಗೂ ರವಿಚಂದ್ರ ಅಶ್ವಿನ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಟಾಮ್ ಲಾಥಮ್ ಹಾಗೂ ಮಾರ್ಟಿನ್ ಗುಪ್ಟಿಲ್ (೨೪) ತಂಡಕ್ಕೆ ೫೫ ರನ್ ಜೊತೆಯಾಟವನ್ನು ನೀಡಿದರು. ಎಚ್ಚರಿಕೆಯ ಆಟವನ್ನು ಆಡಿದ ಜೋಡಿ ವಿಕೆಟ್ ಕಾಯ್ದುಕೊಳ್ಳುವತ್ತ ಹೆಚ್ಚು ಗಮನವನ್ನು ನೆಟ್ಟಿತು. ಆದರೆ ಪಂದ್ಯದ ೧೭ನೇ ಓವರ್ ಎಸೆದ ಅಶ್ವಿನ್ ಎಸೆತವನ್ನು ಅರಿಯುವಲ್ಲಿ ಎಡವಿದ ಗುಪ್ಟಿಲ್ ವಿಕೆಟ್ ಒಪ್ಪಿಸಿದರು.

ಎರಡನೇ ವಿಕೆಟ್‌ಗೆ ಲಾಥಮ್ ಅವರನ್ನು ಕೂಡಿದ ಮ್ಯಾಟ್ ನಿಕೋಲ್ಸ್ ಜವಾಬ್ದಾರಿಯುತ ಆಟವನ್ನು ಆಡಿದರು. ಈ ಜೋಡಿ ೧೯ ಓವರ್ ಬ್ಯಾಟಿಂಗ್ ಮಾಡಿ ೪೯ ರನ್ ಕಲೆ ಹಾಕಿತು.

ಭೋಜನ ಹಾಗೂ ಚಹಾ ವಿರಾಮದ ವರೆಗೂ ಸಮಯೋಚಿತ ಆಟವನ್ನು ಆಡಿದ ನ್ಯೂಜಿಲೆಂಡ್ ತಂಡ ನಂತರ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಎಡವಿತು. ಪಿಚ್‌ನಲ್ಲಿನ ಬಿರುಕುಗಳ ಸಂಪೂರ್ಣ ಲಾಭವನ್ನು ಪಡೆದ ಅಶ್ವಿನ್, ಜಡೇಜಾ ಹಾಗೂ ವೇಗಿ ಶಮಿ ಅಬ್ಬರಿಸಿದರು.

ಭಾರತಕ್ಕೆ ಅಗ್ರ ಪಟ್ಟ

ತವರಿನಲ್ಲಿ ನಡೆಯುತ್ತಿರುವ ೨೫೦ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವಿನ ಸಾಧನೆಯನ್ನು ಮಾಡಿದೆ. ಅಲ್ಲದೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಮೊದಲ ಸ್ಥಾನದಲ್ಲಿದ ಪಾಕಿಸ್ತಾನ ಎರಡನೇ ಸ್ಥಾನಕ್ಕೆ ಜಾರಿದೆ.

ಇಂದೋರ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಸಾಧಿಸಿದರೆ, ಅಥವಾ ಕ್ಲೀನ್ ಸ್ವೀಪ್ ಸಾಧಿಸಿದರೆ, ಭಾರತದ ಅಗ್ರ ಸ್ಥಾನ ಭದ್ರವಾಗುತ್ತದೆ. ಇನ್ನು ಪಾಕ್ ಮತ್ತೆನಂಬರ್ ೧ ಸ್ಥಾನವನ್ನು ಪಡೆಯಲು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ೩-೦ ಗೆದ್ದುಕೊಳ್ಳಬೇಕು.

೨೦೧೭ ಮಾರ್ಚ್ ವರೆಗೂ ಭಾರತದಲ್ಲಿ ಸಾಲು ಸಾಲು ಟೆಸ್ಟ್ ಪಂದ್ಯಗಳಿದ್ದು, ಭಾರತ ಚೇತೋಹಾರಿ ಪ್ರದರ್ಶನವನ್ನು ನೀಡಿ ನಂಬರ್ ೧ ಸ್ಥಾನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

ಗಂಭೀರ್‌ಗೆ ಸ್ಥಾನ ಸಾಧ್ಯತೆ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಮೂರನೇ ಟೆಸ್ಟ್‌ಗೆ ತಂಡ ಸೇರುವುದು ಕಷ್ಟವಾಗಿದೆ. ಹೀಗಾದಲ್ಲಿ ತಂಡದಲ್ಲಿ ಸ್ಥಾನವನ್ನು ಪಡೆಯುವ ಗೌತಮ್ ಗಂಭೀರ್ ಅವರ ಆಸೆ ಫಲಿಸುತ್ತದೆ. ಗೌತಮ್ ಎರಡು ವರ್ಷದ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 316
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 204
ಭಾರತ ದ್ವಿತೀಯ ಇನಿಂಗ್ಸ್263

ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ 197