*ಕ್ರಿಕೆಟ್ನಲ್ಲಿ ಪಿಂಕ್ ಚೆಂಡಿನ ಯುಗ ಆರಂಭವಾಗಲಿದೆ*

0
1185

ಕೋಲ್ಕತ:  ಇದೇ ಅಕ್ಟೋಬರ್ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಈಡನ್ ಗಾರ್ಡನ್ನಲ್ಲಿ ಆಡಲು ಉದ್ದೇಶಿಸಲಾಗಿರುವ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಸ್ಥಳೀಯ ಸೂಪರ್ ಲೀಗ್ ಟೂರ್ನಿಯ ಫೈನಲ್ ಪಂದ್ಯವನ್ನು ಕೂಕುಬುರ್ರಾ ಪಿಂಕ್ ಚೆಂಡಿನಲ್ಲಿ ನಡೆಸಲು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

ball

ಕ್ರಿಕೆಟ್ ಲೋಕದಲ್ಲಿ ‘ಪಿಂಕ್ ಬಾಲ್’ ಹೊಸತನಕ್ಕೆ ನಾಂದಿ ಹಾಡಲಿದೆ ಎಂದು ಭಾರತ ತಂಡದ ದಿಗ್ಗಜರಾದ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಆಸ್ಟ್ರೇಲಿಯಾದ ಡೀನ್ ಜೊನ್ಸ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ಮೊಟ್ಟಮೊದಲ ಚತುರ್ದಿನ ಅಹರ್ನಿಶಿ ಪಂದ್ಯ ಶನಿವಾರದಿಂದ ಈಡನ್ ಗಾರ್ಡನ್ಸ್ನಲ್ಲಿ ಪಿಂಕ್ ಬಾಲ್ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಡೆದ ಸಂವಾದದಲ್ಲಿ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಅಡಿಲೇಡ್ನಲ್ಲಿ ನಡೆದ ನ್ಯೂಜಿಲೆಂಡ್-ಆಸ್ಟ್ರೇಲಿಯಾ ನಡುವಿನ ಮೊದಲ ಆಹರ್ನಿಶಿ ಪಂದ್ಯಕ್ಕೆ ವೀಕ್ಷಕ ವಿವರಣೆಗಾರರಾಗಿದ್ದ ಡೀನ್ ಜೋನ್ಸ್ ಮಾತನಾಡಿ, ‘ಕ್ರಿಕೆಟ್ನಲ್ಲಿ ಪಿಂಕ್ ಚೆಂಡಿನ ಯುಗ ಆರಂಭವಾಗಲಿದೆ. ಕಳೆದ ಒಂದು ದಶಕದಿಂದ ಬ್ಯಾಟ್ಸ್ಮನ್ಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಮುಂದಿನ ದಿನಗಳಲ್ಲಿ ಪಿಂಕ್ ಬಾಲ್ ಮತ್ತಷ್ಟು ಛಾಪು ಮೂಡಿಸಲಿದೆ’ ಎಂದರು.

ಈ ಚತುರ್ದಿನ ಪಂದ್ಯ ಸ್ಟಾರ್ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರವನ್ನೂ ಕಾಣಲಿದೆ.