ಕ್ರೀಡಾ ಸುಂದರಿಯರ ಪಟ್ಟಿ ಪ್ರಕಟ, ಅಗ್ರಸ್ಥಾನದಲ್ಲಿ ಮೂಗುತಿ ಸುಂದರಿ

0
1096

ನವದೆಹಲಿ: ವಿಶ್ವ ಸಂಪ್ರದಾಯ ದಿನದ ಅಂಗವಾಗಿ ಕ್ರಾಫ್ಟ್ ಸ್ವಿಲ್ಲ ಡಾಟ್ ಕಾಮ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಉತ್ತಮ ಉಡುಗೆಯ ಕ್ರೀಡಾ ಸುಂದರಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತೀಯ ಮಹಿಳಾ ಕ್ರೀಡಾ ಪಟುಗಳು ಕ್ರೀಡಾಂಗಣದಲ್ಲಿ ದೇಶಕ್ಕಾಗಿ ಬೆವರಿಳಿಸುತ್ತಾರೆ. ಕ್ರೀಡಾಂಗಣದ ಹೊರಗೆ ಕೂಡ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇವರಲ್ಲಿ ಯಾರು ಉತ್ತಮ ಉಡುಗೆಯ ಕ್ರೀಡಾ ಸುಂದರಿ ಎಂದು ತಿಳಿಯಲು ಆನ್ಲೈನ್ ಸಮೀಕ್ಷಿ ನಡೆಸಲಾಗಿದೆ. ಇದಕ್ಕೆ 62.9ರಷ್ಟು ಪ್ರತಿಶತ ಜನರು ಸಾನಿಯಾ ಅವರಿಗೆ ಮತ ಚಲಾಯಿಸಿದ್ದಾರೆ. ಮೇ 20ರಿಂದ ಜೂನ್ 5ವರೆಗೆ ಅಂತರ್ಜಾಲ ಸಮೀಕ್ಷೆ ನಡೆದಿದ್ದು, ಮೊಬೈಲ್ ಮೂಲಕ ಕೂಡ ಮತ ಚಲಾಯಿಸಬಹುದಾಗಿತ್ತು. ಇದರಲ್ಲಿ ಸಾನಿಯಾ ಅಗ್ರ ಸ್ಥಾನ ಸಂಪಾದನೆ ಮಾಡಿದ್ದು, ಈ ಮೂಗುತಿ ಸುಂದರಿ ಲೆಹಂಗಾ ಹಾಗೂ ಸಾರಿಯಲ್ಲಿ ಸುಂದರವಾಗಿ ಕಾಣುತ್ತಾರೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

14-1405343852-saina-nehwal

ಇನ್ನು ದ್ವೀತಿಯ ಸ್ಥಾನವನ್ನು ವಿಶ್ವದ ಏಳನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪಡೆದಿದ್ದಾರೆ. 18.8ರಷ್ಟು ಮತ ಇವರ ಪಾಲಾಗಿದೆ. ಸ್ಕಾವಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ 9.3ರಷ್ಟು ಮತಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಈ ಆನ್ಲೈನ್ ಸಮೀಕ್ಷೆ ಕುರಿತು ಕ್ರಾಫ್ಟ್ ಸ್ವಿಲ್ಲ ಡಾಟ್ ಕಾಮ್ ಮುಖ್ಯಸ್ಥೆ ಮೋನಿಕಾ ಗುಪ್ತಾ ಪ್ರತಿಕ್ರಿಯಿಸಿ, ಕ್ರೀಡಾಂಗಣದಲ್ಲಿ ಈ ಆಟಗಾರ್ತಿಯರನ್ನು ನೋಡಿ ಮೆಚ್ಚಿಕೊಂಡಿರುತ್ತೇವೆ. ಭಾರತೀಯ ಮಹಿಳಾ ಕ್ರೀಡಾಳುಗಳು ಸೌಂದರ್ಯದಲ್ಲಿ ಯಾರಿಗೂ ಕಮ್ಮಿಯಿಲ್ಲ. ಆದ್ದರಿಂದ ಇವರು ಮ್ಯಾಗಝಿನ್ ಮುಖಪುಟಗಳಲ್ಲಿ ಕೂಡ ರಾರಾಜಿಸಬೇಕೆಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.