ತರಕಾರಿ ಬೆಲೆ ಇಳಿಕೆ : ನಿಟ್ಟುಸಿರು ಬಿಟ್ಟ ಗ್ರಾಹಕರ

0
1135

ಬೆಂಗಳೂರು: ತರಕಾರಿಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಬೆಲೆ ಇಳಿಕೆ ತುಸು ಸಮಾಧಾನ ಉಂಟುಮಾಡಿದ್ದರೆ, ಉತ್ತಮ ಮಳೆ ಹಾಗೂ ನೀರಿನ ಲಭ್ಯತೆಯಿಂದ ಸೊಪ್ಪು, ತರಕಾರಿಗಳ ಉತ್ಪಾದನೆ ಹೆಚ್ಚಳವಾಗಿದ್ದು, ಬೆಲೆಗಳಲ್ಲಿ ಇಳಿಕೆಯಾಗಿದೆ. ಕಳೆದ 15 ದಿನಗಳಿಗೆ ಹೋಲಿಸಿದರೆ ಹಾಪ್ಕಾಮ್ಸ್ ಮಳಿಗೆಗಳಲ್ಲಿ ತರಕಾರಿ, ಸೊಪ್ಪಿನ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ.

‘ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹಲವೆಡೆ ಮಳೆಯಾಗಿತ್ತು. ಇದರಿಂದ ತರಕಾರಿ ಬೆಳೆಗಳು ನೆಲಕಚ್ಚಿದ್ದವು. ಇದನ್ನೇ ನೆಪ ಮಾಡಿಕೊಂಡ ಮಧ್ಯವರ್ತಿಗಳು ಬೆಲೆಗಳನ್ನು ಏರಿಸಿದ್ದರು’ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ರೈತರಿಂದ ತರಕಾರಿ ಪೂರೈಕೆಯಾಗುತ್ತದೆ. ಈ ಭಾಗಗಳಲ್ಲಿ ತರಕಾರಿಗಳ ಫಸಲು ಚೆನ್ನಾಗಿ ಬಂದಿದೆ. ಹೀಗಾಗಿ ಬೆಲೆಯಲ್ಲಿ ಇಳಿಕೆ ಕಂಡಿದೆ’ ಕಳೆದ ವಾರದವ ಗಗನಕ್ಕೇರಿದ್ದ ತರಕಾರಿ ಬೆಲೆಯಿಂದ ಬೆಂಗಳೂರಿಗರು ಬೇಸತ್ತಿದ್ರು. ಆದರೆ ಈಗ  ಬೆಲೆ ಇಳಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಇನ್ನೊಂದೆಡೆ ಈರುಳ್ಳಿ ದರ ಮಾತ್ರ ಏರುಮುಖವಾಗುವ ಸಂಭವವಿದೆ. ಕಳೆದ ಹತ್ತು-ಹದಿನೈದು ದಿನಗಳ ಹಿಂದೆ ಕೆಜಿಗೆ 60 ರಿಂದ 70 ರೂ. ಇದ್ದ ಟೊಮ್ಯಾಟೋ ಈಗ 30 ರಿಂದ 40ರೂ.ಗೆ ಇಳಿದಿದೆ. ರಾಜ್ಯದಲ್ಲಿ ದಿನನಿತ್ಯ ಸುರಿಯುತ್ತಿರುವ ಮಳೆಗೆ ಬೆಳೆ ಹಾನಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾಳಾಗಿವೆ. ಹಾಗಾಗಿ ಟೊಮ್ಯಾಟೋ ಉತ್ಪಾದನೆ ಪ್ರಮಾಣ ಕಡಿಮೆಯಾಗಿದ್ದು, ಮಹಾರಾಷ್ಟ್ರದಿಂದ ಟೊಮ್ಯಾಟೋವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಇನ್ನು ಮೋಡ ಮುಚ್ಚಿದ ವಾತಾವರಣವಿರುವುದರಿಂದ ಗಿಡದಲ್ಲಿ ಹೂ ಕಟ್ಟಿ ಕಾಯಿಗಳು ಹಣ್ಣಾಗುವುದಕ್ಕೆ ವಿಳಂಬವಾಗುತ್ತಿದೆ. ಮಾರುಕಟ್ಟೆಯಲ್ಲಿ ಟೊಮ್ಯಾಟೋ 30 ರಿಂದ 40ರೂ., ಬೀನ್ಸ್ 40 ರಿಂದ 50ರೂ., ಹೀರೇಕಾಯಿ 25 ರಿಂದ 30, ಕ್ಯಾಪ್ಸಿಕಮ್ 50 ರಿಂದ 60, ಹಸಿಮೆಣಸಿನಕಾಯಿ 30 ರಿಂದ 60ರೂ., ಕ್ಯಾರೆಟ್ 30 ರಿಂದ 40ರೂ., ಬೀಟ್‌ರೂಟ್ 20 ರಿಂದ 15ರೂ., ಆಲೂಗಡ್ಡೆ 30 ರಿಂದ 40ರೂ., ಈರುಳ್ಳಿ  ದಿನೇ ದಿನೇ ಏರಿಕೆಯಾಗುವ ಸಂಭವವಿದೆ.

ಬಿಸಿಲು ಇಲ್ಲದೆ ಮೋಡ ಮುಚ್ಚಿದ ವಾತಾವರಣ ಮತ್ತು ಜಡಿ ಮಳೆಯಿಂದಾಗಿ ಈರುಳ್ಳಿ ಭೂಮಿಯಲ್ಲೇ ಕೊಳೆಯಲಾರಂಭಿಸಿದ್ದು, ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 25 ರಿಂದ 30ರೂ.ಗೆ ತಲುಪಿದ್ದು, ದಿನೇ ದಿನೇ ಏರಿಕೆಯಾಗುವ ಸಾಧ್ಯತೆಯಿದೆ ಎಂದು  ಈರುಳ್ಳಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.