ಗ್ಯಾಸ್ ಸಬ್ಸಿಡಿ ಉಳಿಸಿಕೊಳ್ಳಲು ಇಂದೇ ಮಾಡಿ ಈ ಕೆಲಸ

0
1714

ಗೃಹ ಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಬಳಕೆದಾರರು ನವೆಂಬರ್ ಅಂತ್ಯದೊಳಗೆ ಆಧಾರ್‌ ಮಾಹಿತಿ ನೀಡಿದಿದ್ದರೆ ಸಬ್ಸಿಡಿ “ಬಂದ್‌’ ಆಗಲಿದೆ.

ಎಲ್ಜಿಪಿ ಸಂಪರ್ಕಕ್ಕೆ ಆಧಾರ್ ಕೊಟ್ಟರೂ ಕೊಡಬಹುದು ಇಲ್ಲದಿದ್ದರೂ ಪರವಾಗಿಲ್ಲ. ಬ್ಯಾಂಕ್ ಖಾತೆ ವಿವರ, ವಿದ್ಯುತ್ ಬಿಲ್ ವಿವರ ಕೊಟ್ಟರೆ ಸಾಕು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಆಧಾರ್ ಕಡ್ಡಾಯ ಮಾಡಿದ್ದು, ಸಬ್ಸಿಡಿ ಬಯಸುವ ಗೃಹ ಬಳಕೆ ಅಡುಗೆ ಅನಿಲ ಬಳಕೆದಾರರು ಆಧಾರ್ ಮಾಡಿಸಿ ಎಲ್ಪಿಜಿ ವಿತರಕರಿಗೆ ಕೊಡಲೇಬೇಕಾಗಿದೆ. ನೀವು ಪಡೆದಿರುವ ಗ್ಯಾಸ್ ಏಜೆನ್ಸಿಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆ ನೀಡಿ ಬನ್ನಿ. ಈ ನಂಬರ್ ನಿಮ್ಮ ಖಾತೆಗೆ ಜಮಾ ಆಗಲಿದೆ. ಇಲ್ಲವಾದಲ್ಲಿ ಡಿಸೆಂಬರ್ 1 ರ ನಂತರದಿಂದ ಸಬ್ಸಿಡಿ ಸಿಗುವುದಿಲ್ಲ. ಈವರೆಗೂ ಆಧಾರ್ ಕಾರ್ಡ್ ನಂಬರನ್ನು ಗ್ಯಾಸ್ ಕನೆಕ್ಷನ್ ಜೊತೆ ಜೋಡಿಸಿಲ್ಲವೆಂದಾದ್ರೆ ಇಂದೇ ಆ ಕೆಲಸ ಮಾಡಿಕೊಳ್ಳಿ.

ಗ್ಯಾಸ್ ಕನೆಕ್ಷನ್ ಜೊತೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯ ಹೊಸದಲ್ಲ. ಕೇಂದ್ರ ಸರ್ಕಾರ ಹಿಂದೆಯೇ ಈ ಬಗ್ಗೆ ಸೂಚನೆ ನೀಡಿದೆ. ಜೊತೆಗೆ ಗಡುವು ವಿಸ್ತರಿಸುತ್ತ ಬಂದಿದೆ. ಮತ್ತೆ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ.
ನೋಟು ನಿಷೇಧದಿಂದಾಗಿ ಜನರು ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸ್ತಾ ಇದ್ದು, ಹಾಗಾಗಿ ಜನರಿಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ.