ಚಿಲ್ಲರೆ ನೀಡದ ಬಂಕ್‌ಗಳ ವಿರುದ್ಧ ಸಚಿವರಿಗೆ ದೂರು ನೀಡಿ

0
927

ಹಲವು ಪೆಟ್ರೋಲ್ ಬಂಕ್‍ಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ಫ್ಲಾಜಾಗಳಲ್ಲಿ 500, 1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದರಿಂದ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸಿ ಕಠಿಣವಾದ ನಿರ್ಧಾರ ಕೈಗೊಂಡಿತ್ತು. ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ಸಾರ್ವಜನಿಕರು ಪೆಟ್ರೋಲ್ ಬಂಕ್‍ಗಳು ಮತ್ತು ಎಟಿಎಂಗಳಿಗೆ ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಬಂಕ್‍ಗಳಲ್ಲಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ದೂರುಗಳಲ್ಲಿ ಹೇಳಲಾಗಿದೆ. ಸಾರ್ವಜನಿಕರಿಂದ ಈ ದೂರುಗಳು ಕೇಳಿಬಂದಾಗ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಬಂಕ್‍ಗಳಿಗೆ ಸೂಚನೆ ನೀಡಿದೆ. ಒಂದು ವೇಳೆ ಬಂಕ್‍ಗಳಲ್ಲಿ 500, 1000 ಮುಖಬೆಲೆಯ ನೋಟುಗಳನ್ನು ನಿರಾಕರಿಸಿದರೆ ಅಂತಹ ಬಂಕ್‍ಗಳ ಪರವಾನಗಿಗಳನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಲಾಗುವುದು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ಎಚ್ಚರಿಕೆ ನೀಡಿದ್ದರು.

ಪೆಟ್ರೋಲ್ ಬಂಕ್‍ ಮಾಲೀಕರಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ಎಚ್ಚರಿಕೆ

ಇಷ್ಟಾದರು 500, 1000 ರೂ. ನೋಟುಗಳಿಗೆ ಚಿಲ್ಲರೆ ಹಣ ನೀಡದೆ ಸಾರ್ವಜನಿಕರು ತುಂಬಾ ತೊಂದರೆಗೆ ಒಳಗಾದರು. ಪ್ರಧಾನಿ ನರೇಂದ್ರ ಮೋದಿ ರವರೇ ಬ್ಯಾಂಕ್‌ ಮತ್ತು ಎಟಿಎಂಗಳಿಗೆ 2 ದಿನ ರಜೆ ಘೋಷಿಸಿರುವ ಕಾರಣ ಹಳೆಯ ನೋಟುಗಳನ್ನು ಗ್ಯಾಸ್‌ ಹಾಗೂ ಪೆಟ್ರೋಲ್‌ ಬಂಕ್‌ಗಳಲ್ಲಿ ಬದಲಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿಯಮಗಳನ್ನು ಪಾಲಿಸದೇ ಬಂಕ್‍ಗಳಲ್ಲಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂಥವರು ಕಂಡುಬಂದರೆ ಪೆಟ್ರೋಲ್‌ ಬಂಕ್‌ಗಳ ವಿರುದ್ಧ ಶುಕ್ರವಾರವರೆಗೆ @dpradhanbjp ಈ ಟ್ವೀಟರ್‌ ವಿಳಾಸಕ್ಕೆ ದೂರು ಸಲ್ಲಿಸಬಹುದು ಎಂದು ಸಚಿವ ಧರ್ಮೇಂದ್ರ ಪ್ರಧಾನ್‌ ಸೂಚಿಸಿದ್ದಾರೆ.