ಚೀನಾದಲ್ಲಿ ಒಬಾಮ ಮರ್ಯಾದೆ ಮೂರು ಕಾಸಿಗೆ ಹರಾಜು…

0
2293

ಇದೇನು ಸ್ವಾಮಿ ಪ್ರಪಂಚದ ಅತಿ ಬಲಿಷ್ಠ ನಾಯಕನಿಗೆ ಅವಮಾನನ…? ಅಂತ ನೀವೆಲ್ಲರೂ ಕೇಳಬಹುದು, ಆದ್ರೆ ಕಾಲ ಯಾರ್ leg ನ ಯಾವಾಗ್ ಏಳಿಯುತ್ತೋ ಹೇಳುವುದಕ್ಕೆ ಆಗುವುದಿಲ್ಲ…! 4-ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಗಮಿಸಿದ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಚೀನಾದಿಂದ ಉದ್ದೇಶಪೂರ್ವಕ ಮುಖಭಂಗವಾಗಿದೆಯೇ ? ಹಾಂಗ್‍ಝೆವು ಏರ್‍ಫೋರ್ಟ್‍ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ ಈ ಆರೋಪ ನಿಜವೆಂಬುದು ಸಾಬೀತಾಗುತ್ತದೆ.

ಅಮೆರಿಕದಿಂದ ಇಂದು ಬೆಳಿಗೆ ಹಾಂಗ್‍ಝೆವು ವಿಮಾನನಿಲ್ದಾಣಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷರಿಗೆ ಚೀನಾ ಅಧಿಕಾರಿಗಳು ಸಾಮಾನ್ಯ ಕೆಂಪು ಹಾಸಿನ ಸ್ವಾಗತ ಕೋರಲಿಲ್ಲ. ಅಮೆರಿಕ ಅಧ್ಯಕ್ಷರಿಗೆ ಭವ್ಯ ಸ್ವಾಗತವೇನೂ ಲಭಿಸಲಿಲ್ಲ, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಅಲ್ಲಿದ್ದರು. ಏರ್ ಫೋರ್ಸ್ ಒನ್ ವಿಶೇಷ ವಿಮಾನ ನಿಲ್ದಾಣದಲ್ಲಿ ಬಂದ ಒಬಾಮಾ ಕೆಳಗಿಳಿಯಲು ಚೀನಿ ಅಧಿಕಾರಿಗಳು ಮೆಟ್ಟಿಲು ಒದಗಿಸಲಿಲ್ಲ. ಇದರಿಂದ ಅವರು ತಮ್ಮ ವಿಮಾನದ ಹಿಂಭಾಗದಲ್ಲಿದ್ದ ವ್ಯವಸ್ಥೆ ಮೂಲಕ ಕೆಳಗೆ ಇಳಿದು ಸಾಮಾನ್ಯ ಪ್ರಯಾಣಿಕರಂತೆ ಜಿ-20 ಶೃಂಗಸಭೆಗೆ ತೆರಳಬೇಕಾಯಿತು.

ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಮಂತ್ರಿ ತೆರೆಸಾ ಮೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಗೆಯುನ್-ಬೈ ಹಾಗೂ ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್ ಅವರಿಗೆ ಚೀನಿ ಅಧಿಕಾರಿಗಳು ಕೆಂಪು ಹಾಸಿನ ಸ್ವಾಗತ ಕೋರಿದ್ದರು. ಇದರಿಂದ ಕುಪಿತರಾದ ಅಮೆರಿಕದ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಚೀನಿ ಅಧಿಕಾರಿಗಳು ಒಬಾಮಾ ಅವರಿಗೆ ಮುಖಭಂಗ ಮಾಡಿದ್ದಾರೆ ಎಂದು ಖಂಡಿಸಿದ್ದಾರೆ.