ಜಯರನ್ನು ಹೆಸರು ಹಿಡಿದು ಕರೆಯುವ೦ತಿಲ್ಲ

0
1431

ಚನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ವಿಧಾನಸಭೆ ಕಲಾಪದ ಚರ್ಚೆಯ ವೇಳೆ ‘ಜಯಲಲಿತಾ’ ಎಂದು ಕರೆಯಕೂಡದು ಎಂದು ಸ್ಪೀಕರ್ ಪಿ. ಧನಪಾಲ್ ಸೋಮವಾರ ನೀಡಿದ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿದೆ. ಇವರ ವಿರುದ್ಧ ಆಕ್ರೋಶಗೊಂಡ ಡಿಎಂಕೆ ಸದಸ್ಯರು ಸೋಮವಾರ ಕಲಾಪ ಬಹಿಷ್ಕರಿಸಿ ಹೊರನಡೆದಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲೆ ಚರ್ಚೆ ನಡೆಯುತಿತ್ತು. ಈ ವೇಳೆ ತಿರುತ್ತಣಿ ಕ್ಷೇತ್ರದ ಅಣ್ಣಾಡಿಎಂಕೆ ಶಾಸಕ ಪಿ.ಎಂ. ನರಸಿಂಹನ್ ಅವರು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಹೆಸರಿಡಿದೇ ಸಂಬೋಧಿಸುತ್ತಿದ್ದರು ಸಂಬೋಧಿಸುತ್ತಿದ್ದರು. ಇದಕ್ಕೆ ಡಿಎಂಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಒಬ್ಬ ಮಾಜಿ ಮುಖ್ಯಮಂತ್ರಿಯನ್ನು ಒಬ್ಬ ಶಾಸಕ ಹೆಸರಿಡಿದು ಕರೆಯಬಹುದೇ ಎಂದು ಡಿಎಂಕೆ ಶಾಸಕರು ಸ್ಪೀಕರ್ ಪಿ. ಧನಪಾಲ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಅದರಲ್ಲೇನೂ ತಪ್ಪಿಲ್ಲ ಎಂದು ವಾದಿಸಿದರು.

ಇದಕ್ಕೆ ಸಿಟ್ಟಿಗೆದ್ದ ಡಿಎಂಕೆ ಶಾಸಕರು, ಹಾಗಾದರೆ ಜಯರನ್ನೂ ಅವರ ಹೆಸರಿನಿಂದಲೇ ಸಂಭೋದಿಸಬಹುದೇ ಎಂದು ಕೇಳಿದರು. ಇದರಿಂದ ಸಿಡಿಮಿಡಿಗೊಂಡ ಧನಪಾಲ್, ಮುಖ್ಯಮಂತ್ರಿಯನ್ನು ಹೆಸರು ಹಿಡಿದು ಕರೆಯುವ೦ತಿಲ್ಲ. ಇದು ನನ್ನ ಆದೇಶ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.