ಜಯಲಲಿತಾ ಅಂತಿಮ ಯಾತ್ರೆಗೆ ೨ ಟನ್ ಹೂವು, ೪೦ ಕಾರ್ಯಕರ್ತರ ಶ್ರಮ

0
519

ಸೆಪ್ಟೆಂಬರ್ ೨೨ ರಂದು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮನ್ ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾಗಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅಂತಿಮ ಯಾತ್ರೆ ವೇಳೆ ಇಡೀ ರಸ್ತೆ ಹೂವುಗಳಿಂದ ಅಲಂಕೃತಗೊಂಡಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಅವರ ಅಭಿಮಾನಿಗಳು ಕಣ್ಣೀರಿನ ವಿದಾಯ ಕೋರಿದರು.

ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆಗಳು ನಡೆದರೂ ಗೊಂದಲಗಳಿಗೆ ಆಸ್ಪದ ನೀಡದಂತೆ ಅಚ್ಚುಕಟ್ಟಾಗಿ ನಡೆಯಿತು. ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಸಮಾಧಿ ಸಮೀಪದಲ್ಲೇ ಜಯಲಲಿತಾ ಅವರನ್ನು ಸಂಪ್ರದಾಯ ದಂತೆ ಮಣ್ಣು ಮಾಡಲಾಯಿತು. ಆದರೆ ಕೆಲವು ಕಿ.ಮೀ.ವರೆಗೂ ನಡೆದ ಮೆರವಣಿಗೆ ವೇಳೆ ಸುಮಾರು ೨ ಟನ್ ಹೂವು ಚೆಲ್ಲಲಾಗಿತ್ತು.

ಸೇನಾ ವಾಹನದಲ್ಲಿ ಮೆರವಣಿಗೆ ಮಾಡಲಾಗಿದ್ದು, ಜತನದಿಂದ ಕಾಪಾಡಿಕೊಂಡು ಬರಲು ಸುಮಾರು ೪೦ ಕಾರ್ಯಕರ್ತರು ಶ್ರಮಿಸಿದರು.
ಎರಡೂ ರೀತಿಯ ಹೂವು ಬಳಲಾಗಿದ್ದು, ಚೆಂಡು ಹೂ ಮತ್ತು ಗುಲಾಬಿ ಮತ್ತು ಅದರದ್ದೇ ತಳಿಯ ಮತ್ತೊಂದು ಜಾತಿಯ ಹೂಗಳನ್ನು ಹೆಚ್ಚಾಗಿ ಬಳಸಲಾಗಿತ್ತು. ವಿದಾಯ ಕೋರಲು ಬಂದ ಗಣ್ಯರಿಗೆ ನೀಡುವುದು ಸೇರಿದಂತೆ ಈ ಹೂವು ಬಳಕೆಯಾಯಿತು.