ಜಾಗ್ವಾರ್ ಸಿನಿ ವಿಮರ್ಷೆ!!

0
887

ಬಹುಷಃ ನನ್ನ ಮೊದಲ ಸಿನಿ ವಿಮರ್ಶೆ ಇದು. ಕನ್ನಡಕ್ಕೊಬ್ಬ ಪ್ರತಿಭಾವ೦ತ ನಟ, ಆಕ್ಶನ್ ಹೀರೋ ಸಿಕ್ಕಿದ೦ತಾಗಿದೆ!! ಬಹುತೇಕ ತೆಲುಗು ನಟರೇ ಚಿತ್ರಪೂರ್ತಿ ಆವರಿಸಿದ್ದಾರೆ. ಕಥೆಯಲ್ಲಿ ಹೊಸತನವಿಲ್ಲ, ಈ ವಿಷಯದಲ್ಲಿ ವಿಜಯೇ೦ದ್ರ ಪ್ರಸಾದ್ ಸಪ್ಪೆ ಎನಿಸುತ್ತಾರೆ. ಚಿತ್ರಕ್ಕೆ ಜಾಗ್ವಾರ್ ಎ೦ಬ ಹೆಸರು ಯಾಕೆ ಸೂಕ್ತ ಎ೦ಬುದು ತಿಳಿಯೋದೆ ಇಲ್ಲಾ, ಚಿತ್ರದ ಮೇಕಿ೦ಗ್ ಅದ್ಭುತ ಇದರಲ್ಲಿ ಕುಮಾರಸ್ವಾಮಿಯವರ ಚಿತ್ರದ ಬಗೆಗಿನ ಕಾಳಗಿ ಎದ್ದು ತೋರುತ್ತದೆ. ನಿಖಿಲ್ ಕುಮಾರ ಅವರ ನಟನೆ ಸ್ವಲ್ಪ ಪಕ್ವವಾಗಬೇಕು, ಇದು ಅವರ ಮೊದಲ ಚಿತ್ರವಾದ್ದರಿ೦ದ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಉಳಿದ೦ತೆ ಆಕ್ಶನ್, ಡಾನ್ಸ್, ಬಾಡಿ ಲ್ಯಾ೦ಗ್ವೇಜ್ ಎಲ್ಲಾ ಅತ್ಯುತ್ತಮ. ಚಿತ್ರದ ನಾಯಕಿ ದೀಪ ಸಾಟಿರವರ ಅಭಿನಯ ಚೆನ್ನಗಿದೆಯಾದರು ಈ ಚಿತ್ರದಲ್ಲಿ ಅವರ ಅಭಿನಯಕ್ಕೆ ಅಷ್ಟು ಅವಕಾಶವಿಲ್ಲ, ಇನ್ನೂ ಹೆಚ್ಚು ಸವಾಲಿನ ಪಾತ್ರಗಳು ದೊರೆತರೆ ಅವರ ಪ್ರತಿಭೆಯನ್ನು ತೋರಿಸಿಕೊಳ್ಳುವುದಕ್ಕೆ ಒಳ್ಳೆ ಅವಕಾಶ ಸಿಗುವುದು.

ಇನ್ನು ಉಳಿದ ಕಲಾವಿದರ ವಿಷಯಕ್ಕೆ ಬ೦ದರೆ ಎಲ್ಲರೂ ಪಳಗಿದ ಕಲಾವಿದರಾದ್ದರಿ೦ದ ಅವರವರ ಕೆಲಸ ಅಚ್ಚುಕಟ್ಟಾಗಿ ಮೂಡಿ ಬ೦ದಿದೆ. ಸಾಧು ಕೋಕಿಲರವರ comedy ಎಂದಿನಂತೆ ಚೆನ್ನಾಗಿದೆ, ಅವರ ಪ್ರತಿಭೆಯನ್ನು ಇನ್ನೂ ಹೆಚ್ಚು ಬಳಸಿ ಕೊಂಡಿದ್ದರೆ ಚೆನ್ನಾಗಿರುತಿತ್ತು. ಇನ್ನು ಚಿತ್ರದಲ್ಲಿ ಮುಖ್ಯವಾದದ್ದು ಲೋಕೇಷನ್ಗಳು ಹಾಗು ಅದನ್ನು ಬಳಸಿರುವ ರೀತಿ ಬಹುಷಃ ಕನ್ನಡದಲ್ಲಿ ಅತಿ ವಿರಳ ಎನ್ನಬಹುದು. ಚಿತ್ರದ ತಾಂತ್ರಿಕ ವಿಷಯಕ್ಕೆ ಬಂದರೆ cinematography, editing, VFX ಎಲ್ಲವೂ ಅಧ್ಬುತವಾಗಿದೆ. ಎಸ್ ತಾಮನ್ ಅವರ ಸಂಗೀತ ಮುದ ನೀಡುತ್ತದೆ. ರಾಮ್-ಲಕ್ಷ್ಮಣ್ ಮಾಸ್ತರರ fight sequences ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ಒಟ್ಟಾರೆ ಜಾಗ್ವಾರ್ ಚಿತ್ರ ಒ೦ದು ಕುಟು೦ಬ ಒಟ್ಟಾರೆ ಕೂತು ನೊಡುವ ಚಿತ್ರ, ಕೊಟ್ಟ ಕಾಸಿಗೆ ಮೋಸವಿಲ್ಲ.

–Shas ಗೌಡ