ಮಹಾದಾಯಿ ಹೋರಾಟಗಾರಿಗೆ ಷರತ್ತುಬದ್ದ ಜಾಮೀನು

0
931

ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಧಾರವಾಡ ಜಿಲ್ಲೆ, ಗದಗ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ವೇಳೆ ಧಾರವಾಡದ ನವಲಗುಂದ ಮತ್ತು ಯಮನೂರು ಗ್ರಾಮಗಳಲ್ಲಿ ಪೊಲೀಸರತ್ತ ಕಲ್ಲು ತೂರಾಟಾ, ಲಾಠಿ ಚಾರ್ಜ್ ನಂತಹ ಗಂಭೀರ ಪ್ರಕರಣಗಳು ನಡೆದಿದ್ದವು. ಈ ಹಿನ್ನಯಲ್ಲಿ ನವಲಗುಂದ ತಾಲ್ಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಸುಮಾರು 180ಕ್ಕೂ ಅಧಿಕ ಮಂದಿ ರೈತರನ್ನು ಬಂಧಿಸಿದ್ದರು.

25 ಪ್ರಕರಣಗಳಡಿ 187 ರೈತರ ಬಂಧನವಾಗಿದ್ದು, ಈ ಪೈಕಿ 8 ಜನರಿಗೆ 2 ದಿನಗಳ ಹಿಂದೆ ಜಾಮೀನು ದೊರಕಿತ್ತು. ಬಂಧಿತರ ಪರ ವಕೀಲರ ಸಂಘ ಜಾಮೀನು ಅರ್ಜಿ ಸಲ್ಲಿಸಿತ್ತು. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ಇನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾನೂನು ತೊಡಕಿನ ನಡುವೆಯೂ ರೈತರ ಬಿಡುಗಡೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘ ಜಾಮೀನು ಅರ್ಜಿ ಸಲ್ಲಿಸಿ, ನರಗುಂದದ 14 ರೈತರನ್ನು ಬಂಧಮುಕ್ತಗೊಳಿಸಿತ್ತು. ಈಗ ರೈತರ ಪರವಾಗಿ ವಕೀಲರ ಸಂಘ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಅವರು, 179 ರೈತರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಮಹಾದಾಯಿ ಹೋರಾಟಗಾರರು ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಕುರಿತು ಮೈಸೂರಿನಲ್ಲಿ ಸಿಎಂ ಹೇಳಿಕೆ.

ಹೋರಾಟಗಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಕುರಿತು ಸರ್ಕಾರದ ಆಕ್ಷೇಪಣೆ ಇಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಸಂಬಂಧ ಸಂಪುಟ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೆ ಕೇಸ್ ಗಳನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ತನಿಖಾ ಹಂತದಲ್ಲಿ ಕೇಸ್ ವಾಪಸ್ ಪಡೆಯಲಾಗದು‌. ಹೀಗಾಗಿ ಜಾಮೀನಿಗೆ ವಿರೋಧ ವ್ಯಕ್ತಪಡಿಸದಿರಲು ತೀರ್ಮಾನಿಸಲಾಗಿತ್ತು. ಹೀಗಾಗಿ ಜಾಮೀನು ಸಿಕ್ಕಿದೆ.

ಬೆಂಗಳೂರಿನಲ್ಲಿ ರಾಜ ಕಾಲುವೆಗಳ ಒತ್ತುವರಿ ಸಂಬಂಧ ಹಾಲಿ ಮತ್ತು ನಿವೃತ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತನಿಖೆ ಇನ್ನೂ ನಡೆಯುತ್ತಿದ್ದು, ಅಧಿಕಾರಿಗಳು, ಬಿಲ್ಡರ್, ಡೆವಲಪರ್ ಗಳು ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಅವರು ಎಷ್ಟೇ ದೊಡ್ಡವರಾದರೂ ಕ್ರಮ ಕೈಗೊಳ್ಳಲಾಗುವುದು.

ಮೈಸೂರಿನ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟಿಸಿದ ಹಿನ್ನೆಲೆಯಲ್ಲಿ ರಾಜ್ಯಾದಂತ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಮೈಸೂರು ದಸರಾ ಉತ್ಸವಕ್ಕೂ ಬಿಗಿ ಬಂದೋಬಸ್ತ್ ಏರ್ಪಡಿಸಲು ಆದೇಶಿಸಿದೆ ಎಂದು ಸಿ.ಎಂ ತಿಳಿಸಿದರು.