ಜಾರ್ಜ್ ಗೆ ಬಿ ರಿಪೋರ್ಟ್: ಹುಬ್ಬಳ್ಳಿಯಲ್ಲಿ ಶೆಟ್ಟರ್ ಚಾರ್ಜ್

0
439

ಮಾಜಿ ಸಚಿವ ಕೆ.ಜೆ ಜಾರ್ಜ್ ಗಾಗಿ ಸಿಐಡಿ ಇಷ್ಟು ಬೇಗ ಬಿ ರಿಪೋರ್ಟ್ ನೀಡುವ ಮೂಲಕ ತನಿಖೆ ಹಾದಿ ತಪ್ಪಿಸಲಾಗಿದೆ. ಈ ಮೂಲಕ ಸಿಎಂ ಜನತೆಗೆ ಅನ್ಯಾಯ ಎಸಗಿದ್ದಾರೆ ಎಂದು ವಿಧಾನ ಸಭೆ ವಿರೋಧ ವಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ  ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್  ಅವರನ್ನ ಬಚಾವ್ ಮಾಡಲು ತರಾತುರಿಯ ಬಿ ರಿಪೋರ್ಟ್ ತಯಾರಿಸಲಾಗಿದೆ. ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೊರ್ಟ್ ಹಾಕಲಾಗಿದೆ. ಈ ತನಿಖೆಯ ಎಲ್ಲಾ ದಾಖಲೆ ಗಳನ್ನ ಬಹಿರಂಗಪಡಿಸಬೇಕು ಎಂದು ಶೆಟ್ಟರ್ ಆರೋಪಿಸಿದರು.

ನಮಗೆ ಸಿಐಡಿ ತನಿಖೆ ಮೇಲೆ ನಂಬಿಕೆಯೇ ಇರಲಿಲ್ಲ. ನಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದೆವು. ಇದರಿಂದ ಸರ ಕಾರವೇ ಜಾರ್ಜ್ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ ಎಂದು ಶೆಟ್ಟರ್ ಹೇಳಿದರು.

ಡಾ.ಎಂ ಎಂ. ಕಲಬುರ್ಗಿ ಹತ್ಯೆಯಾಗಿ ವರ್ಷವಾಗಿದೆ- ಇನ್ನೂ ತನಿಖೆ ಪೂರ್ಣವಾಗಿಲ್ಲ. ಆದರೆ ಗಣಪತಿ ಆತ್ಮ ಹತ್ಯೆ ಪ್ರಕರಣದಲ್ಲಿ ಕೆಲವೇ ತಿಂಗಳಲ್ಲಿ ವರದಿ ಸಲ್ಲಿಸಿ ಸಿಐಡಿ ಅಂದ್ರೇ ಕಾಂಗ್ರೆಸ್ ಇನ್ವೆಷ್ಟಿಗೇಷನ್ ಡಿಪಾರ್ಟ್ ಮೆಂಟ್  ಎಂದು ಸಾಬೀತುಪಡಿಸಿದೆ ಎಂದರು.

ಸಿದ್ದು ಪುತ್ರನ ಮೇಲೆ ಗುದ್ದು

ಮೈಸೂರಿನಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಅಧಿಕಾರಿ ಗಳ ಸಭೆ ನಡೆಸ್ತಿದ್ದಾರೆ- ಸಿಎಂ ಪುತ್ರ ಯಾವ ಜನಪ್ರತಿ ನಿಧಿ? ಸಿಎಂ ತಮ್ಮ ಪುತ್ರನಿಗೆ ಸಭೆ ನಡೆಸಲು ಅಧಿಕಾರ ಕೊಟ್ಟಿದ್ದಾರೆಯೇ ?- ಸಂಸದ ಪ್ರಹ್ಲಾದ್ ಜೋಶಿಯವರು ಪಾಲಿಕೆ ಅಧಿಕಾರಿಗಳ ಸಭೆ ಮಾಡಿದ್ರೇ ಪ್ರಶ್ನೆ ಮಾಡ್ತೀರಿ- ಸಿಎಂ ಪುತ್ರ ಅಧಿಕಾರಿಗಳ ಸಭೆ ನಡೆಸೋದು ಸರಿಯಾ? ಎಂದು ಶೆಟ್ಟರ್ ಕಿಡಿಕಾರಿದರು.

ಪರಂ ಮೇಲೆ ಗರಂ

ಕಾವೇರಿ ಗಲಭೆಗೆ ಆರ್ ಎಸ್ಎಸ್ ಕೈವಾಡದ ಶಂಕೆ ಬಗ್ಗೆ ಗೃಹ‌ ಸಚಿವರಾಗಿ ಡಾ.ಜಿ. ಪರಮೇಶ್ವರ ಈ ಹೇಳಿಕೆ ನೀಡಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ರಾಜಕೀಯ ಹೇಳಿಕೆ ನೀಡುವ ಅವರು ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೇಳಿಕೆ ನೀಡಲಿ. ತಮ್ಮ ವೈಫಲ್ಯ ಮರೆ ಮಾಡಲು ರಾಷ್ಟದ ಜಾಗೃತಿ ಮೂಡಿಸೋ ಆರ್ ಎಸ್ ಎಸ್ ಮೇಲೆ ಆರೋಪ- ಈ ಬಗ್ಗೆ ದಾಖಲೆ ಇದ್ರೇ ಪರಮೇಶ್ವರ ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಶೆಟ್ಟರ್ ಆಗ್ರಹಿಸಿದರು.