ರಿಲಯನ್ಸ್ ಜಿಯೋ ಗ್ರಾಹಕರಿಗೆ ವೆಲಕಂ ಆಫರ್ ಮಾರ್ಚ್ 2017ರವರೆ ವಿಸ್ತರಿಸಲಾಗಿದೆ.!

0
1199

ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದಲೂ ಧೂಳೆಬ್ಬಿಸಿರುವ ರಿಲಯನ್ಸ್‌ 4ಜಿ ಜಿಯೋ ಕಂಪನಿಯ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್ ನೀಡಲು ಮುಂದಾಗಿದೆ. ಡಿಸೆಂಬರ್ 31 ಅಂತ್ಯವಾಗಬೇಕಿದ್ದ ವೆಲಕಂ ಆಫರ್ ಮಾರ್ಚ್ 2017ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ.

ರಿಲಾಯನ್ಸ್‎ನ ಜಿಯೋ 100 ಮಿಲಿಯನ್ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದುವುದು ಅಂಬಾನಿ ಅವರ ಲೆಕ್ಕಾಚಾರ. ಹಾಗಾಗಿ ಡಿಸೆಂಬರ್ ನಂತರದ ಮೇಲೂ ಉಚಿತ 4G ಡೇಟಾ ಬಳಕೆಯನ್ನು ಮಾರ್ಚ್ 2017 ರ ತನಕ ವೆಲಕಂ ಆಫರ್ ಗಳನ್ನು ವಿಸ್ತರಿಸಲಿದೆ ಎಂದು ಕಂಪನಿಯು ತಿಳಿಸಿದೆ. ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಉದ್ಘಾಟನೆಗೊಳಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಡಿಸೆಂಬರ್ 31ರವರೆಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದರು. ಆದರೆ ಈಗ ಈ ವೆಲಕಂ ಆಫರ್ ಅನ್ನು ಮಾರ್ಚ್‍ವರೆಗೆ ವಿಸ್ತರಿಸಲು ಜಿಯೋ ಮುಂದಾಗಿದೆ ಎಂದು ಕಂಪೆನಿಗಳು ತಿಳಿಸಿವೆ. ಗ್ರಾಹಕರ ಪಾಲಿಗೆ ‘ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದು ಹಾಲು ಅನ್ನಾ’ ಅನ್ನುವ ಹಾಗೆ ಆಗಿದೆ.

ಈ ಹಿಂದೆ ತರಂಗಾಂತರ ಪ್ರಸಾರದಲ್ಲಿ ಹೊಂದಾಣಿಕೆಗೆ ಪ್ರತಿಸ್ಪರ್ಧಿಗಳು ಸಹಕರಿಸದೇ ಇದ್ದಿದ್ದರಿಂದ ಜಿಯೊ 4ಜಿ ಡಾಟಾ ದೇಶದಲ್ಲೇ ಅತ್ಯಂತ ಕಳಪೆ ಡೌನ್‌ಲೋಡಿಂಗ್ ಮತ್ತು ಅಪ್‌ಲೋಡಿಂಗ್ ಎಂಬ ಆರೋಪಕ್ಕೆ ಗುರಿಯಾಗಿತ್ತು. ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಟ್ರಾಯ್ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು. ಈ ದೂರಿನ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಟ್ರಾಯ್ ಜಿಯೋದ 90 ದಿನಗಳ ಪ್ರಮೋಷನಲ್ ಆಫರ್ ಟ್ರಾಯ್ ನಿಯಮಕ್ಕೆ ಅನುಗುಣವಾಗಿದೆ ಎಂದು ಸ್ಟಷ್ಟಪಡಿಸಿತ್ತು. ಟೆಲಿಕಾಂ ಕಂಪೆನಿಗಳು ಒಂದು ನಿಮಿಷದ ಒಂದು ಕರೆಗೆ 14 ಪೈಸೆ ಆಗುತ್ತದೆ. ಆದರೆ ಜಿಯೋ ಈ ನಿಯಮವನ್ನೇ ಉಲ್ಲಂಘಿಸಿ ಕರೆಯನ್ನೇ ಉಚಿತ ನೀಡುತ್ತಿದೆ ಎಂದು ಆರೋಪಿಸಿತ್ತು.