ಝಿಕಾ ನಿಯಂತ್ರಣಕ್ಕೆ ಕರುಳುಬಳ್ಳಿ ಹುಳಗಳ ಚಿಕಿತ್ಸೆ?!

0
938

download

ನವದೆಹಲಿ: ಮಾರಣಾಂತಿಕ ಝಿಕಾ ವೈರಸ್ ರೋಗವನ್ನು ಮಾನವನ ಕರುಳಿನಲ್ಲಿರುವ ಹುಳಗಳಿಂದಲೂ ಗುಣಪಡಿಸಬಹುದು ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಹಾಲಿ ಇರುವ ಕೆಲವೊಂದು ಔಷಧಗಳ ಹೊರತಾಗಿ ಕರುಳಿನ ಹುಳಗಳ ಮುಖೇನ ಚಿಕಿತ್ಸೆ ನೀಡುವ ಮೂಲಕ ರೋಗ ಮರುಕಳಿಸುವುದನ್ನು ತಪ್ಪಿಸಬಹುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಈ ವಿನೂತನ ಸಂಶೋಧನೆ ಝಿಕಾ ರೋಗ ತಡೆಗಟ್ಟುವಲ್ಲಿ ಮಹತ್ವದ ಪರಿಣಾಮ ಬೀರುವ ಸಂಭವವಿದೆ.

ಔಷಧಗಳ ಸಮೂಹ ಚಿಕಿತ್ಸೆ ಮೂಲಕ ಝಿಕಾ ರೋಗ ಮರುಕಳಿಸುವುದನ್ನು ತಡೆಯಬಹುದು ಹಾಗೂ ರೋಗ ಮರುಕಳಿಸುವುದನ್ನು ತಡೆಗಟ್ಟಿ ನವಜಾತ ಶಿಶುಗಳಲ್ಲಿ ಕಂಡುಬರುವ ಜನನ ದೋಷ ತಪ್ಪಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯಾದ ನಿಕೊಲ್ಸಾಮೈಡಿ ಈಗಾಗಲೇ ಕರುಳುಬಳ್ಳಿಯ ಹುಳಗಳನ್ನು ಬಳಸುವ ಚಿಕಿತ್ಸೆಗೆ ಅನುಮೋದನೆ ನೀಡಿದೆ. ಇಂಥ ಚಿಕಿತ್ಸೆಯಿಂದ ಗರ್ಭಿಣಿ ಮಹಿಳೆಯರಿಗೆ ಯಾವುದೇ ಅಪಾಯವಿಲ್ಲದಿರುವುದು ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನದಿಂದ ದೃಢವಾಗಿದೆ. ಈ ರೀತಿಯ ಥೆರಪಿಟಿಕ್ ಚಿಕಿತ್ಸೆಯು ರೋಗ ತಡೆಗಟ್ಟುವಲ್ಲಿ ಮೊದಲ ಹಂತದ ಕ್ರಮವಾಗುತ್ತಿದೆ ಎಂದು ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೆಂಗ್ಲಿ ತಾಂಗ್ ವಿವರಿಸಿದ್ದಾರೆ. ಈ ಹೊಸ ಔಷಧವನ್ನು ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಹೊಂಗ್‍ಜುನ್ ಸಾಂಗ್ ಹೇಳಿದ್ದಾರೆ.

zika_1