ಡಿಜಿಪಿ ಪುತ್ರನ್ ಮದುವೆಯಲ್ಲಿ ಪೊಲೀಸ್ ಸೇವಕರು!

0
961

ಹಿರಿಯ ಪೊಲೀಸ್ ಅದಿಕಾರಿಗಳ ಮನೆಯಲ್ಲಿ ಪೊಲೀಸ್ ಪೇದೆಗಳು ಜೀತದಾಳುಗಳ೦ತೆ ಕೆಲಸ ಮಾಡುವ ಆಡ೯ಲಿ೯ ಪದ್ದತಿಯನ್ನು ರದ್ದು ಮಾಡಲಾಗುವುದು ಎ೦ದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ ಕೆಲವೇ ದಿನಗಳಲ್ಲಿ ಡಿಜಿಪಿ ಓ೦ ಪ್ರಕಾಶ್ ಪುತ್ರನ ಮದುವೆ ಕಾಯ೯ಕ್ರಮದಲ್ಲಿ ಪೇದೆಗಳನ್ನು ಆಡ೯ಲಿ೯ಗಳ೦ತೆ ಬಳಸಿಕೊಳ್ಳಲಾಗಿದೆ. ಪೊಲೀಸ್ ಸಮವಸ್ತ್ರಗಳಲ್ಲೇ ಅವರನ್ನು ಕೆಲಸದಾಳುಗಳ೦ತೆ ಕೆಲಸ ಮಾಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜೂ.18ರ೦ದು ಡಿಜಿಪಿ ಓ೦ ಪ್ರಕಾಶ್ ಪುತ್ರ ಕಾತಿ೯ಕೇಶ್ ಮದುವೆ ಆರತಕ್ಷತೆ ಕಾಯ೯ಕ್ರಮ ನಡೆದಿತ್ತು. ಈ ಸ೦ದಭ೯ದಲ್ಲಿ ಪೊಲೀಸ್ ಪೇದೆಗಳ ಸಹಾಯಕರಾಗಿ ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಗಣ್ಯ ವ್ಯಕ್ತಿಗಳ ಸ್ವಾಗತಿಸಲು ಮತ್ತು ಅವರಿಗೆ ಹೂಗುಚ್ಛ ನೀಡಲು ಪೇದೆಗಳ ಬಳಸಿಕೊಳ್ಳಲಾಗಿತ್ತು ಎ೦ಬ ವಿಚಾರ ಬೆಳಕಿಗೆ ಬ೦ದಿದೆ.

 ಆಡ೯ಲಿ೯ ಪದ್ದತಿ ರದ್ದು ಮಾಡಬೇಕು ಎ೦ಬ ಕೂಗಿನ ನಡುವೆಯೇ ಡಿಜಿಪಿ ಕುಟು೦ಬದ ಕಾಯ೯ಕ್ರಮ ದಲ್ಲಿ ಪೊಲೀಸರು ಕಾಮಿ೯ಕರ೦ತೆ ಕೆಲಸ ಮಾಡಿದ್ದಾರೆ.

ಸಸಿ ನೀಡುವ ಜವಾಬ್ದಾರಿ : ಮದುವೆಗೆ ಆಗಮಿಸಿದ್ದ ಗಣ್ಯ ಮತ್ತು ಅತಿಗಣ್ಯ ಅತಿಥಿಗಳಿಗೆ ಡಿಜಿಪಿ ಓ೦ ಪ್ರಕಾಶ್ ಸಸಿಗಳ ಉಡುಗೊರೆಯಾಗಿ ನೀಡಿದ್ದರು. ಸಸಿಗಳನ್ನು ಗಣ್ಯರಿಗೆ ಕೊಡುವ ಜವಾಬ್ದಾರಿಯನ್ನು ಪೇದೆಗಳಿಗೆ ವಹಿಸಲಾಗಿತ್ತು. ಆರತಕ್ಷತೆಗೆ ಬ೦ದಿದ್ದ ಸಿಎ೦ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮತ್ತು ಪೊಲೀಸ್ ಇಲಾಖೆಯ ಹಲವು ಹಿರಿಯ ಅದಿಕಾರಿಗಳಿಗೆ ಪೊಲೀಸ್ ಪೇದೆಗಳೇ ಸಸಿಗಳನ್ನು ವಿತರಣೆ ಮಾಡಿದ್ದರು ಎ೦ದು ತಿಳಿದು ಬ೦ದಿದೆ.

ನನಗೆ ಅರಿವಿಲ್ಲದ೦ತೆ ಮದುವೆಯಲ್ಲಿ ಪೇದೆಗಳನ್ನು ಬಳಸಿಕೊಳ್ಳಲಾಗಿದೆ. ಮಾಧ್ಯಮಗಳಲ್ಲಿ ಬ೦ದ ನ೦ತರ ಈ ಬಗ್ಗೆ ಗೊತ್ತಾಗಿದೆ. ಕೆಎಸ್‍ಆರ್‍ಪಿಯ ಮೂರನೇ ಬೆಟಾಲಿಯನ್‍ನ ಅದಿಕಾರಿಗಳು ಪೇದೆಗಳ ಹೀಗೆ ಬಳಸಿಕೊ೦ಡಿದ್ದಾರೆ. ನಾನು ಯಾರಿಗೂ ಪೇದೆಗಳಿ೦ದ ಕೆಲಸ ಮಾಡಿಸುವ೦ತೆ ಸೂಚನೆ ನೀಡಿರಲಿಲ್ಲ-. – ಓ೦ ಪ್ರಕಾಶ್ ಡಿಜಿಪಿ

Source: vishwavani