ಡಿವೈಎಸ್ಪಿ ಕಲ್ಲಪ್ಪ ಅವರ ಕುಟುಂಬ ಇಂದು ಮುಖ್ಯಮಂತ್ರಿಗಳನ್ನು ಬೇಟಿಯಾಗಿದ್ದರು.

0
1011

 

ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಅವರ ಕುಟುಂಬದವರು ಮುಖ್ಯಮಂತ್ರಿಗಳನ್ನು ಸೋಮವಾರ ಭೇಟಿಯಾಗಿದ್ದರು. ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಕುಟುಂಬದವರು ಕಲ್ಲಪ್ಪ ಅಮಾಯಕ. ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಕಲ್ಲಪ್ಪ ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಈಗಾಗಲೇ ಭರವಸೆ ನೀಡಿದ್ದೇನೆ ಅದರಂತೆ ಶೀಘ್ರದಲ್ಲೇ ನೌಕರಿಗೆ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಕಲ್ಲಪ್ಪ ಅವರ ಸಹೋದರನಿಗೆ ಸಹಕಾರ ಸಂಘವೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ಇದೇ ವೇಳೆ ಶಾಸಕ ಎಸ್.ಟಿ. ಸೋಮಶೇಖರ್ ಆಶ್ವಾಸನೆ ನೀಡಿದರು. ಕಲ್ಲಪ್ಪ ಅವರ ಪತ್ನಿ ವಿದ್ಯಾ, ಅವರ ತಂದೆ ಮತ್ತು ತಾಯಿ, ಕಲ್ಲಪ್ಪ ಅವರ ತಂದೆ, ತಾಯಿ, ಸಹೋದರ, ಸಹೋದರಿ ಇದ್ದರು. ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಸಹ ಹಾಜರಿದ್ದರು.

WhatsApp-Image-20160725

WhatsApp-Image-20160725 (1)

WhatsApp-Image-20160725 (2)

WhatsApp-Image-20160725 (3)