ಕುಂಬ್ಳುಕಾಯಿ ಕಳ್ಳ ಅಂದ್ರೆ ಹೆಗ್ಲು ಮುಟ್ಕೊಂಡ್ರು ಡಿ.ಕೆ.ಶಿ

0
1683

 

ಧ್ವಜಾರೋಹಣ ನೆರವೇರಿಸಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ಬಹುಮಾನ ವಿತರಿಸುತ್ತಿದ್ದ ವೇಳೆ ಮಕ್ಕಳು, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಚಿತ್ರದ ‘ಹುಟ್ಟೋದ್ಯಾಕೆ ಸಾಯೋದ್ಯಾಕೆ’ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ನಡೆದ 70 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾರದಾ ಸಂಸ್ಥೆಯ ಮಕ್ಕಳು ಮಾಡುತ್ತಿದ್ದ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ, ಡಿವೈಎಸ್ಪಿ ಗಳಾದ ಕಲ್ಲಪ್ಪ ಹಂಡಿಭಾಗ್ ಹಾಗೂ ಎಂ.ಕೆ. ಗಣಪತಿಯವರ ಭಾವಚಿತ್ರಗಳನ್ನು ಮಕ್ಕಳು ಹಿಡಿದುಕೊಂಡಿದ್ದು, ಇದು ಸಚಿವರನ್ನು ಇರುಸುಮುರುಸಿಗೊಳಗಾಗುವಂತೆ ಮಾಡಿತೆನ್ನಲಾಗಿದೆ.

ಕೂಡಲೇ ಮಕ್ಕಳ ನೃತ್ಯವನ್ನು ನಿಲ್ಲಿಸುವಂತೆ ಸೂಚಿಸಿದ ಡಿ.ಕೆ. ಶಿವಕುಮಾರ್, ಡಿಡಿಪಿಐ ಶಿವಮಾದಪ್ಪರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರೆಂದು ಹೇಳಲಾಗಿದೆ.

ಮಕ್ಕಳು ಕನ್ನಡ ಚಿತ್ರದ ಹುಟ್ಟೋದ್ಯಾಕೆ ..ಸಾಯೋದ್ಯಾಕೆ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದರು.