ಡಿ.30 ರೊಳಗೆ 5000 ಮೇಲೆ ಹಳೇ ನೋಟು ಒಮ್ಮೆ ಮಾತ್ರ ಬ್ಯಾಂಕ್‍ಗೆ ಜಮೆ ಮಾಡಬಹುದು!

0
689

ನವದೆಹಲಿ: ಹಳೇ ನೋಟುಗಳ ಜಮಾ ಕುರಿತಂತೆ ತನ್ನ ಮತ್ತಷ್ಟು ನಿಯಂತ್ರಣ ಜಾರಿಗೊಳಿಸಿರುವ ರಿಸರ್ವ್ ಬ್ಯಾಂಕ್‍ ಆಫ್‍ ಇಂಡಿಯಾ ಡಿಸೆಂಬರ್‍ 30ರವರೆಗೆ 5000 ಮೇಲೆ ಹಳೆ ನೋಟುಗಳನ್ನು ಒಮ್ಮೆ ಮಾತ್ರ ತಮ್ಮ ಖಾತೆಯಲ್ಲಿ ಜಮೆ ಮಾಡಿಕೊಳ್ಳಬಹುದು ಎಂದು ಆದೇಶ ಹೊರಡಿಸಿದೆ.

ಒಂದು ವೇಳೆ ಗ್ರಾಹಕರು ತನ್ನ ಖಾತೆಯಲ್ಲಿ 5000 ಮೇಲಿದ್ದ ಹಳೇ ನೋಟು ಜಮೆ ಮಾಡಬೇಕಾದರೆ ಬ್ಯಾಂಕ್‍ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ನೀಡಬೇಕು, ಮತ್ತು ಅವರಿಗೆ ಸಮ್ಮತಿ ಅನಿಸಿದರೆ ಮಾತ್ರ ಜಮೆ ಮಾಡಬಹುದು ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ,

ನವೆಂಬರ್‍ 8 ರಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಮತ್ತು 1000 ನೋಟುಗಳ ರದ್ದು ಮಾಡಿದ ನಂತರ ಒಂದು ತಿಂಗಳ ಅವಕಾಶ ನೀಡಿದ್ದು, ಅದು ಡಿಸೆಂಬರ್‍ 30ಕ್ಕೆ ಅಂತ್ಯಗೊಳ್ಳಲಿದೆ,

ಡಿಸೆಂಬರ್‍ 30ರವರೆಗೆ ಹಳೇ ನೋಟುಗಳನ್ನು ಜಮೆ ಮಾಡಲು ಮಾತ್ರ ಈಗ ಅವಕಾಶ ಇದ್ದು, ಬದಲಾವಣೆ ಮಾಡುವಂತಿಲ್ಲ. ಪೆಟ್ರೋಲ್‍ ಬಂಕ್ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಬಿಲ್‍ ಪಾವತಿಗೆ ಇದ್ದ ಅವಕಾಶ ಕೂಡ ಡಿ,15ಕ್ಕೆ ಅಂತ್ಯಗೊಂಡಿದೆ,

ಈ ಎಲ್ಲಾ ಅವಕಾಶಗಳು ಮುಗಿದ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಲ್ಲಿ ಹಳೆ ನೋಟುಗಳ ಜಮೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ, ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ ಹಣದ ಪ್ರಮಾಣ ಹೆಚ್ಚಾಗಿದೆ. ಇದರಿಂದ ಈ ಹೊಸ ನಿಯಮ ಜಾರಿಗೆ ತಂದಿದ್ದು, 5000ಗಿಂತ ಕಡಿಮೆ ಇದ್ದಲ್ಲಿ ಪ್ರತಿದಿನ ಕೂಡ ಪಾವತಿಸಬಹುದಾಗಿದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ,

ಸುಮಾರು 15.44 ಲಕ್ಷ ಕೋಟಿಯಷ್ಟು ಹಳೆ ನೋಟುಗಳು ಚಲಾವಣೆಯಲ್ಲಿದ್ದು, ಶೇ. 86ರಷ್ಟು ಹಣ ಅಂದರೆ 13 ಲಕ್ಷದಷ್ಟು ಹಣ ಬ್ಯಾಂಕ್‍ಗಳಿಗೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.